ಸಮಾಜದಲ್ಲಿ ಪ್ರತಿ ನಿತ್ಯ ಸರಾಯಿ ಕುಡಿತದಿಂದ ಕುಟಂಬದ ನೆಮ್ಮದಿ ಹಾಳಾಗುತ್ತಿದೆ. 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ತಿಳಿಸಿದರು.

0
93

ರಾಮದುರ್ಗಃ ಸಮಾಜದಲ್ಲಿ ಪ್ರತಿ ನಿತ್ಯ ಸರಾಯಿ ಕುಡಿತದಿಂದ ಕುಟಂಬದ ನೆಮ್ಮದಿ ಹಾಳಾಗುತ್ತಿದೆ. 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ತಿಳಿಸಿದರು.
ಸ್ಥಳೀಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ಅವರು ಮಾತನಾಡುತ್ತ ಸಮಾಜದ ಪ್ರತಿಕುಟುಂಬದಲ್ಲಿ ಸರಾಯಿ ಎಂಬ ದುಷ್ಚಟ ಚಟದಿಂದ ಕುಟುಂಬದ ಸದಸ್ಯರ ನೆಮ್ಮದಿಯ ವಾತವರಣ ಇಲ್ಲದಂತಾಗಿದೆ. ಈ ದುಷ್ಚಟಕ್ಕೆ ಬಲಿಯಾದ ಕುಟುಂಬಗಳು ಆರ್ಥಿಕ ಪರಸ್ಥಿತಿ ತೀರಾ ಹದಗೆಟ್ಟಿದ್ದು, ಬಿಕ್ಷಾಟನೆ ಹಂತಕ್ಕೆ ಬಂದಿರುತ್ತಾರೆ. ಇಂಥವರ ಬಾಳಲ್ಲಿ ಬೆಳಕು ಚಲ್ಲುವಂತ ಕಾರ್ಯಕ್ರಮವನ್ನು ಪೂಜ್ಯಡಾ|| ಡಿ.ವಿರೇಂದ್ರ ಹೆಗ್ಗಡೆಯವರು ಈ ಮಧ್ಯವರ್ಜನ ಶಿಬಿರಗಳ ಮೂಲಕ ಸನ್ಮಾರ್ಗಕ್ಕೆ ತರುವುದು ಶ್ಲಾಗನಿಯವಾಗಿದೆ. ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪುರಸಭೆಯ ಅಧ್ಯಕ್ಷ ಶ್ರೀ ಶಿವಯೋಗಿ ಜಿ. ಚಿಕ್ಕೋಡಿ ಇವರು ಮಾತನಾಡಿ ಕುಡಿತದಿಂದ ಯುವಕರು ದುಷ್ಚಟ ಹಾಳುಗುತ್ತಿದ್ದಾರೆ ಅದನ್ನು ನಿಯಂತ್ರಣ ತರಲು.ಅದಕ್ಕಾಗಿ ನಮ್ಮ ಪುರಸಭೆ ಹಾಗೂ ನನ್ನ ವತಿಯಿಂದ ಎಲ್ಲ ಸಹಕಾರವನ್ನು ನೀಡಲು ಸದಾ ಸಿದ್ದ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸೋಮಶೇಖರ ಮೊಗದುಮ್, ಶ್ರೀ ಸುರೇಶ ಮ್ಯೊಲಿ ಜಿಲ್ಲಾ ನಿರ್ದೇಶಕರು ಬೆಳಗಾವಿ-2, ಪಿ ಎಸ್ ಐ. ಬಸನಗೌಡ ಪಾಟೀಲ, ಶ್ರೀ ಅಶೋಕ ಕುಲಗೋಡ, ಪ್ರಕಾಶ ಸುಳೇಬಾವಿ, ರಮೇಶ ಜಲಗೇರಿ, ಮುತ್ತು ಎಸ್. ಬನ್ನೂರು, ಬಿ,ಆರ್,ಸಿಂದ್ಯೆ, ವ್ಹಿ. ಎನ್. ಗೊಡಕಿಂಡಿ, ಅರ್ಜುನ ಜಾದವ, ಸುರೇಶ ಆರಿ ಸೇರಿದಂತೆ ಹಲವಾರು ಜನರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸ್ವಾಗತsÀ ಶ್ರೀ ವೈ ಪ್ರಕಾಶ ಪ್ರಶಾಂತ್ ನಿರೂಪಿಸಿ, ವಿಠಲ.ಕೆ ವಂದಿಸಿದರು.

ಪೋಟೊ ಶೀರ್ಷಿಕೆ18ಆರ್‍ಎಮ್‍ಡಿ1
ಸಮಾಜದಲ್ಲಿ ಪ್ರತಿ ನಿತ್ಯ ಸರಾಯಿ ಕುಡಿತದಿಂದ ಕುಟಂಬದ ನೆಮ್ಮದಿ ಹಾಳಾಗುತ್ತಿದೆ. 841 ನೇ ಮಧ್ಯವರ್ಜನ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಿವಯೋಗಿ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟನೆ.

loading...

LEAVE A REPLY

Please enter your comment!
Please enter your name here