ಅಥಣಿ ಮೊಟಗಿ ಮಠದ ಶ್ರೀಗಳ ಅಭಿಪ್ರಾಯ ತಾಯಿ-ತಂದೆ ಮಕ್ಕಳ ಬದುಕಿನ ಆದರ್ಶದ ಕಳಶ.

0
72

ಬೀಳಗಿ: ಸಾಮಾಜಿಕ ಬದುಕಿನಲ್ಲಿ ತಾಯಿ ತಂದೆಗಳು ಮಕ್ಕಳ ಬದುಕಿನ ಆದರ್ಶದ ಕಳಶ ವಿದ್ದಂತೆ. ತಾಯಂದಿರು ಮಗುವಿನಲ್ಲಿ ಧಾರ್ಮಿಕವಾದ ಸಂಸ್ಕಾರ, ನೀತಿ ಕಲಿಸಬೇಕು. ದೀರ, ಶೂರ, ವೀರ ಮಕ್ಕಳು ಹುಟ್ಟಬೇಕಾದರೆ ಮಕ್ಕಳಿಗೆ ಬಾಲ್ಯದಲ್ಲಿ ತಾಯಿತನದ ಎದೆಹಾಲು ಉನ್ನಿಸಬೇಕು ಆಗ ಸಂಸ್ಕಾರವಂತ ಮಕ್ಕಳು ಸಮಾಜಮೂಖಿಗೆ ಕೊಡುಗೆಯಾಗಿ ನೀಡಲು ಮಾರ್ಗವಾಗುತ್ತದೆ ಎಂದು ಅಥಣಿ ಮೊಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಜೀ ಅಭಿಪ್ರಾಯಪಟ್ಟರು.
ಇವರು ಮಂಗಳವಾರ ಸಾಯಂಕಾಲ ತಾಲೂಕಿನ ನಾಗರಾಳ ಗ್ರಾಮದಲ್ಲಿ ಡಾ. ಎಸ್ ರಾಧಾಕೃಷ್ಣನ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಆಯೋಜಿಸಿದ ಗುರು ವಂದನಾ ಸಮಾರಂಭದ ನೇತ್ರತ್ವದ ಜೊತೆಗೆ ಉದ್ಘಾಟಸಿ ಮಾತನಾಡಿದರು.
ಮಕ್ಕಳು ಮನೆಯ ಸಂಪತ್ತು ಇವರಿಗೆ ಶರಣರ ತತ್ವಗಳನ್ನು ಮತ್ತು ಆಧ್ಯತ್ಮಿಕ ಶಿಕ್ಷಣವನ್ನು ನೀಡುವದರ ಮೂಖಾಂತರ ಸಮಾಜದ ಸ್ವಾಸ್ಯ ಕಾಪಾಡಲು ಶಿಕ್ಷಕರು ಮುಂದಾಗಬೇಕು. ಮಕ್ಕಳನ್ನು ಹಡೆದರೆ ಸಾಲದು ತಾಯಿ ತಂದೆಗಳಿಂದ ಅವರಿಗೆ ಪ್ರೀತಿ, ವಿನಯ, ಮಾರ್ಗದರ್ಶನ, ಪೋಷನೆ ಆಗಬೇಕಾಗಿದೆ. ಸಮಾಜದಲ್ಲಿ ಬದುಕಿನ ವ್ಯವಸ್ಥೆಗೆ ಸಿಕ್ಕು ಜನ ಬದುಕಬೇಕು ಹೊರತು ಸಾವುತರಿಸುವ ಕಾರ್ಯ ಯಾರಿಂದಲು ನಡೆಯಬಾರದು. ಇಂದಿನ ಸಾಮಾಜಿಕ ಗೊಂದಲಗಳಲ್ಲಿ ಮಕ್ಕಳ ಭವಿಷ್ಯ ರೂಪಿಸುವದು ನಮ್ಮ ಆಧ್ಯ ಕರ್ತವ್ಯವಾಗಿದ್ದು ಸಜ್ಜನ, ಸಾತ್ವೀಕ ಸಮಾಜ ನಿರ್ಮಾಣದ ಜವಾಬ್ದಾರಿ ಹಿರಿಯರದ್ದಾಗಿದೆ. ಸಮಾಜದಲ್ಲಿ ನಾವುಗಳು ಬದುಕುವ ರೀತಿ ತಿಳಿಯುವುವದೇ ಗುರುವಂದನೆಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಸಮಾರಂಭದ ಉಪನ್ಯಾಸವನ್ನು ಎಂ ಜಿ ದಾಸರ ಉಪನ್ಯಾಸಕರು ಸಿ ಟಿ ಇ ಜಮಖಂಡಿ ಮಾತನಾಡಿ ತಂದೆ ತಾಯಿ ಮಕ್ಕಳಿಗೆ ತಿದ್ದಿ ಬುದ್ದಿಕೊಟ್ಟು ಸಂಸ್ಕಾರ, ವಿದ್ಯಾ, ವಿನಯ ನೀಡುವದನ್ನು ರೂಢಿಸಿಕೊಳ್ಳಬೇಕು. ತಂದೆ, ತಾಯಿ, ಗುರುವಿನ ಬಲದ ಆಯಾಮದಿಂದ ಹೊರಬರುವ ಮಗುವು ಮುಂದೆ ರಾಷ್ಟ್ರಕ್ಕೆ, ಸಮಾಜಕ್ಕೆ ಕಣ್ಣಾಗುತ್ತಾನೆ. ಮಗುವಿಗೆ ಸಂಸ್ಕಾರ ನೀಡುವ ಮೊದಲ ಪಾಠ ಶಾಲೆ ಮನೆಯಾಗಿದೆ. ದಿನನಿತ್ಯ ಬೆಳೆಯುವ ಮಗುವಿನಲ್ಲಿರುವ ಕಾರ್ಯಚಟುವಟಿಕೆಗಳನ್ನು ಗಮನಿಸಿ ಆತನಿಗೆ ಯಾವುದರ ಆಸಕ್ತಿ ಇದೆ ಎಂಬುದು ಪಾಲಕರು ಅರಿತು ಕೊಳ್ಳಬೇಕು. ಮಗುವಿನಲ್ಲಿ ಹದದಿಂದ ಶಿಕ್ಷಣ ನೀಡುವದು ಶಿಕ್ಷಕನ ಜವಾಬ್ದಾರಿಯಾಗಿದೆ. ನಿತ್ಯ ಬೆಳೆಯುವ ಮಗುವಿನ ಮುಂದೆ ತಂದೆ ತಾಯಿಗಳ ಅಸಭ್ಯ ವರ್ತನೆ ಸರಿಯಲ್ಲ. ಮಗುವಿಗೆ ತಾಯಿ ತಂದೆಗಳ ಪ್ರೀತಿ ಬಾಲ್ಯದಲ್ಲಿ ಸಿಗದೇ ಹೋದರೆ ಮುಂದೆ ಮಕ್ಕಳು ದೇಶಕ್ಕೆ ಮತ್ತು ಸಮಾಜಕ್ಕೆ ಮಾರಕವಾಗುತ್ತಾರೆ ಎಂಬುದು ಪಾಲಕರು ಮನವರಿಕೆಯಾಗಬೇಕಾಗಿದೆ ಎಂದು ಹೇಳಿದರು.
ಶಿಕ್ಷಕರಿಗೆ ಗುರುವಂದನಾ ಸನ್ಮಾನ ಮಾಡಿ ಗೌರವಿಸಲಾಯಿತು. ಸಮಾರಂಭದ ಸಾನಿಧ್ಯ ಶ್ರೀ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಮಹಾಸ್ವಾಮಿಗಳು ದಿಗಂಬರೇಶ್ವರ ಮಠ, ನಾಗರಾಳ ವಹಿಸಿದ್ದರು. ಅತಿಥಿಗಳಾಗಿ ಶರಣಪ್ಪ ಅಗ್ನಿ, ರವೀಂದ್ರ ಕಣವಿ ತಾಲೂಕಾ ಕಾನಿಪ ಅದ್ಯಕ್ಷರು, ಅದ್ಯಕ್ಷತೆ ಸೋಮಶೇಖರ ಕೊಪ್ಪಳ ಅದ್ಯಕ್ಷರು ಡಾ.ಸ.ರಾ.ವಿ.ಸಂ ನಾಗರಾಳ, ಎಲ್ ಬಿ ಕುರ್ತಕೋಟಿ, ಸಿದ್ದಣ್ಣ ಕೆರೋರ, ಹೇಮಾದ್ರಿ ಕೊಪ್ಪಳ, ಸಂತೋಷ ಜಂಬಗಿ, ಶ್ರೀಶೈಲ್ ಜತ್ತಿ, ಸಿದ್ದರಾಮ ಶಿರೋಳ, ಗಂಗಾಧರ ಕಲಬುರ್ಗಿ, ನಿಂಗಪ್ಪ ಹುಗಾರ, ಗುರುರಾಜ ಲೂತಿ, ಬಸವರಾಜ ದೇವರಮನಿ ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕವನ್ನು ಕಾಶಿನಾಥ ಸೋಮನಕಟ್ಟಿ ಮಾಡಿ ಶೇಖರ ಗೊಳಸಂಗಿ ನಿರೂಪಿಸಿ ಪ್ರಶಾಂತ ಪಾಟೀಲ ವಂದಿಸಿದರು.
ಬಾಕ್ಸ: . ದೀರ, ಶೂರ, ವೀರ ಮಕ್ಕಳು ಹುಟ್ಟಬೇಕಾದರೆ ಮಕ್ಕಳಿಗೆ ಬಾಲ್ಯದಲ್ಲಿ ತಾಯಿತನದ ಎದೆಹಾಲು ಉನ್ನಿಸಬೇಕು ಆಗ ಸಂಸ್ಕಾರವಂತ ಮಕ್ಕಳು ಸಮಾಜಮೂಖಿಗೆ ಕೊಡುಗೆಯಾಗಿ ನೀಡಲು ಮಾರ್ಗವಾಗುತ್ತದೆ ಪ್ರಭು ಚನ್ನಬಸವ ಶ್ರೀಗಳು.

loading...

LEAVE A REPLY

Please enter your comment!
Please enter your name here