ರೈತರಿಂದ ಎತ್ತು ಬಂಡಿಗಳ ಸಮೇತ ತಹಶೀಲ ಕಛೇರಿಗೆ ಮುತ್ತಿಗೆ: ಶಾಸಕರ ಮಧ್ಯಸ್ಥಿಕೆಯಿಂದ ಅಂತ್ಯ

0
39

ಕುಷ್ಟಗಿ ತಾಲೂಕಿನ ತಳುವಗೇರಾ ಹಾಗೂ ಸುತ್ತಲಿನ ರೈತರು ಬರ ಪರಿಹಾರ ಹಾಗೂ ಗೋಶಾಲೆ ತೆರೆಯುವಂತೆ ಒತ್ತಾಯಿಸಿ ತಹಶೀಲ ಕಛೇರಿಗೆ ತಮ್ಮ ಎತ್ತು ಬಂಡಿಗಳ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ರೈತರು ನೂರಾರು ಎತ್ತಿನ ಬಂಡಿಯೊಂದಿಗೆ ತಹಶೀಲ ಕಛೇರಿಗೆ ಅಗಮಿಸಿ ಮುಖ್ಯ ದ್ವಾರದ ಬಳಿ ಪ್ರತಿಭಟಿಸುತ್ತಾ ರೈತರ ಬಗ್ಗೆ ಕಾಳಜಿ ತೋರದ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗೋಶಾಲೆ ತೆರಿಯುವ ವರೆಗೆ ಇಲ್ಲಿಂದ ಹೊಗುವುದಿಲ್ಲಾ ಎಂದು ಬಿಗಿ ಪಟ್ಟು ಹಿಡಿದರು. ಗ್ರೇಡ್ 2 ತಹಶೀಲ್ದಾರ ಸೈಯದ್ ತಾಜುದ್ಧಿನ್ ಮನವೊಲಿಸಲು ಯತ್ನಿಸಿದರೂ ವಿಫಲಗೊಂಡಿತು. ಇದೇ ವೇಳೆ ಶಾಸಕ ದೊಡ್ಡನಗೌಡ ಪಾಟೀಲ ಪ್ರತಿಭಟನೆ ಸ್ಥಳಕ್ಕೆ ಅಗಮಿಸಿ ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೂ ಜಗ್ಗದ ರೈತರು ಶಾಸಕರ ವಿರುದ್ಧ ಗೋಷಣೆ ಕೂಗಲು ಪ್ರಾರಂಭಿಸಿ ಪ್ರತಿಭಟನೆ ಚುರುಕು ಗೊಳಿಸಿದರು. ಇದನ್ನೆಲ್ಲಾ ಅರಿತ ಶಾಸಕರು ಇನ್ನು ಒಂದು ವಾರದಲ್ಲಿ ತಾಲೂಕಿನ ಆರು ಕಡೆಗಳಲ್ಲಿ ಗೋಶಾಲೆ ತೆರೆಯಲಾಗುವದು. ಒಂದುವೇಳೆ ಸರಕಾರ ಗೋಶಾಲೆ ತೆರೆಯದಿದ್ದರೆ ನಾನು ನಿಮ್ಮ ಜೋತೆಯಲ್ಲಿ ಜನ ಜಾನುವಾರು ಸಮೇತ ಇದೆ ಸ್ಥಳದಲ್ಲಿ ಉಗ್ರವಾದ ಹೋರಾಟ ಮಾಡೋಣ ಎಂದು ಭರವಸೆ ನೀಡಿದ ನಂತರ ರೈತರು ಶಾಸಕರ ಮನವಿಗೆ ಸ್ಪಂದಿಸಿ ಇನ್ನು ಒಂದು ವಾರದಲ್ಲಿ ಗೋಶಾಲೆ ಪ್ರಾರಂಭವಾಗದಿದ್ದರೆ ಮತ್ತೆ ಹೋರಾಟಕ್ಕೆ ಮಾಡುವದಾಗಿ ತೀಳಿಸಿದರು. ಪ್ರತಭಟನೆಯ ನಿಮಿತ್ಯ ಭಾರಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕುಷ್ಟಗಿ ಪಿಎಸೈ ಆರ್.ಕೆ ಜಲಗೇರಿ, ಹನಮಸಾಗರ ಪಿಎಸೈ ಶಿವಯೋಗಿ ಅಎಸೈ ಸೀವಪ್ಪ ಮತ್ತು ಪುಂಡಲೀಕಪ್ಪ ಹಾಗೂ ಪೊಳಿಸ್ ಸಿಬ್ಬಂದಿಗಳು ನೂರಾರು ಜನ ರೈತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here