ಸಿದ್ದರಾಮಯ್ಯನ ಒನ್ ಸೈಡ್ ಬಜೆಟ್ ಉತ್ತರ ಕರ್ನಾಟಕಕ್ಕೆ ಅನ್ಯಾಯ – ಬೆಳಗಾವಿಯ ನೆನಪೇ ಇಲ್ಲ , ರಾಜಶೇಖರಯ್ಯಾ ಹಿರೇಮಠ

0
74

 

ಬೆಳಗಾವಿ:13 ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯನವರು ಶುಕ್ರವಾರದಂದು ಮಂಡಿಸಿದ 2015-16ನೇ ಸಾಲಿನ ಬಜೆಟ್ ಉತ್ತರ ಕರ್ನಾಟಕ್ಕೆ ಸಂಪೂರ್ಣ ಅನ್ಯಾಯ ವೆಸಗಿದ್ದರೇ, ಎರಡನೇ ರಾಜಧಾನಿಯ ಪಟ್ಟದಲ್ಲಿರುವ ಬೆಳಗಾವಿಯ ನೆನಪಿಲ್ಲದೆ ಕೇವಲ ದಕ್ಷಿಣ ಕರ್ನಾಟಕದ ಒನ್‍ಸೈಡ್ ಬಜೆಟ್ ಮಂಡಿಸಿ ಮತ್ತೇ ಸಿದ್ದು ಸರಕಾರ ಉತ್ತರ ಕರ್ನಾಟಕದ ವಿರೋಧಿ ಸರಕಾರ ಎನ್ನುವುದನ್ನು ಸಾಬೀತುಪಡಿಸಿತು.
ಸಂಪ್ರದಾಯದಂತೆ ಬೆಳಗಾವಿ ಮಹಾನಗರ ಪಾಲಿಕೆಗೆ 100 ಕೋಟಿ, ಸಂಗೊಳ್ಳಿರಾಯಣ್ಣ ಪೀಠ ಸ್ಥಾಪನೆಗೆ 10 ಕೋಟಿ ಮಿಸಲು ಇದಿಷ್ಟು ಪ್ರಸಕ್ತ ಬಜೆಟ್‍ನಲ್ಲಿ ಬೆಳಗಾವಿಗೆ ನೀಡಿದ ವಿಶೇಷ ಕೊಡುಗೆಯಾಗಿದೆ.
ಇನ್ನು ಉತ್ತರ ಕರ್ನಾಟಕದ ವ್ಯಾಪ್ತಿಗೆ ಸಿಕ್ಕಿದ್ದೇನು ಎನ್ನುವ ಲೆಕ್ಕಾಚಾರ ಮಾಡಿದರೆ, ವಿಜಯಪುರ – ಮೈಸೂರು ಸೇರಿ ಅಭಿವೃದ್ಧಿಗೆ 10 ಕೋಟಿ. ಗದನಲ್ಲಿ ಆಯುಷ್ಯ ಆಸ್ಪತ್ರೆ. ಬಾಗಲಕೋಟೆಯಲ್ಲಿ ಐಟಿ ಸ್ಥಾಪನೆ, ಹಾವೇರಿ ತಾಲೂಕಿನ ದೇವಿಹೊಸೂರನ ಗ್ರಾಮದಲ್ಲಿ ತೋಟಗಾರಿಕೆ ಕಾಲೇಜ್, ಕಲಬುರ್ಗಿಯಲ್ಲಿ 15 ಕೋಟಿ ವೆಚ್ಚದಲ್ಲಿ ಹೃದಯ ರೋಗ ಚಿಕಿತ್ಸಾ ಘಟಕ, ರೈತ ಸಂಪರ್ಕ ಕೇಂದ್ರಗಳು, ಒಂದು ಜವಳಿ ಪಾರ್ಕ ಬಿಟ್ಟರೆ, ಮತ್ತೇನು ಕೊಡುಗೆ ಇಲ್ಲ.
ಮಂಡಿಸಲಾದ ಪ್ರಸಕ್ತ ಬಜೆಟ್ ಕೇವಲ ದಕ್ಷಣ ಕರ್ನಾಟಕವನ್ನು ಗುರಿಯಾಗಿಟ್ಟುಕೊಂಡು ಮಂಡಿಸಿದ ಬಜೆಟ್‍ಆಗಿದೆ. ಕೇಂದ್ರ ಸರಕಾರ ಕರ್ನಾಟಕ್ಕೆ ನೀಡಿದ ಐಐಟಿ ಬೆಳಗಾವಿ ಅಥವಾ ಉತ್ತರ ಕರ್ನಾಟಕ್ಕೆ ದಕ್ಕೂವುದು ಬಲು ದೂರದ ಮಾತಾಗಿದೆ.
ಕಳೆದ ಎರಡೂ ಹಾಗೂ ಪ್ರಸಕ್ತ ಮಂಡಿಸಿದ ಬಜೆಟ್ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಸುತ್ತು ಹೋಡೆದಿವೆ. ಉತ್ತರ ಕರ್ನಾಟಕ ಸರಕಾರದ ಲೆಕ್ಕಿಲ್ಲ. ಬೆಳಗಾವಿಯಲ್ಲೊಂದು ಸುವರ್ಣ ವಿಧಾನ ಸೌಧವಿದೆ ಎನ್ನುವ ಪರಿಜ್ಷಾನ ಕೂಡಾ ಸಿದ್ದರಾಮಯ್ಯನಿಗಿಲ್ಲ. ಬೆಳಗಾವಿ ಎರಡನೇ ರಾಜಧಾನಿಯಾಗುವುದು ಸುವರ್ಣ ವಿಧಾನ ಸೌಧಕ್ಕೆ ಸರಕಾರದ ಪ್ರಮುಖ ಇಲಾಖೆಗಳು ಸ್ಥಳಾಂತರವಾಗುವುದು ಮತ್ತು ಐಐಟಿ ಸ್ಥಾಪನೆಯಾಗುವುದು ಕನಸಿನ ಮಾತಾಗಿದೆ.
ಬಹುತೇಕ ಕಾಂಗ್ರೆಸ್ ಸರಕಾರ ಮತ್ತು ಸಿದ್ದರಾಮಯ್ಯನವರು ಉತ್ತರ ಕರ್ನಾಟಕವನ್ನು ಹೋರಾಟಕ್ಕಾಗಿಯೇ ಬಿಟ್ಟಂತಿದೆ. ಈ ಭಾಗಕ್ಕೆ ಏನಾದರೂ ಬೇಕು ಎಂದಾದಾಗ ಹೋರಾಟ ಮಾಡಿದರೂ ಪ್ರಯೋಜನವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬೆಳಗಾವಿ ನಗರದ ವಿಷಯಕ್ಕೆ ಬಂದರೆ ಮಹಾನಗರ ಪಾಲಿಕೆ ಒಟ್ಟಾರೆ ಅಭಿವೃದ್ಧಿಯ ಲೆಕ್ಕಾಚಾರ ಹಾಕಿ 2 ಸಾವಿರ ಕೋಟಿ ವರೆಗೆ ಅಭಿವೃದ್ಧಿ ಅಂದಾಜು ಪ್ರಸ್ತಾವನೆ ಸಿದ್ದಪಡಿಸಿ ಬಜೆಟ್ ನಲ್ಲಿ ಕನಿಷ್ಟ ಒಂದರಿಂದ ಒಂದೂವರೆ ಸಾವಿರ ಕೋಟಿ ರೂ,ಗಳಷ್ಟು ಅನುದಾನ ಸುಗಬಹುದು ಎನ್ನುವ ನಿರೀಕ್ಷೆಗೆ ಸಿದ್ದರಾಮಯ್ಯನ ಬಜೆಟ್ ತಣ್ಣಿರೇರಚಿದೆ.

ಬಾಕ್ಸ

“ಪ್ರಸಕ್ತ ರಾಜ್ಯ ಸರಕಾರದ ಬಜೆಟ್ ಬೆಳಗಾವಿಗೆ ಮತ್ತು ಸಮಗ್ರ ಉತ್ತರ ಕರ್ನಾಟಕ್ಕೆ ಶೂನ್ಯವನ್ನೇ ಕೊಡಮಾಡಿದೆ. ಉತ್ತರ ಕರ್ನಾಟಕದ ಪ್ರಗತಿಯ ಬಗ್ಗೆ ಗಮನ ಹರಿಸಿಲ್ಲ. ಬೆಳಗಾವಿಗೆ ಮತ್ತು ಉತ್ತರ ಕರ್ನಾಟಕ್ಕೆ ಬೇಕೆಂದಿದ್ದ ಯಾವುದೇ ಯೋಜನೆಗಳು ತಲುಪಿಲ್ಲ. ಹಿಂದಿನ ಬಜೆಟ್ ಘೋಷಣೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಎಲ್ಲವನ್ನು ಗಮನಿಸಲಾಗಿ ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯನವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಇದನ್ನು ಈ ಭಾಗದ ಜನ ಚಿಂತಿಸುವ ಅಗತ್ಯತ್ಯೆ ಇಂದಿನ ಸ್ಥಿತಿಯಾಗಿದೆ. ಪ್ರತ್ಯೇಕ ಉತ್ತರ ಕರ್ನಾಟಕ ಒಂದೇ ಈ ಭಾಗದ ಅಭಿವೃದ್ಧಿಗೆ ಸೂಕ್ತ ಮಾರ್ಗ”
ಅಭಯ ಪಾಟೀಲ
ಬಿಜೆಪಿ ಮಾಜಿ ಶಾಸಕ

ಪ್ರಸಕ್ತ ಬಜೆಟ್ ಬೆಳಗಾವಿ ಜಿಲ್ಲೆ ಹಾಗೂ ಸಮಗ್ರ ಉತ್ತರ ಕರ್ನಾಟಕವನ್ನು ಕಡೆಗಣಿಸಿದ ಬಜೆಟ್ ಆಗಿದೆ. ಗೊತ್ತು ಗುರಿ ಇಲ್ಲದ ಪ್ರಗತಿಯ ಮಾರ್ಗಸೂಚಿಗಳಿಲ್ಲದ ಕಾಂಗ್ರೆಸ್ ಬಜೆಟ್ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಈ ಭಾಗಕ್ಕೆ ಸಿಗಬೇಕಾಗಿದ್ದ ಹೊಸ ಯೋಜನೆಗಳು ದಕ್ಷಿಣ ಕರ್ನಾಟಕದ ಪಾಲಾಗಿವೆ. ರೈತರ, ಕೂಲಿ ಕಾರ್ಮಿಕರ, ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಮನಬಂದಂತೆ ಸ್ವಾರ್ಥಕ್ಕಾಗಿ ರೂಪಿಸಿದ ಬಜೆಟ್ ಇದಾಗಿದೆ. ಅಖಂಡ ಕರ್ನಾಟಕದ ಪರಿಕಲ್ಪನೆಯ ಬಜೆಟ್ ಇದಲ್ಲ.

ಲಕ್ಷ್ಮಣ ಸವದಿ
ಮಾಜಿ ಸಚಿವ, ಹಾಲಿ ಶಾಸಕ.
“2015 -16 ರ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಬೆಳಗಾವಿಯ ಅಭಿವೃದ್ಧಿಗೆ, ಹೊಸ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ದಕ್ಷಿಣ ಕರ್ನಾಟಕ ಮಾತ್ರ ಸಮಗ್ರ ಕರ್ನಾಟಕ ಎನ್ನುವ ಭ್ರಮೆಯ ಬಜೆಟ್ ಇದಾಗಿದೆ. ರೈತರ, ಕೃಷಿಕೂಲಿ ಕಾರ್ಮಿಕರ, ನೇಕಾರರ ಹಿತವನ್ನು ಕಡೆಗಣಿಸಿ ಅಗತ್ಯ ವಸ್ತುಗಳ ತೆರಿಗೆ ಉದ್ದೇಶ ಪೂರ್ವಕವಾಗಿ ಹೆಚ್ಚಳಮಾಡಲಾಗಿದೆ. ಜನರಿಗೆ ಹೊರೆಯಾಗುವ, ಪ್ರಯೋಜವಿಲ್ಲದ ಬಜೆಟ್ ಕಾಂಗ್ರೆಸ್‍ನದ್ದಾಗಿದೆ.

ಸಂಜಯ ಪಾಟೀಲ
ಶಾಸಕರು, ಬೆಳಗಾವಿ ಗ್ರಾಮೀಣ

ಸಿದ್ದರಾಮಯ್ಯನವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಅಂಥ ಯಾವುದೇ ವಿಶೇಷತೆ ಇಲ್ಲ. ಹೊಸತನವಂತೂ ಇಲ್ಲವೇ ಇಲ್ಲ. ಬೆಳಗಾವಿ ಮತ್ತು ಉತ್ತರ ಕರ್ನಾಟಕಕ್ಕೆ ಬಜೆಟ್ ಕೊಡುಗೆ ಶೂನ್ಯ. ಅಷ್ಟೆ ಅಲ್ಲ ಈ ಬಜೆಟ್ ಕರ್ನಾಟಕದ ಪ್ರಗತಿಗೂ ಅನುಕೂಲಕರವಾಗಿಲ್ಲ.
ಮಹಾಂತೇಶ ಕವಟಗಿಮಠ
ವಿಧಾನ ಪರಿಷತ್ ಸದಸ್ಯರು.

“ಬೆಳಗಾವಿ ನಗರದ ಕೈಗಾರಿಕಾ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕವಾಗಿ ಬೇಕಾದ ಯಾವುದೇ ಅಂಶಗಳಿಗೆ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿಲ್ಲ. ಅಷ್ಟೇಯಲ್ಲ ಉತ್ತರ ಕರ್ನಾಟಕದ ಕೈಗಾರಿಕೋದ್ಯಮದ ಮತ್ತು ಉಧ್ಯಮಿಗಳ ಹಿತದಲ್ಲಿ ಬಜೆಟ್ ಏನೊಂದನ್ನೂ ಕೊಟ್ಟಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಪ್ರಾದಾನ್ಯತೆಗಳಿಲ್ಲ. ಇದು ಅನ್ಯಾಯದ ಬಜೆಟ್.”

ಚೆಂಬರ ಆಫ್ ಕಾಮರ್ಸ್ ಬೆಳಗಾವಿ

“ಬಹುದಿನಗಳ ಬೆಳಗಾವಿ ಬೇಡಿಕೆಗೆ ಮತ್ತು ಉತ್ತರ ಕರ್ನಾಟಕದ ಕೋರಿಕೆಗಳಿಗೆ ಪ್ರಸಕ್ತ ಬಜೆಟ್ ಅಷ್ಟೇನು ಆದ್ಯತೆ ನೀಡಿಲ್ಲ. ಉದ್ಯಮ, ಕೈಗಾರಿಕೆ ಮೊದಲಾದವುಗಳಿಗೆ ಕಡಿಮೆ ಗಮನ ಹರಿಸಲಾಗಿದೆ. ಇದು ನಿರಾಶಾದಾಯಕ ಬಜೆಟ್ ಎಂದರೆ ತಪ್ಪಾಗಲಾರದು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡದ ಬಜೆಟ್ ಬೆಳಗಾವಿ ಎರಡನೇ ರಾಜಧಾನಿ ಎನ್ನುವುದರ ಪ್ರಾಸ್ತಾಪಕ್ಕೆ ಹೋಗಿಲ್ಲ. ದಕ್ಷಿಣ ಕರ್ನಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.”

ಸದಾನಂದ ಗುಂಟೆಪ್ಪನವರ
ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ

loading...

LEAVE A REPLY

Please enter your comment!
Please enter your name here