ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂಘಟನೆಅವಶ್ಯ: ಕೆ.ಮಲ್ಲಪ್ಪ ದಾವಣಗೆರೆ:ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಂಘಟಿತಹೋರಾಟ ನಡೆಸುವುದುಅವಶ್ಯಕವಾಗಿದೆಎಂದು ಮಾಜಿ ಶಾಸಕ ಕೆ.ಮಲ್ಲಪ್ಪಕರೆ ನೀಡಿದರು.

0
32

ನಗರದರೋಟರಿ ಬಾಲಭವನದಲ್ಲಿಕರ್ನಾಟಕರಾಜ್ಯ ಹಿಂದುಳಿದ ಜಾತಿಗಳ ಅಧಿಕಾರಿಗಳ ಸಂಘದಆಶ್ರಯದಲ್ಲಿ ನಡೆದಎಲ್ಲಾ ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದಅವರು, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ 35ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿವೆ. ಆದರೆ, ಈ ಸಂಸ್ಥೆಗಳು ಆಯಾ ಸಮಾಜಗಳ ಬೆಳವಣಿಗೆಗೆ ಸ್ಥಳೀಯವಾಗಿ ಕಾರ್ಯಕ್ರಮಏರ್ಪಡಿಸಲು ಮಾತ್ರ ಸೀಮಿತವಾಗಿದ್ದು, ಈ ಸಮಾಜಗಳ ಸಮಗ್ರಅಭಿವೃದ್ಧಿಗೆ ಮುಂದಾಗದಿರುವುದುಅತ್ಯಂತ ಸೋಜಿಗವಾಗಿದೆಎಂದು ವಿಷಾಧಿಸಿದರು.
ಮುಂದುವರಿದ ಸಮಾಜಗಳು ವಿವಿಧಶಿಕ್ಷಣ ಸಂಸ್ಥೆ, ಉದ್ಯಮ, ಬ್ಯಾಂಕ್‍ಗಳನ್ನು ಸ್ಥಾಪಿಸಿ, ಆ ಸಮಾಜಗಳನ್ನು ಮೇಲೆತ್ತಲು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿಯೇಹಿಂದುಳಿದ ಸಮಾಜಗಳು ಕಾರ್ಯನಿರ್ವಹಿಸಬೇಕಿದೆ.ಈ ಕೆಲಸ ಆಗಬೇಕಾದರೆ, ಹಿಂದುಳಿದ ವರ್ಗಗಳ ಎಲ್ಲಾ ಸಮಾಜಗಳು ಸಂಘಟಿತರಾಗಬೇಕೆಂದು ಕಿವಿಮಾತು ಹೇಳಿದರು.
ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಅಲ್ಲದೆ, ವಿದ್ಯಾವಂತಯುವಕರನ್ನುಉನ್ನತ ಹುದ್ದೆಗೆ ಕಳುಹಿಸಬೇಕಿದೆ.ಈ ಹಿನ್ನೆಲೆಯಲ್ಲಿ ವಿದ್ಯಾವಂತಯುವಕರಿಗೆ ಯುಪಿಎಸ್‍ಸಿ ಹಾಗೂ ಕೆಪಿಎಸ್‍ಸಿ ಪರೀಕ್ಷೆಗಳಿಗೆ ಸೂಕ್ತ ತರಬೇತಿ ನೀಡುವಕಾರ್ಯವನ್ನು ಸಂಘ ಮಾಡಬೇಕುಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮರಾಠ ಸಮಾಜದಅಧ್ಯಕ್ಷ ಮರಿಯೋಜಿರಾವ್ ಮಾತನಾಡಿ, ಮಹಾರಾಷ್ಟ್ರದ ಸಾಹುಮಹಾರಾಜ್‍ಅವರು ನಿರ್ಗತಿಕಅಂಬೇಡ್ಕರ್‍ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ, ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ ಮಾದರಿಯಲ್ಲಿಹಿಂದುಳಿದ ಸಮಾಜಗಳಲ್ಲಿರುವ ಬಡ ಪ್ರತಿಭಾವಂತರನ್ನು ಗುರುತಿಸಿ ಅವರುಗಳ ಶಿಕ್ಷಣಕ್ಕೂ ಅಗತ್ಯ ನೆರವು ನೀಡಬೇಕಿದೆಎಂದರು.
ದಾಸರ ಸಮಾಜದಡಿ.ತಿಪ್ಪಣ್ಣ ಮಾತನಾಡಿ, ಅಹಿಂದ ಸಮುದಾಯಗಳನ್ನು ಸಂಘಟಿಸಿ, ಹೋರಾಟ ಮಾಡಿದ್ದರ ಪ್ರತಿಫಲವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ.ಇದೇ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳು ಎಚ್ಚೆತ್ತುಸಂಘಟಿತರಾಗಿ ಹೋರಾಟ ರೂಪಿಸಿ, ಶೈಕ್ಷಣಿಕ, ಸಮಾಜಿಕ, ರಾಜಕೀಯಸ್ಥಾನಮಾನ ಪಡೆಯಬೇಕೆಂದುಕರೆ ನೀಡಿದರು.
ಯಾದವ ಸಮಾಜz.Àಮುಖಂಡರಾದ, ಬಾಡದಆನಂದರಾಜ್ ಮಾತನಾಡಿ, ಹಿಂದೇದೇವರಾಜಅರಸು ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ತುಂಬಿ, ವಿವಿಧ ನಿಗಮ ಮಂಡಳಿಗಳನ್ನು ಸ್ಥಾಪಿಸಿ, ಆಯಾ ಸಮಾಜಗಳಿಗೆ ಶಕ್ತಿ ತುಂಬು ಕೆಲಸ ಮಾಡಿದ್ದರು.ಇದೇ ನೀಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅಹಿಂದ ಸಮುದಾಯದಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಎಂದರು.
ಸಭೆಯಲ್ಲಿಹಾಲುಮತ ಸಮಾಜದಎಂ.ಕರಿಯಪ್ಪ, ಯಾದವ ಸಮಾಜದನಾಗರಾಜಪ್ಪ, ನಿವೃತ್ತ ಹಿರಿಯ ಪೊಲೀಸ್‍ಅಧಿಕಾರಿ ಬಿ.ಬಿ.ಸಕ್ರಿ, ಪ್ರೊ.ಯಲ್ಲಪ್ಪ, ಪ್ರೊ.ಬಿ.ಬಿ.ಪಾಟೀಲ್, ಬಿ.ಎಚ್.ಪರಶುರಾಮಪ್ಪ, ನಿವೃತ್ತಡಿವೈಎಸ್‍ಪಿ ನಾಗರಾಜ್, ಸಿದ್ದಪ್ಪ ಮತ್ತಿತರರು ಹಾಜರಿದ್ದರು.
————————————————————-

loading...

LEAVE A REPLY

Please enter your comment!
Please enter your name here