ಲಿಂ: ದಯಾನಂದ ಶ್ರೀಗಳ 22ನೇ ಪುಣ್ಯಸಂಸ್ಮರಣೋತ್ಸವ

0
75

ಬಸವನಬಾಗೇವಾಡಿ: ಬಾಲ್ಯದಲ್ಲೇ ಮಗುವಿನಲ್ಲಿ ಸಂಸ್ಕಾರ ಮೈಗೂಡಿಸುವಲ್ಲಿ ತಾಯಂದಿರು ಶ್ರಮಿಸಬೇಕೆಂದು ತಾಲೂಕಿನ ಇಂಗಳೇಶ್ವರ ಬಸವ ವಚನ ಶಿಲಾ ಮಂಟಪ ವಿರಕ್ತಮಠ ಚನ್ನಬಸವ ಮಹಾಸ್ವಾಮಿಜಿ ಅಭಿಪ್ರಾಯಪಟ್ಟರು.
ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಲಿಂ: ದಯಾನಂದ ಶಿವಯೋಗಿಗಳ 22ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಂದಿರು ಶ್ರಮ ಹಾಗೂ ಚಿಂತನೆಗಳು ಬಹು ಪ್ರಮುಖವಾಗಿದ್ದು ಮಕ್ಕಳ ಕೈಯಲ್ಲಿ ಮೊಬೈಲ್, ಟಿವಿ ಸೇರಿದಂತೆ ಇತ್ಯಾದಿಗಳನ್ನು ದೂರವಿರಿಸಿ ಸಂಸ್ಕಾರ ನೀಡುವ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕೆಂದು ಹೇಳಿದರು.
ಸ್ವಾರ್ಥ ಮನೋಭಾವವನ್ನು ತೊರೆದು ಶರಣರ ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಮನುಷ್ಯ ಜೀವನ ಸುಂದರವಾಗುತ್ತದೆ, ಶಿವಯೋಗಿಗಳು ಮಹಾ ತಪಸ್ವಿಗಳಾಗಿದ್ದು ಶ್ರೀಗಳ ಮುಂದಾಲೋಚನೆ ಫಲವಾಗಿ ಜಿಲ್ಲೆಯಲ್ಲಿ ಸಾಕಷ್ಟೂ ಬದಲಾವಣೆಯಾಗಿವೆ, ಶ್ರೀಗಳ ಜೀವನ ಮೌಲ್ಯಗಳನ್ನು ಅರಿತುಕೊಂಡು ಮಕ್ಕಳಲ್ಲಿ ಉತ್ತಮ ಶರಣರ ಸಂದೇಶಗಳನ್ನು ಮೈಗೂಡಿಸಕೊಳ್ಳಲು ಪೂರಕ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಹೇಳಿದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಜಿ ಮಾತನಾಡಿ ಬಂಥನಾಳ ಶಿವಯೋಗಿಗಳು ಯರನಾಳ ಗ್ರಾಮದಲ್ಲಿ ಮುಂದಿನ ಜನ್ಮದಲ್ಲಿ ಜನಿಸುವೆ ಎಂಬ ಮಾತನ್ನು ಹೇಳಿದ್ದರು ಶಿವಯೋಗಿಗಳ ಪ್ರತಿರೂಪವೇ ದಯಾನಂದ ಶ್ರೀಗಳು ಎನ್ನುವಲ್ಲಿ ಎರಡು ಮಾತಿಲ್ಲ, ದಯಾನಂದ ಶ್ರೀಗಳು ದೈಹಿಕವಾಗಿ ಸಮಾಜದಿಂದ ದೂರಾಗಿರಬಹುದು ಆದರೇ ಅವರ ತಪೋಶಕ್ತಿ ಅಡಗಿದ್ದು ಭಕ್ತಿಯಿಂದ ನಡೆದರೇ ಖಂಡಿತವಾಗಿ ಆರ್ಶೀವದಿಸುತ್ತಾರೆ, ನೀರಾವರಿಗಾಗಿ ದಯಾನಂದ ಶ್ರೀಗಳು ಶ್ರಮಿಸಿದರು ಅದಕ್ಕಾಗಿ ಅವರನ್ನು ಡೋಣಿ ಭಗೀರಥ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದರು.
ಲಕ್ಕುಂಡಿ ವೇ: ಕೊಟ್ರಯ್ಯ ಶಾಸ್ತ್ರಿಗಳು ನರಗುಂದಮಠ ಹಾಗೂ ಸಾಹಿತಿ ಗಿರಿಜಾ ಪಾಟೀಲ ಗುರು ಮಹಿಮೆ ಕುರಿತಾಗಿ ಉಪನ್ಯಾಸ ನೀಡಿದರು, ಪಡೇಕನೂರ ವಿರಕ್ತಮಠದ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು, ಕಾಂಗ್ರೇಸ್ ಮುಖಂಡ ರಮೇಶ ಸೂಳಿಭಾವಿ, ನಿವೃತ್ತ ಆರೋಗ್ಯ ವೈದ್ಯಾಧಿಕಾರಿ ಬಸವರಾಜ ಕಳಸಗೊಂಡ, ಬಸವರಾಜ ಜ್ಯೋತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಡಾ: ರಾಜಶೇಖರ ಬಶೆಟ್ಟಿ ಸ್ವಾಗತಿಸಿದರು, ಮಲ್ಲಿಕಾರ್ಜುನ ರಾಜನಾಳ ನಿರೂಪಿಸಿದರು, ಡಾ: ಅಮರೇಶ ಮಿಣಜಗಿ ವಂದಿಸಿದರು.

loading...

LEAVE A REPLY

Please enter your comment!
Please enter your name here