ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ

0
93

ಬಾಗಲಕೋಟ 18: ಬಾಗಲಕೋಟ ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯರ್ಕೆಯರನ್ನು ಗೌರವಧನದ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಗಲಕೋಟ ತಾಲೂಕಿನ ಯಂಕಂಚಿ, ಗೋವಿಂದಕೊಪ್ಪ, ಬೇವೂರ, ಚಿಕ್ಕಮುರಮಟ್ಟಿ, ಜಡ್ರಾಮಕುಂಟಿ, ಕಳಸಕೊಪ್ಪ, ಚಿಕ್ಕಮ್ಯಾಗೇರಿ(ಇತರೆ) ಹಾಗೂ ಸೀತಿಮನಿ (ಪ.ಜಾತಿ) ಗ್ರಾಮಗಳಿಗೆ ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿದ್ದು, 18 ರಿಂದ 35 ವರ್ಷದೊಳಗಿರಬೇಕು. ಕಿವುಡ, ಮೂಖ, ಕುರುಡರು, ಮಾನಸಿಕ ಅಸ್ವಸ್ಥರು ಅರ್ಹರಿರುವದಿಲ್ಲ. ಶೇ.60 ರಷ್ಟು ಮೀರದಂತೆ ಅಂಗವಿಕಲತೆವುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ 13 ರಂದು ಸಂಜೆ 5 ಗಂಟೆಯೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ, ಪ್ಲಾಟ್ ನಂ.68/69, ಸೆಕ್ಟರ ನಂ.4, ಜಿಲ್ಲಾ ಸ್ತ್ರೀಶಕ್ತಿ ಭವನ, ಇಂಡಿಯನ್ ಗ್ಯಾಸ್ ಪಕ್ಕ, ನವನಗರ, ಬಾಗಲಕೋಟ ಅವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂಸಂ.08354-236293ಗೆ ಸಂಪರ್ಕಿಸುವಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here