ಪಾದಯಾತ್ರಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಯಶಸ್ವಿ

0
48

ಜಮಖಂಡಿ: ಸುಕ್ಷೇತ್ರ ಬಂಡಿಗಣಿಯ ಶ್ರೀಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳಿಂದ ನವರಾತ್ರಿ ನಿಮಿತ್ಯ ತುಳಜಾಪೂರದ ಅಂಬಾಭವಾನಿಯ ದರ್ಶನಕ್ಕೆ ತೆರಳುವ ಪಾದಯಾತ್ರಾರ್ಥಿಗಳಿಗೆ ನಾಗನಾಥ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಅನ್ನದಾಸೋಹ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ಎಂದು ವರದಿಯಾಗಿದೆ.
ಸುಮಂಗಲಾತಾಯಿ ಪಾಟೀಲ ಅವರಿಂದ ಸಾವಿರಾರು ಜನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಅನ್ನದಾಸೋಹ ಸೇವೆಗಾಗಿ ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಗಳಿಂದ 400 ಜನ ಪುರುಷರು ಹಾಗೂ 450 ಜನ ಮಹಿಳೆಯರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಚಕ್ರವರ್ತಿ ದಾನೇಶ್ವರ ಶ್ರೀಗಳು ಭಕ್ತರನ್ನುದ್ದೇಶಿಸಿ ಮಾತನಾಡುತ್ತಾ, ಮಾನವ ಜನ್ಮ ಬಂದಿದ್ದು ಪೂರ್ವಜನ್ಮದ ಸುಕೃತದಿಂದ. ಈ ಜನ್ಮದಲ್ಲಿ ನಾವು ಕಿಂಚಿತ್ತಾದರು ಭಗವಂತನ ನಾಮಸ್ಮರಣೆಯನ್ನು ಮಾಡಲೇಬೇಕು. ಅಂದಾಗ ಈ ಮಾನವ ಜನ್ಮ ಉದ್ಧಾರವಾಗಲು ಸಾಧ್ಯ. ಆದ್ದರಿಂದ ಎಲ್ಲರೂ ಕಾಯಾ, ವಾಚಾ, ಮನಸಾ ಹಾಗೂ ಭಕ್ತಿಯಿಂದ ದೇವರನ್ನು ಸ್ಮರಿಸಿ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here