ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಸಂಸ್ಕಾರನು ಅಷ್ಟೇ ಅವಶ್ಯ: ರಾನಡೆ

0
77

 

ಶಿರಹಟ್ಟಿ,ಜು,18: ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ ಎಂಬ ನಾಣ್ಣುಡಿಗೆ ತಕ್ಕಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಶಿಕ್ಷಣದ ಜೊತೆಗೆ ನಮ್ಮ ಮನೆಯ ಸಂಪ್ರದಾಯಗಳನ್ನು ಕಲಿಸುವುದು ಅಷ್ಟೇ ಮುಖ್ಯ ಎಂದು ಹಿಂದೂ ಸೇವಾ ಪ್ರತಿಷ್ಠಾನದ ಸಂಯೋಜಕ ನಟರಾಜ ರಾನಡೆ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಸ್ಥಳೀಯ ವಿಜಯನಗರದ ಶ್ರೀ ಎಸ್.ಎಸ್.ಕಪ್ಪತ್ತನವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ 40 ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‍ಬುಕ್ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.

ಇಂದಿನ ದಿನಮಾನದಲ್ಲಿ ಮಕ್ಕಳು ಮಾಧ್ಯಮಲ್ಲಿ ಪ್ರಸಾರವಾಗುವಂತ ಧಾರಾವಾಹಿ, ಚಲನಚಿತ್ರಗಳಿಂದ ದೂರವಿದ್ದು, ಶಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಈ ದಿಶೆಯಲ್ಲಿ ಪಾಲಕರು ಕೂಡ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಅವಶ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಎಮ್.ಆರ್.ಹೊನಕೇರಿ, ಸಿಆರ್‍ಪಿ ಎಸ್.ಬಿ.ಹೊಸೂರ, ಎಸ್‍ಡಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಬಾರಬಾರ, ಸುಜಿತ ಕೋಳಿ, ಸತೀಶ ಚಕ್ರಸಾಲಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕಮವನ್ನು ಪರಶುರಾಮ ಡೊಂಕಬಳ್ಳಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here