ಮಹಿಳೆಯರ ಅಭಿವೃದ್ದಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿ : ಸಚಿವೆ ಉಮಾಶ್ರೀ

0
61

ಬಾಗಲಕೋಟ : ರಾಜ್ಯದ ಮಹಿಳೆಯರ, ಮಕ್ಕಳ ಅಂಗವಿಕಲರ ಶ್ರೇಯೋಭಿವೃದ್ದಿಗೆ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅಧಿಕಾರಿಗಳು ಪ್ರಾಮಾಣಿಕ ಸೇವೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ತಿಳಿಸಿದರು.
ಇಂದು ಬಾಗಲಕೋಟೆಯ ಜಿ.ಪಂ ಸಭಾಭವನದಲ್ಲಿ ಜರುಗಿದ ಬೆಳಗಾವಿ ವಿಭಾಗಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಸಭೆಗೆ ವಿವಿಧ ಯೋಜನೆ ಕಾರ್ಯಕ್ರಮಗಳನ್ನು ಪ್ರಗತಿಯ ವಿವರವಾದ ಮಾಹಿತಿಯನ್ನು ತರಬೇಕು. ನಿರಾಶಕ್ತಿ ತೋರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಅತೃಪ್ತಿ ವ್ಯಕ್ತಪಡಿಸಿದರು.
ವಿಭಾಗ ಮಟ್ಟದ ಈ ಸಭೆಗೆ ಪ್ರಥಮ ಬಾರಿಗೆ ಸ್ತ್ರೀಶಕ್ತಿ ಒಕ್ಕೂಡಗಳ ಅಧ್ಯಕ್ಷರನ್ನು ಸಹ ಕರೆದಿದ್ದು ಅವರಿಗೂ ಸಹ ಇಲಾಖೆಯ ಯೋಜನೆಗಳ ಅರಿವು ಮೂಡಬೇಕಿದೆ. ಅಧಿಕಾರಿಗಳು ಸಹ ಕಡ್ಡಾಯವಾಗಿ ಸ್ತ್ರೀಶಕ್ತಿ ಸಂಘಗಳಿಗೆ ಬೇಟಿ ನೀಡತಕ್ಕದ್ದು. ಸಹಕಾರದ ವಿವಿಧ ನೂತನ ಯೋಜನೆಗಳ ಬಗ್ಗೆ ಅತೀ ಹೆಚ್ಚಿನ ಜಾಗೃತಿ ಮೂಡಿಸತಕ್ಕದ್ದೆಂದು ಸಚಿವೆ ಉಮಾಶ್ರೀ ತಿಳಿಸಿದರು.
ಲೈಂಗಿಕ ಕಾರ್ಯಕರ್ತೆಯರಿಗೆ ನೀಡುವ ಸಹಾಯಧನವನ್ನು 20 ಸಾವಿರ ರೂ.ಗೆ ಹೆಚ್ಚಿಸಿದ್ದು, ಸಂಬಂಧಿಸಿದ ಸಂಘಗಳ ಮೂಲಕ ಗುರುತಿಸಬೇಕೆಂದರು. ಚೈತನ್ಯ ಯೋಜನೆಯಡಿ ಬಾಗಲಕೋಟೆ ಜಿಲ್ಲೆಗೆ 60 ಗುರಿ ನೀಡಿದ್ದು, ಈ ಯೋಜನೆ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಈ ಬಾರಿ ಹೆಚ್ಚಿನ ಫಲಾನುಭವಿಗಳು ಮುಂದೆ ಬರುತ್ತಿದ್ದಾರೆ ಎಂದರು.
ಅಂಧ ತಾಯಿಯರ ಮಕ್ಕಳ ಪಾಲನೆಗೆ ಸಂಘ ಸಂಸ್ಥೆಗಳಿಗೆ ಎರಡು ವರ್ಷದ ವರೆಗೆ 2 ಸಾವಿರ ರೂ. ನೀಡಲಾಗುತಿದೆ. ಜಿಲ್ಲೆಯ ಆಯಾ ಮಹಿಳಾ ಮಂಡಳಿಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕೆಂದರು. ರಾಜ್ಯದ 250 ಸ್ತ್ರೀಶಕ್ತಿ ಗುಂಪುಗಳಿಗೆ 2 ಲಕ್ಷ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೆ ತರಲಾಗಿದೆ. ಹಿಂದೆ 1 ಲಕ್ಷ ಇದ್ದು, ಈಗ ಅದನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದ ಅವರು ಈ ಕುರಿತು ಜಾಗೃತಿ ಕೈಗೊಳ್ಳಬೇಕೆಂದರು.
ಪ್ರಥಮ ಬಾರಿಗೆ ಸ್ತ್ರೀಶಕ್ತಿ ಸಂಘಗಳ ಒಕ್ಕೂಟಗಳ ಅಧ್ಯಕ್ಷರು ಪ್ರಥಮ ಬಾರಿಗೆ ಪಾಲ್ಗೊಂಡಿದ್ದರು. ಇಲಾಖೆಯ ಯೋಜನೆಗಳ ಕಾರ್ಯಕ್ರಮಗಳ ಅರಿವು ತಿಳಿಯುವ ದೃಷ್ಠಿಯಿಂದ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು. ನಿಗದಿತ ಅವಧಿಯಲ್ಲಿ ಯೋಜನೆಗಳ ಅನುಷ್ಠಾನಗೊಳಿಸಬೇಕು. ಯಾವುದೇ ತರನಾದ ಸಬೂಬು ಹೇಳದೆ ಬಿಡುಗಡೆಯಾದ ಅನುದಾನ ಮರಳಿ ಹೋಗದಂತೆ ನೋಡಿಕೊಳ್ಳಬೇಕೆಂದರು. ಹಣ ಸರಿಯಾದ ಸಮಯದಲ್ಲಿ ವಿನಿಯೋಗಿಸದೇ ಹೋದಲ್ಲಿ ಅಂತವರ ವಿರುದ್ದ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಗೌರಧನ ಎರಡನ್ನೂ ಒಂದೇ ದಿನದಂದು ಗೌರವಧನ ನೀಡಬೇಕೆಂದರು. ಜಿಲ್ಲೆಯಲ್ಲಿ 250 ನಿರ್ಗತಿಕ ಅನಾಥ ಮಕ್ಕಳಿದ್ದಾರೆ. ಪ್ರತಿ ಮಗುವಿಗೆ ತಿಂಗಳಿಗೆ ಪ್ರತಿ ಮಗುವಿಗೆ 400 ರೂ. ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 10 ಸಂಘಗಳು ಇಂತಹ ನಿರ್ಗತಿಕ ಕುಟೀರಗಳನ್ನು ನಡೆಸುತ್ತಿದ್ದು ಅವುಗಳ ಮೇಲೆ ಎಚ್ಚರವಹಿಸಬೇಕೆಂದರು. ಎಲ್ಲ ನೋಡಲ್ ಅಧಿಕಾರಿಗಳು ಈ ಎಲ್ಲ ಸಂಘಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಚಿವೆ ಉಮಾಶ್ರೀ ಸೂಚಿಸಿದರು.
ಕೆಲವೊಂದು ಅನುಮತಿ ಪಡೆಯದ ನಿರ್ಗತಿಕ ಕುಟೀರಗಳ ಮೇ ನಿಗಾ ಇಡಬೇಕೆಂದರು. ಅನುಮತಿ ಪಡೆಯದೇ ಕುಟೀರಗಳನ್ನು ನಡೆಸುತ್ತಿರುವುದು ಕೆಲವು ಗಮನಕ್ಕೆ ಬಂದಿದ್ದು, ಕಡ್ಡಾಯವಾಗಿ ಇಲಾಖೆ ಪರವಾನಿಗೆ ಪಡೆಯಬೇಕೆಂದರು. ಜಿಲ್ಲೆಯಲ್ಲಿ ಬಾಲ್ಯವಿವಾಹ ಆಗದಂತೆ ಕ್ರಮಕೈಗೊಳ್ಳುವದರ ಜೊತೆಗೆ ಬಾಲ್ಯ ವಿವಾಹ ತಡೆಯಲಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಜಾಗೃತಿ, ಅರಿವು ಮೂಡಿಸುವ ಮೂಲಕ ತೀವ್ರ ಜಾಗೃತಿ ಆಂದೋಲನ ನಡೆಸಬೇಕೆಂದರು. ಜಾಗೃತಿಗೆ ಸ್ತ್ರೀಶಕ್ತಿ ಸಂಘಗಳ ಸಹಕಾರ ಪಡೆಯುವಂತೆ ತಿಳಿಸಲಾಯಿತು.
ರಾಜ್ಯದ 4 ವಿಭಾಗದಲ್ಲಿ 4 ಕಡೆ ಮಾದರಿ ಅಂಗನವಾಡಿಗಳನ್ನು ಕಟ್ಟಲಾಗಿದೆ. ಅಂಗನವಾಡಿ ಕಟ್ಟಡಗಳ ರಿಪೇರಿಗೆ ಅನುಮೋದನೆ ನೀಡಲಾಗಿದ್ದು, ಅಧಿಕಾರಿಗಳು ಶೀಘ್ರವೇ ರಿಪೇರಿ ಕಾರ್ಯಕೈಗೊಳ್ಳಬೇಕೆಂದರು. ಜಿಲ್ಲೆಯಲ್ಲಿ ವಿಶೇಷ ಮಹಿಳಾ ಗ್ರಾಮ ಸಭೆಗಳನ್ನು ನಡೆಸುವಂತೆ ತಾಲೂಕಿನ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಮಹಿಳೆಯರ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ತಿಳಿದುಕೊಂಡು ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.
ಜಿಲ್ಲೆಯಲ್ಲಿರುವ ಸ್ತ್ರೀಶಕ್ತಿ ಭವನಗಳಲ್ಲಿ ಆರ್ಥಿಕ ಅಭಿವೃದ್ದಿ ಕಾರ್ಯಚಟುವಟಿಕೆಗಳನ್ನು ಸ್ಥಳೀಯ ಅಗತ್ಯತೆಗಳಿಗನುಗುಣವಾಗಿ ಕೈಗೊಳ್ಳಬೇಕೆಂದರು. ತಾಲೂಕ ಭವನದಲ್ಲಿ ನಿರಂತರವಾಗಿ ವ್ಯಾಪಾರ ನಡೆಯುವಂತೆ ಮಾಡಬೇಕೆಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪಿ.ಎನ್.ಪಾಟೀಲ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ, ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ರಜನೀಶ ಗೋಯಲ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಗೋವಿಂದರಾಜ ಸೇರಿದಂತೆ ಡಾ.ಕೆ.ಎನ್.ವಿಜಯಕುಮಾರ ಹಾಗೂ ಬೆಳಗಾವಿ ವಿಭಾಗದ ಇಲಾಖೆಯ ಎಲ್ಲ ಅಧಿಕಾರಿಗಳು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here