ಸತ್ಯಸಾಯಿಬಾಬಾ 90 ನೇ ಜನ್ಮದಿನೋತ್ಸವ

0
65

ಮುಂಡಗೋಡ,28: ಸತ್ಯ ಸಾಯಿ ಸೇವಾ ಸಮಿತಿ ಮುಂಡಗೋಡ ಹಾಗೂ ಉತ್ತರಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಭಗವಾನ  ಸತ್ಯಸಾಯಿಬಾಬಾ ಅವರ 90 ನೇ ಜನ್ಮದಿನೋತ್ಸವ ಮತ್ತು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸುವರ್ಣ ಮಹೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಶ್ರೀ ಸತ್ಯಸಾಯಿ ಸಾದನ ರಥಯಾತ್ರೆ ಮಂಗಳವಾರ ಪಟ್ಟಣದಲ್ಲಿ ಸಂಚರಿಸಿತು.
ಮೆರವಣಿಗೆ, ಬೈಕ್ ರ್ಯಾಲಿ: ಇಲ್ಲಿಯ ಹಳೂರ ಶ್ರೀ ಮಾರಿಕಾಂಬಾ ದೇವಾಲಯ ಬಳಿ ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತಾಧಿಗಳು ಅದ್ದೂರಿ ಸ್ವಾಗತದೊಂದಿಗೆ ಸಾದನಾ ರಥವನ್ನು ಬರಮಾಡಿಕೊಂಡು ಬೈಕ್ ರ್ಯಾಲಿ ಹಾಗೂ ಮಹಿಳೆಯರಿಂದ ಕುಂಭ ಮೇಳದೊಂದಿಗೆ ಮೆರವಣಿಗೆ ಹೊರಟು ಬನ್ನಿಕಟ್ಟೆ ಮಾರ್ಗವಾಗಿ ಅಂಬೇಡ್ಕರ ಓಣಿ, ಬಸವನ ಬೀದಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹುಬ್ಬಳ್ಳಿ ರಸ್ತೆ ಮೂಲಕ ದೈವಜ್ಞ ಸಭಾ ಭವನ ಪ್ರವೇಶಿಸಿ ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಸಲಾಯಿತು. ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಸಾದನಾ ರಥವನ್ನು ಬೀಳ್ಕೊಡಲಾಯಿತು.
ಮುಂಡಗೋಡ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಮುಖ್ಯಸ್ಥ ಅಶೋಕ ಗೋಕರ್ಣ, ತುಕಾರಾಮ ಕಲಾಲ ಹಾಗೂ ಶಿವಾನಂದ ಗಾಣಿಗೇರ ನೇತ್ರತ್ವ ವಹಿಸಿದ್ದರು. ಮಾಜಿ ಶಾಸಕ ವಿ,ಎಸ್.ಪಾಟೀಲ, ಪ.ಪಂ ಅಧ್ಯಕ್ಷ ಫಣಿರಾಜ ಹದಳಗಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here