ಬೈಕ್ ಕಳ್ಳನ ಬಂಧನ : 10 ಬೈಕ್ ವಶ

0
30

ಕುಷ್ಟಗಿ: ಸುಮಾರು ವರ್ಷಗಳಿಂದ ತನ್ನ ಕೈಚಳಕ ತೊರಿಸುತ್ತಾ ಮೋಟರ್ ಬೈಕ್ ಕಳ್ಳತನ ಮಾಡಿ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪಟ್ಟಣದ ಕಳ್ಳನೊಬ್ಬ ಇತ್ತೀಚೆಗೆ ಸಿಕ್ಕು ಬಿದ್ದಿದ್ದ. ಈ ಕಳ್ಳನ ಜಾಡು ಪತ್ತೆ ಹಚ್ಚಿದಾಗ ಈತ ಕಳ್ಳತನ ಮಾಡಿದ ಎಲ್ಲಾ ಬೈಕ್‍ಗಳ ಒಂದೊಂದೆ ಮಾಹಿತಿ ಪಡೆದಾಗ ಪೊಲೀಸರಿಗೆ ಒಟ್ಟು 10 ಬೈಕ್ ಸಿಕ್ಕಿವೆ.
ಈ ಕುರಿತು ಡಿವೈಎಸ್‍ಪಿ ಎಸ್ ಎಂ ಸಂದಿಗವಾಡ ಮಾಹಿತಿ ನೀಡುತ್ತಾ ಇದೇ ಆ.27 ರಂದು ಗುರುಪಾದಪ್ಪ ಜಾಡರ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಎಸ್.ಪಿ ಕೆ. ತ್ಯಾಗರಾಜನ್ ಅವರ ನಿದೇರ್ಶನದಂತೆ ಪ್ರಕರಣದ ಬೆನ್ನು ಹತ್ತಿದಾಗ ಬೈಕ್ ಕಳ್ಳತನ ಆರೋಪಿಯಾದ ಅಜ್ಮೀರ್‍ಪಾಷಾ ಹುಸೇನ್‍ಸಾಬ ಎಲಿಗಾರ(25) ಎಂಬುದು ಗೊತ್ತಾಗಿ ಈತ ಮೂಲತಃ ಕುಷ್ಟಗಿ ಪಟ್ಟಣದ ನಿವಾಸಿಯಾಗಿದ್ದು ಮೆಕ್ಯಾನಿಕ್ ಕೆಲಸ ಮಾಡುವ ವೃತ್ತಿಯನ್ನು ಕಲಿತಿದ್ದ. ಈತನನ್ನು ಪಟ್ಟಣದ ಕ್ರೈಸ್ತ ದ ಕಿಂಗ್ ಶಾಲೆಯ ಹತ್ತಿರ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಬಾಯಿ ಬಿಟ್ಟಿದ್ದಾನೆ. ಒಟ್ಟು ರೂ 2,79,000 ಬೆಲೆ ಬಾಳುವ ಒಟ್ಟು 10 ಹಿರೋ ಹೋಡಾ ಬೈಕ್‍ಗಳು ಸಿಕ್ಕಿದ್ದು ಇನ್ನೂ ಹೆಚ್ಚಿನ ಬೈಕ್ ಕಳ್ಳತನ ಮಾಡಿ ಮಾರಿರಬಹುದು ಎಂದು ಶಂಕಿಸಲಾಗಿದ್ದು ಈಗಾಗಲೇ ವಶಪಡಿಸಿಕೊಂಡಿರುವ ಬೈಕ್‍ಗಳ ಮಾಲೀಕರಿಗೆ ಸಂಪೂರ್ಣ ದಾಖಲೆಗಳನ್ನು ಕೊಟ್ಟ ನಂತರ ಅವರ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ರುದ್ರೇಶ ಉಜ್ಜನಕೊಪ್ಪ, ಪಿಎಸ್ಸೈ ರಮೇಶ ಜಲಗೇರಿ, ಸಿಬ್ಬಂದಿಯವರಾದ ಈರಪ್ಪ ನಾಯಕ, ಶರಣಪ್ಪ, ಸಂಗಮೇಶ, ಅಮರೇಶ, ಸಂಗಪ್ಪ ಇದ್ದರು.

loading...

LEAVE A REPLY

Please enter your comment!
Please enter your name here