ಸರಳತೆಗೆ ಮತ್ತೊಂದು ಹೆಸರು ಶಾಸ್ತ್ತ್ರೀ

0
157

 

ರಾಷ್ಟ್ತ್ರಪಿತ ಮಹಾತ್ಮಾ ಗಾಂಧಿ  ಹುಟ್ಟಿದ ದಿನವೇ ನಮ್ಮ ದೇಶದ  ಎರಡನೇ ಪ್ರಧಾನಿಯಾಗಿದ್ದ ಲಾಲಬಹಾದ್ದೂರ ಶಾಸ್ತ್ತ್ರಿ ಹುಟ್ಟಿ ಬಂದಿದ್ದಾರೆ.  ನಮ್ಮ ದೇಶದ ರಾಜಕಾರಣಿಗಳಲ್ಲಿಯೇ ಅತ್ಯಂತ ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಅವರು ಹೆಸರಾಗಿದ್ದಾರೆ.

ಈಗ ಇರುವ ರಾಜಕಾರಣಿಗಳು ಭ್ರಷ್ಟಾಚಾರದ ಕಳಂಕವನ್ನು ಮೈಗೆ ಅಂಟಿಸಿಕೊಂಡು ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದರೂ, ನಾನು ಕೇವಲ ಅಪರಾಧಿ ಆಗಿದ್ದೇನೆ ನನ್ನ ಮೇಲಿರುವ ಆರೋಪ ಸಾಬೀತಾದಾಗ ಮಾತ್ರ ನಾನು ನಿಜವಾದ ಅಒರಾಧಿ ಆಗುತ್ತೇನೆ ಎಂದು ಃಏಳು ತಮ್ಮ ಅಧಿಆಖರದ ಕುರ್ಚಿಗೆ  ಪೆವಿಕಾಲ್ ಅಂಟಿಸಿಕೊಂಡು ಗಟ್ಟಿತಯಾಗಿ ಕುಳಿತು ಕೊಳ್ಲುತ್ತಾರೆ, ಆದರೆ ಈ ಲಾಲಬಹಾದ್ದೂರ ಶಾಸ್ತ್ತ್ರೀ ಅವರು  ನೆಹರು ಪ್ರಧಾನಿಯಾಗಿದಾಧಗ ಇವರು ಕೇಂದ್ರ  ರೈಲು ಸಚಿರಾಗಿ  ಕಾರ್ಯ ನಿರ್ವಸುತ್ತಿದ್ದರು. ಆಗ  ಉತ್ತರ ಪ್ರದೇಶದ ಅರಿಯಾಪೂರ ಬಳಿ ಭೀಕರ ರೈಲು ದುರಂತ ನಡೆದು  ನೂರಾರು ಜನರು ಅದಕ್ಕೆ ಬಲಿಯಾದ ಸುದ್ದಿ ಅವರಿಗೆ ತಿಳಿದ ಕೂಡಲೇ ಆ ಅಪಘಾತದ ನೈತಿಕ ಜವಾಬ್ದಾರಿಯನ್ನು  ಹೊತ್ತು ಕೊಂಡು ಅವರು ತಮ್ಮ ಸ್ಥಾನಕ್ಕೆ  ರಾಜೀನಾಮೆ   ನೀಡಿ ರಾಜಿಮೆ ಪತ್ರವನ್ನು ತಮ್ಮ ಆಪ್ತ ಸಹಾಯಕರ ಮೂಲಕ  ಪ್ರಧಾನಿ ಸಚಿವಾಲಯಕ್ಕೆ ಕಳಿಸಿ ನಂತರ ಮನೆಗೆ ಹೋದರು ಕಾರಿನಿಂದ ಇಳಿದು ನೆಗೆ ಹೋದ ಅವರು ತಮ್ಮ ಹೆಂಡತಿ ಲಲಿತಾ ಅವರನ್ನು ಕರೆದು ನಾನು  ಇಂದು ನನ್ನ ಸಚಿವ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದೇನೆ  ಇದುವರೆಗೆ ನೀನು ಪ್ರತಿ ದಿನ ಊಟಕ್ಕಾಗಿ ಎರಡು ತರಕಾರಿ ಮಾಡುತ್ತಿರುವಿ ನಾಳೆಯಿಂದ  ಒಂದೇ ತರಕಾರಿ ಮಾಡಬೇಕು.  ಎಂದು ಹೇಳಿದರು. ಇದು ಅವರು ಎಷ್ಟು ಸರಳ ಇದ್ದರು ಎಂಬುದಕ್ಕೆ ನಿದರ್ಶನವಾಗಿದೆ.

ನೆಹರು  ನಿಧನದ ನಂತರ ಅವರು ದೇಶದ ಪ್ರಧಾನಿಯಾದರೆ ಆಗ ರಶಿಯಾ ದೇಶದ ತಾಷ್ಕಂಟಗೆ  ಹೋಗಿದ್ದರು. ಅಲ್ಲಿಯ ಸರಕಾರ  ಆ ಪ್ರಾಂತದಲ್ಲಿ ಪ್ರಸಿದ್ದವಾಗಿದ್ದ ಅತ್ಯಂತ ಬೆಲೆ ಬಾಳುವ ಉಣ್ಣೆಯ ಕಂಬಳಿಯನ್ನು ಶಾಸ್ತ್ತ್ರಿ ಅವರಿಗೆ  ಕಾಣಿಕೆಯಾಗಿ  ನೀಡಿತ್ತು.  ಅವರ ಆಪ್ತ ಸೇವಕನಿಗೆ ಒಂದು ಸಾದಾ ಕಂಬಳಿಯನ್ನು ನೀಡಿತ್ತು. ಆದರೆ ಶಾಸ್ತ್ತ್ರಿ ಅವರಿಗೆ ಯಾವುದು ಬೆಲೆ ಬಾಳುವ ಕಂಬಳಿ ಯಾವುದು ಸಾದಾ ಕಂಬಳಿ ಎಂಬುದು ಗೊತ್ತಿರಲಿಲ್ಲ ಹೀಗಾಗಿ ತಮಗೆ ಕೊಟ್ಟ ಕಂಬಳಿಯನ್ನು ತಮ್ಮ ಆಪ್ತ ಸೇವಕನಿಗೆ ನೀಡಿ ಅವನ ಸಾದಾ ಕಂಬಳಿಯನ್ನು ತಾವು ಇಟ್ಟುಕೊಂಡಿದ್ದರು. ಆದರೆ ಈ ರೀತಿ ಸರಳವಾಗಿದ್ದ ಅವರು ದೈರ್ಯದಲ್ಲಿ ಹೆಸರಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ  ಪಾಕಿಸ್ತಾನದೊಂದಿಗೆ ಯುದ್ಧ ನಡೆಯಿತು. ಆ ಸಮಯದಲ್ಲಿ ಚೀನಾ ನಾಯಕರು ದಾಳಿಯ ಬೆದರಿಕೆ ಹಾಕಿದಾಗ ನೀವೂ ಬನ್ನಿ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಗುಡುಗಿದ್ದರು. ಆಗ ಅವರು ದೇಶದ ಜನರಿಗೆ ಒಂದು ದಿನ ಉಪವಾಸ ಮಾಡಿಹಣ ಉಳಿಸಲು ಹೇಳಿದಾಗ ದೇಶದ ಜನರು ಸೋಮವಾರ ಉಪವಾಸ ಮಾಡುತ್ತಿದ್ದರು.

loading...

LEAVE A REPLY

Please enter your comment!
Please enter your name here