ನಂದಿಹಾಳ ಗ್ರಾಮದಲ್ಲಿ ಸಂಭ್ರಮದ ನಂದಿ ಆಗಮ ಲೀಲೆ ಪುರಾಣ ಮಂಗಲ

0
109

ಬಸವನಬಾಗೇವಾಡಿ: ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ನಂದಿ ಆಗಮ ಲೀಲೆ ಪುರಾಣ ಮಂಗಲದ ಸಾನ್ನಿಧ್ಯವನ್ನು ಪೂಜ್ಯಶ್ರೀ ಸಂಗಯ್ಯ ಸ್ವಾಮಿಗಳು ನೆರವೇರಿಸಿದರು.
ಪ್ರಭಯ್ಯ ಸ್ವಾಮಿಗಳು ಸಾ. ಕೊಡೇಕಲ್ ಒಂದು ತಿಂಗಳ ಕಾಲ ಪುರಾಣ ಹೇಳಿ ಭಕ್ತರಿಗೆ ಮನತುಂಬಿ ಬರುವಂತೆ ಮಾಡಿದ್ದಾರೆ. ಪುರಾಣ ಕೇಳಿ ನೀವೆಲ್ಲರೂ ಪುನೀತರಾಗಿದ್ದೀರಿ ಮತ್ತು ಪುರಾಣದಲ್ಲಿ ನಾಡಿನ ಎಲ್ಲ ಶರಣರ ಮಹಿಮೆಯನ್ನು ವಿಸ್ತರಿಸಲಾಗಿದೆ ಎಂದು ಸಂಗಯ್ಯ ಸ್ವಾಮಿಗಳು ಹೇಳಿದರು.
ಈರಪ್ಪಯ್ಯ ಸ್ವಾಮಿಗಳು ಸಾ. ಕೊಡೇಕಲ್ ಪುರಾಣ ಓದಿ ಹೇಳಿದರು. ಗ್ರಾ.ಪಂ. ಉಪಾಧ್ಯಕ್ಷ ಮಲ್ಲು ದೊಡಮನಿ, ಸಿದ್ರಾಮಪ್ಪ ಕಾಳಗಿ, ಗೋಲಪ್ಪ ಬೆಂಕಿ, ಚನಗೌಡ ಪಾಟೀಲ, ಶರಣಪ್ಪ ಕುಮಶಿ, ಸುಭಾಸ ಬಾಡಗಂಡಿ, ಬಸು ಪಟ್ಟಣದ, ಸಂಗೊಂಡಪ್ಪ ಕಲ್ಮನಿ, ಬಸವಣ್ಣ ಹಾದಿಮನಿ, ಪರಪ್ಪ ಕೋಲ್ಹಾರ, ನಿಂಗೊಂಡಪ್ಪ ಮನಗೂಳಿ, ಸುರೇಶ ಬೆಂಕಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮಲಕಪ್ಪ ಬೆಂಕಿ, ಶರಣು ಕಾಟಕರ ಇನ್ನಿತರರು ಉಪಸ್ಥಿತರಿದ್ದರು.
ಕೊಡೇಕಲ್ ಬಸವಣ್ಣನವರ ಕಾಲಜ್ಞಾನದ ಹೊತ್ತಿಗೆಯನ್ನು ಮೆರವಣಿಗೆ ಮೂಲಕ ಪುರಾಣ ಸ್ಥಳಕ್ಕೆ ಕೊಂಡೊಯ್ಯಲಾಯಿತು.

loading...

LEAVE A REPLY

Please enter your comment!
Please enter your name here