ಸೋನಿಯಾ ಗಾಂಧಿಯವರಿಗೆ ವಾಸ್ತವಿಕತೆ ಮನವರಿಕೆ ಮಾಡಿಕೊಡಲಾಗುವದು : ಲಕ್ಷ್ಮೀ ಹೆಬ್ಬಾಳಕರ

0
28

ಬೈಲಹೊಂಗಲ.05: ಸೋನಿಯಾ ಗಾಂಧಿಯವರು ಗೋವಾ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನು ಬಿಡುವದಿಲ್ಲ ಎಂಬ ಹೇಳಿಕೆಯನ್ನು ರಾಜ್ಯದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ಜಿ.ಪರಮೇಶ್ವರ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರ ಪರವಾಗಿ ಅವರಿಗೆ ವಾಸ್ತವಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಗುವುದೆಂದು ರಾಜ್ಯ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಸೋಮವಾರ ಪಟ್ಟಣದ ಎಸ್.ಆರ್. ಸರ್ಕಲ ಬಳಿ ತಾಲೂಕಾ ಕಳಸಾ-ಬಂಡೂರಿ, ಮಹದಾಯಿ ನದಿ ಜೋಡಣೆ ಹೋರಾಟದ 28 ನೇದಿನದ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನಂತರ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬೈಲಹೊಂಗಲ ಪಟ್ಟಣದಲ್ಲಿ ಕಳಸಾ ಬಂಡೂರಿ, ಮಹದಾಯಿ ಹೋರಾಟ ಪಕ್ಷಾತೀತವಾಗಿ ಹಮ್ಮಿಕೊಂಡಿರುವದು ಸ್ವಾಗತಾರ್ಹವಾಗಿದ್ದು ರಾಜ್ಯಕ್ಕೆ ರಾಹುಲಗಾಂಧಿ ಭೇಟಿ ನಂತರ ಮುಖ್ಯಮಂತ್ರಿಗಳು ಮತ್ತೊಮ್ಮೆ ರಾಜ್ಯದ ಸರ್ವ ಪಕ್ಷಗಳ ನಿಯೋಗವನ್ನು ಒಯ್ಯಲು ಪ್ರಧಾನ ಮಂತ್ರಿಗಳ ಬಳಿ ಸಮಯವನ್ನು ಕೇಳಲಾಗಿದೆ ಎಂದರು.
ಹೋರಾಟದ ತೀವ್ರತೆಯಿಂದ ರಾಜಕಾರಣಿಗಳಿಗೆ ಯೋಜನೆಯ ಕುರಿತು ಇಚ್ಚಾಶಕ್ತಿ ಕಾಣುತ್ತಿದೆ. ರಾಜ್ಯ ಸರ್ಕಾರ ನ್ಯಾಯಾಧೀಕರಣದಲ್ಲಿರುವ ಪ್ರಕರಣ ಇತ್ಯರ್ಥಪಡಿಸಲು ನೀರಾವರಿ ಸಚಿವ ಎಂ.ಬಿ.ಪಾಟೀಲರು ಸಹ ಕಾನೂನ ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ನ್ಯಾಯಧೀಕರಣದ ತೀರ್ಪು ರಾಜ್ಯದ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಹೋರಾಟಕ್ಕೆ ಸಂಸದ ಸುರೇಶ ಅಂಗಡಿಯವರು ಜಿಲ್ಲಾ ನೇತೃತ್ವ ವಹಿಸಿಕೊಂಡಿರುವದು ಸ್ವಾಗತಾರ್ಹವಾಗಿದ್ದು ನಾವು ಕೂಡಾ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಭಾಗವಹಿಸುತ್ತೇವೆ ಎಂದರಲ್ಲದೆ ಕುಡಿಯುವ ನೀರು, ಆರೋಗ್ಯ, ವಿದ್ಯಾಭ್ಯಾಸದ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡುವದಿಲ್ಲ. ಕುಡಿಯುವ ನೀರಿನ ವಿಷಯ ಕುರಿತು ಗಂಭಿರ ಚಿಂತನೆ ಮಾಡುವದು ಅಗತ್ಯವಾಗಿದೆ ಎಂದರಲ್ಲದೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸೋಣ ಎಂದರು.
ಸಾಂತ್ವಾನ :- ಕಳೆದ ಶುಕ್ರವಾರ ಸತ್ಯಾಗ್ರಹದ ಸಮಯದಲ್ಲಿ ಭಾವನಾತ್ಮಕವಾಗಿ ಘೋಷಣೆ ಕೂಗುವಾಗ ಹೃದಯಾಘಾತದಿಂದ ಮರಣ ಹೊಂದಿದ ಕೋಮಲಕುಮಾರ ಪೂಜೇರಿ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿ, ರೂ.15 ಸಾವಿರ ಪರಿಹಾರ ಹಣ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಕೌಜಲಗಿ, ಮಹಾಂತೇಶ ಮತ್ತಿಕೊಪ್ಪ, ಶಿವರುದ್ರ ಹಟ್ಟಿಹೊಳಿ, ಈರಣ್ಣ ಬೆಟಗೇರಿ, ಪ್ರಕಾಶ ಮೂಗಬಸವ. ಕಾರ್ತಿಕ ಪಾಟೀಲ, ಸಿದ್ದು ಮೂಗಿ, ಮಹಾಂತೇಶ ಕಳ್ಳಿಬಡ್ಡಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here