ಆ ಬಾಲ್ಯದ ದಿನಗಳು

0
497

ಲಕ್ಷ್ಮೀ ಶೇಬಣ್ಣವರ
ಜೀವನ ಒಂದು ಸಮುದ್ರವಿದ್ದಂತೆ ಅಲೆಗಳು ಸದಾ ಬರುತ್ತಲೇ ಇರುತ್ತವೆ, ನಾವು ದಿನಗಳೆದಂತೆ ಸಾಗುತ್ತಲೇ ಇರುತ್ತೆವೆ ಅದರಲ್ಲಿ ಸಿಹಿ-ಕಹಿ ಅನುಭವಗಳನ್ನು ಅನುಭವಿಸುತ್ತಲೇ ಮುಂದೆಸಾಗಬೇಕು ಇದೇ ಜೀವನ.
ಮನುಷ್ಯನ ಜೀವನದಲ್ಲಿ ನಾಲ್ಕು ಪ್ರಮುಖ ಹಂತಗಳು ಬರುತ್ತವೆ, ಬಾಲ್ಯಾವಸ್ಥೆ, ಫ್ರೌಢಾವಸ್ಥೆ, ಯವ್ವನಾವಸ್ಥೆ ಹಾಗೂ ಮುಪ್ಪಾವಸ್ಥೆ ಈ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದಾಗಲೇ ಮಾನವನ ಜೀವನ ಪರಿಪೂರ್ಣ ಇದು ನಿತ್ಯನೂತನ. ಹೀಗಿದ್ದಾಗ ಮಾನವನ ಜೀವನದಲ್ಲಿ ಬಾಲ್ಯಾವಸ್ಥೆ ಒಂದು ವಿಶಿಷ್ಟ ವೆನಿಸಿದೆ, ಇದು ಪ್ರತಿಯೊಬ್ಬರಿಗೂ ಕೂಡಾ ಮಧುರ ಅನುಭವಗಳ ಅಮೃತ ಗಳಿಗೆಇದ್ದಂತೆ.
ಇದೇ ರೀತಿ ಬಾಲ್ಯದ ಆ ದಿನಗಳಲ್ಲಿ ನಾವು ಮಾಡಿದ ಮೋಜು, ಮಸ್ತಿಗಳನ್ನು ನೆನೆಯುವುದೇ ಒಂದು ಸಡಗರ ಸಂಭ್ರಮ. ನಾವೆಲ್ಲಾ ಶಾಲೆ ಮುಗಿಸಿ ಮನೆಗೆ ಬಂದರೆ ಸಾಕು ಅಮ್ಮ ಮಾಡಿದ ಸಂಜೆಯ ಚಹಾ ಕುಡಿದು ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಆಚೆಕಡೆ ಮೈದಾನದಲ್ಲಿ ಕುಂಟಾಬಿಲ್ಲೇ, ಲಗೋರಿ, ಕೋಕೋ ಆಟಗಳನ್ನು ಆಡಲು ಹೋದರೆ ಮನೆಯನ್ನೇ ಮರೆತು ಸ್ನೇಹಿತರೊಂದಿಗೆ ಬೆರೆಯುತ್ತಿದ್ದೆವು. ನಿಜವಾಗಿಯೂ ಆ ಜೀವನವೇ ಮಜ, ಎಲ್ಲರೊಂದಿಗೆ ಬೆರೆತು ಯಾವ ಬಡವ-ಶ್ರೀಮಂತ, ಮೇಲು-ಕೀಳು, ಜಾತಿ,ಭಾಷೆಗಳ ಹಂಗು ಇಲ್ಲದೇ ಮುಕ್ತವಾಗಿ ಬೆರೆತು ಸದಾ ಆಟೋಟ ಹಾಗೂ ಅಭ್ಯಾಸದ ಬಗ್ಗೆ ಗಮನ ಕೊಡುತ್ತಿದ್ದ ಕಾಲ ಅದಾಗಿತ್ತು. ಜವಾಬ್ದಾರಿಯಿಂದ ಹೊರತಾದ ಜೀವನ ಅದಾಗಿತ್ತು. ತಪ್ಪು-ಸರಿಗಳ ಅರ್ಥವೇ ತಿಳಿಯದ ಆ ವಯಸ್ಸಿನಲ್ಲಿ ತಿಳಿಯದೇ ಹಲವಾರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಅಪ್ಪ-ಅಮ್ಮ ರಿಂದ ಏಟು ತಿಂದದ್ದು ಒಂದು ನೆನಪಾದರೆ ಅಪ್ಪ ಹೊಡೆದಾಗ ಅಮ್ಮ ಬಿಡಿಸಿ ತಾನೂ ನನ್ನೊಂದಿಗೆ ಅತ್ತು ನನ್ನ ನೋವಿನೊಂದಿಗೆ ಜೊತೆಯಾದದ್ದು ನನ್ನ ಪಾಲಿಗೆ ಒಂದು ಮಧುರ ಕ್ಷಣವೆಂತಲೇ ಹೇಳಬಹುದು.
ಮನುಷ್ಯನಿಗೆ ಸಾಮಾನ್ಯವಾಗಿ ವಯಸ್ಸು ಆದಂತೆಲ್ಲ ಜವಾಬ್ದಾರಿಗಳು ಕೂಡಾ ಅದರೊಂದಿಗೆ ಅಂಟಿಕೊಳ್ಳುತ್ತವೆ. ಆದರೇ ಬಾಲ್ಯಾವಸ್ಥೆಯು ಎಲ್ಲದರಿಂದಲೂ ಮುಕ್ತವಾದ ಜೀವನ ಅಲ್ಲಿ ಕೆಲಸಮಾಡಿ ಕಷ್ಟಪಡಬೇಕು ಎನ್ನುವ ಚಿಂತೆಇರುವುದಿಲ,್ಲ ಪ್ರತಿಯೊಂದಕ್ಕೂ ಹಟಮಾಡಿ ಪಡೆದುಕೊಳ್ಳುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ತಂದೆ-ತಾಯಿಯರ ಕಷ್ಟ ಗೊತ್ತಾಗದ ಸಮಯವದು. ಮನೆಯಲ್ಲಿ ಹಬ್ಬಕ್ಕೆಂದು ಅಪ್ಪ ಹೊಸಬಟ್ಟೆ ಕೊಡಿಸಿದಾಗ ಸಂಭ್ರಮ ಪಟ್ಟಿದ್ದು ಮತ್ತು ಅಮ್ಮ ತರತರದ ಅಡುಗೆ ಮಾಡಿ ಬಡಿಸಿದಾಗ ಪಟ್ಟ ಸಂತೋಷವನ್ನು ನೆನೆದರೆ ಈಗಲೂ ಆ ದಿನಗಳು ಯಾಕೆ ದಾಟಿ ಮುಂದೆಬಂದೆವೊ ಎನಿಸುತ್ತದೆ.
ನಿಜವಾಗಿಯೂ ಹೇಳಬೆಕೆಂದರೆ ವಯಸ್ಸಿಗೆ ತಕ್ಕಂತೆ ನಮ್ಮ ನಡೆನುಡಿಗಳಲ್ಲಿ ಬದಲಾವಣೆ ಆಗುತ್ತವೆ. ಎಲ್ಲ ಸಂಬಂಧಗಳನ್ನು ನಾವು ಒಂದೆರೀತಿಯಲ್ಲಿ ನೊಡುವುದೆಂದರೆ ಅದು ಬಾಲ್ಯಾವಸ್ಥೆಯಲ್ಲಿ ಮಾತ್ರವೇ. ಹಬ್ಬ-ಹರಿದಿನಗಳು, ಮದುವೆ, ಜಾತ್ರೆಗಳಲ್ಲಿ ಅಮ್ಮನೊಂದಿಗೆ ಜೊತೆಗೂಡಿ ಹಟಮಾಡಿ ಹೋಗುವುದು ಅವೆಲ್ಲ ಸುಂದರ ಅನುಭವಗಳು. ಗಣೇಶ ಹಬ್ಬ ಬಂತೆಂದರೆ ಸ್ನೇಹಿತರೊಂದಿಗೆ ಮನೆ ಮನೆಗೂ ಹೋಗಿ ಗಣೇಶನ ಮೂರ್ತಿಗೆ ಅಕ್ಕಿಕಾಳು ಹಾಕುತ್ತಾ ಹಾಡು ಹೇಳುವುದೆಂದರೆ ಸಂಭ್ರಮವೋ ಸಂಭ್ರಮ. ನಿಜವಾಗಿಯೂ ಆ ವಯಸ್ಸಿನ ಮಜವೇ ಅದ್ಭುತ. ಈಗಾಗಿ ನಾವೆಲ್ಲರೂ ಆ ದಿನಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇದು ಜೀವನದ ಕಟ್ಟಕಡೆಯ ವರೆಗೂ ಸುಂದರ ಸವಿನೆನಪಾಗಿ ಉಳಿಯುವ ಅವಸ್ಥೆಯಾಗಿದೆ.
ಅಣ್ಣ, ಅಕ್ಕನೊಂದಿಗೆ ಆಡುವುದು, ಓದುವುದು ಒಟ್ಟಿಗೆ ಮಲಗುವುದು ಇವೆಲ್ಲ ನಿಜವಾಗಿಯೂ ಬಹಳ ಆನಂದದ ಕ್ಷಣಗಳು. ಯಾರಾದರೂ ನಮ್ಮನ್ನು ಬಡಿದಾಗ ಅಳುತ್ತಾ ಬಂದು ಅಣ್ಣನಿಗೆ ಹೇಳಿದ್ದು ಇಂದಿಗೂ ಮರೆಯಲಾಗದ ದಿನವಾಗಿದೆ. ಎನೇ ಆಗಲಿ ಬಾಲ್ಯ ವೆನ್ನುವುದೇ ಪ್ರತಿಯೊಬ್ಬರಿಗೂ ಒಂದು ಅಮೃತಗಳಿಗೆಯ ಕಾಲ ಎಂದು ಹೇಳಬಹುದಾಗಿದೆ.

loading...

LEAVE A REPLY

Please enter your comment!
Please enter your name here