ನೆನೆಗುದಿಗೆ ಬಿದ್ದ ಯೋಜನೆ ಅನುಷ್ಠಾನಕ್ಕೆ ಪ್ರಣವ ಪಾಟೀಲ ಆಗ್ರಹ

0
34

 

ಬೈಲಹೊಂಗಲ.05: ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ಪ್ರದೇಶ ಜನಸಾಮಾನ್ಯ ದಿ. ವಿ.ಎಲ್.ಪಾಟೀಲ ಫೌಂಡೇಷನ ವಿಭಾಗದ ಅಧ್ಯಕ್ಷ ಪ್ರಣವ ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಎಸ್.ಆರ್. ಸರ್ಕಲ ಬಳಿ ತಾಲೂಕಾ ಕಳಸಾ-ಬಂಡೂರಿ, ಮಹದಾಯಿ ನದಿ ಜೋಡಣೆ ಹೋರಾಟದ 28 ನೇದಿನದ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಟ್ಯಾಕ್ಷಿ ಮಾಲಕ, ಚಾಲಕರ ಸಂಘದಿಂದ ಅನಿರ್ದಿಷ್ಟ ಅವಧಿಯ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಹೋರಾಟದ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷಯ ಭಾವನೆ ತೋರದೆ ಸೂಕ್ತ ನಿರ್ಣಯ ಕೈಗೊಳ್ಳಲು ಗಟ್ಟಿತನದ ನಿರ್ಧಾರ ಅವಶ್ಯವಾಗಿದೆ ಎಂದರು.
ರಾಜ್ಯ ಸರ್ಕಾರ ಕೇಂದ್ರಕ್ಕೆ ರೈತರ ನಿಯೋಗ ಒಯ್ದು ವಾಸ್ತವದ ಸ್ಥಿತಿಯನ್ನು ತಿಳಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದಲ್ಲಿ ಕೃಷಿ, ನೀರಾವರಿ, ವಿದ್ಯುತ, ಶಿಕ್ಷಣ ಹಾಗೂ ಬರ ನಿರ್ವಹಣೆ ಕೆಲಸ, ಸಾಮಾಜಿಕ ಅಭಿವೃದ್ದಿ ಕಾರ್ಯಗಳು ತುರ್ತಾಗಿ ಆಗಬೇಕಾಗಿದೆ. ರೈತರು ಹಗಲು-ರಾತ್ರಿ ಎನ್ನದೆ ದೇಶದ ಆಹಾರ ಭದ್ರತೆಗೆ ದುಡಿದು ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ರೈತರು ಕಷ್ಟಪಟ್ಟ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದು ತುಂಬಾ ಕಳವಳಕಾರಿ ವಿಷಯವಾಗಿದ್ದು, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮೊದಲು ಆಗಬೇಕು.
ದೇಶಕ್ಕೆ ಅನ್ನ ನೀಡುವವನಿಗೆ ಇಂತಹ ಪರಿಸ್ಥಿತಿ ಒದಗಿದರೆ ಮುದೊಂದು ದಿನ ಅನ್ನಕ್ಷಾಮ ಬರುವದು ನಿಶ್ಚಿತ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತನ ಬಾಳಿಗೆ ನೂತನ ಯೋಜನೆಗಳನ್ನು ರೂಪಿಸಬೇಕು ಎಂದರು. ಕಳಸಾ ಬಂಡೂರಿ, ಮಹದಾಯಿ ನದಿ ಜೋಡಣೆ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಶಿವರಂಜನ ಬೋಳನ್ನವರ ಮಾತನಾಡಿ, ಈ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟದ ಸ್ವರೂಪ ತಾಳಲಿದೆ ಎಂದರು. ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರು, ನೂರಾರು ನಾಗರಿಕರು ಇದ್ದರು.

loading...

LEAVE A REPLY

Please enter your comment!
Please enter your name here