ಬರಗಾಲದಲ್ಲೂ ಬಸವನ ಸಾಧನೆ

0
44

ನಿಡಗುಂದಿ; ಮಳೆ ಇಲ್ಲ ಬೆಳೆ ಇಲ್ಲಾ ಕುಡಿಯಲು ನೀರು ಮೊದಲೇ ಇಲ್ಲ ಬದುಕು ದುಸ್ತರಗೊಂಡಿದ್ದು ಹಿಂತಹ ಸಂಗ್ದಿಗ್ದ ಪರಿಸ್ತಿತಿಯಲ್ಲೂ ಮಾತನಾಡದ ಬಸವ (ಎತ್ತುಗಳು) ದೊಡ್ಡ ಸಾಧನೆ ಮಾಡಿ ಹೆಸರು ಮಾಡಿವೆ.
ಸಮೀಪದ ಬಳಬಟ್ಟಿ ಗ್ರಾಮದ ಬಸಪ್ಪ ರಾಮಣ್ಣ ಬೀಳಗಿ ಎಂಬುವವರ ಎರಡು ಎತ್ತುಗಳು ಬೆಳಿಗ್ಗೆ 6 ರಿಂದ 10 ಗಂಟೆಯಲ್ಲಿ 6 ಎಕರೆ ಗುಳೆ ಹೊಡೆದು 11 ರಿಂದ ತುಂಬಿದ 5 ಚೀಲ ಜೋಳದುಂದಿಗೆ ಚಕ್ಕಡಿಯಲ್ಲಿ ಸುಮಾರು 20 ಕಿ.ಮೀ ಇರುವ ಬರಸರಕೋಡ ಗ್ರಾಮಕ್ಕೆ ಹೋಗಿ ಪವಾಡ ಬಸವೇಶ್ವರನ ದರ್ಶನ ಪಡೆದು ಮರಳಿ ಮಧ್ಯಾನಃ 3 ಗಂಟೆಗೆ ಮರಳಿ ಬಳಬಟ್ಟಿಗೆ ಆಗಮಿಸಿದಾಗ ಗ್ರಾಮದ ಎಲ್ಲ ರೈತರು ಅವುಗಳನ್ನು ಮೆರವನಿಗೆ ಮಾಡಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ನಿಂಗಪ್ಪ ಬೀಳಗಿ, ಬಸಪ್ಪ ಕಲಾಗಿ, ಈರಣ್ಣ ಆಸಂಗಿ, ಶೇಖರ ಆಲೂರ, ನಿಂಗಯ್ಯ ವಿಭೂತಿಮಠ, ನಿಂಗಪ್ಪ ಗಣಿ ಸೇರಿದಂತೆ ಮತ್ತಿತರರು ಇದ್ದರು.

loading...

LEAVE A REPLY

Please enter your comment!
Please enter your name here