ಉಳುವ ಯೋಗಿಯ ಶವಯಾತ್ರೆಗೆ ಕೊನೆ ಎಂದು?

0
65

navalagunda

ಮಾಬುಸಾಬ.ಎಮ್.ಯರಗುಪ್ಪಿ.

ನವಲಗುಂದ,31: ಈ ವರ್ಷದ ಭೀಕರ ಬರಗಾಲ ರೈತಕುಲವನ್ನು ಸಂಕಷ್ಟಕ್ಕೇ ಸಿಲುಕುವಂತೆ ಮಾಡಿದೆ. ಮಳೆರಾಯನ ಮುನಿಸು ಅನ್ನದಾತನಿಗೆ ದಿಕ್ಕು ತಪ್ಪಿಸಿದೆ. ಭೂಮಿಯಲ್ಲಿ ಬಿತ್ತಿದಂತಹ ಕಾಳು ಮೂಳಕೆ ಒಡೆಯದೆ ಹಾಗೆ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಉಳುವ ಯೋಗಿಗೆ ಬದುಕು ಭಾರವಾಗುವ ಸ್ಥಿತಿ ಬಂದು ಆತ್ಮಸ್ಥೈರ್ಯವನ್ನು ಕಳೆದುಕೂಂಡು ಆತ್ಮಹತ್ಯೆಯನ್ನು ಮಾಡಿಕೂಳ್ಳುತ್ತಿದಾರೆ.

ರೈತರ ಆತ್ಮಹತ್ಯೆ ಇಂದು ನಿನ್ನೇಯದಲ್ಲಾ.

ಮನುಕುಲ ಒಂದು ಕಡೆ ನೆಲೆ ನಿಂತು ಭೂಮಿಗೆ ಹಕ್ಕುದಾರನಾದ ಕ್ಷಣದಿಂದಲೇ ನೆಲದ ಆಗು-ಹೋಗುಗಳು ಜೀವನ್ಮರÀಣದ ಮಧ್ಯದ ಪ್ರಶ್ನೇಗಳಾಗಿ ಉಳಿದಿವೆ. ರೈತ ಬೆಳೆದ ಬೆಳೆಯಿಂದ ಹಿಡಿದು ಫಸಲು ಬರುವವರೆಗೆ ಚಳಿ-ಮಳೆಯನ್ನು ಲೆಕ್ಕಿಸದೆ ಹಗಲಿರುಳು ಭೂಮಿತಾಯಿಯೊಂದಿಗೆ ಸಂಬಂಧವನ್ನಿಟ್ಟುಕೂಂಡು ಇಡೀ ಸಮುದಾಯವನ್ನು ಸಾಕುತ್ತಿರುವÀ ಅನ್ನದಾತ ಬರವೋ ನೆರೆಯೋ ರೈತನನ್ನು ಎಲ್ಲ ಆಳುವವರು ಶಕ್ತ್ಯಾನುಸಾರ ಸುಲಿದಿದ್ದಾರೆ. ಆದರೆ ನಿಜವಾಗಿಯು ಭಾರತದ ರೈತಕುಲಕ್ಕೆ ಸಂಕಷ್ಟ ಬಂದಿದ್ದು ವಸಾಹತುಶಾಹಿ ಆಡಳಿತದಲ್ಲಿ ಯಾಕೆಂದರೆ ಈ ವಸಾಹತುಶಾಹಿ ಆಡಳಿತದವರು ತಮಗೆ ಅತೀ ಅವಶ್ಯವಿರುವಂತಹ ಬೆಳೆಗಳಾದ ತಂಬಾಕು, ಕಬ್ಬು, ಹತ್ತಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಒತ್ತಾಯಿಸಿದ್ದು ಇತಿಹಾಸದಲ್ಲಿದೆ. ಅದೇ ರೀತಿ ಬೆಳೆಯನ್ನು ಬೆಳೆದವರಿಗೆ ಭಾರಿ ಪ್ರಮಾಣದ ತೆರಿಗೆಯನ್ನು ಹೇರಿದ ಬ್ರಿಟಿಷರು ಒಂದಡೆಯಾದರೆ, ಸಣ್ಣಪುಟ್ಟ ವ್ಯವಹಾರವನ್ನು ಬಡ್ಡಿಯ ಆಸೆಗಾಗಿ ಮಾಡಿದ ಲೇವಾದೇವಿಗಾರರು ಹದಿನೆಂಟು- ಮತ್ತೂಂಬತ್ತನೆ ಶತಮಾನದ ಭಾರತದ ರೈತರು ದಂಗೆಯೇಳುವಂತೆ ಹಾಗೂ ಆತ್ಮಹತ್ಯೆಯನ್ನು ಮಾಡಿಕೂಳ್ಳುವಂತೆ ಪ್ರೇರೆಪಿಸಿದರು. ಬೃಹತ್ ಬಂಡವಾಳಗಾರರು ಕೃಷಿ ಕ್ಷೇತ್ರಕ್ಕೇ ಕಾಲಿಟ್ಟಿರುವದರಿಂದ ಇಡಿ ದೇಶವೆ ಜಾಗತೀಕರಣÀವಾಯಿತು ಇದರಿಂದ ರೈತರ ಬದುಕು ಅತಂತ್ರವಾಗಿ ರೈತರ ಆತ್ಮಹತ್ಯೆಯು ಹೆಚ್ಚುತ್ತಾ ಹೂರಟಿತು.

[highlight]ಬರಗಾಲದ ಭವಣೆಗೆ ತತ್ತರಿಸಿದ ರೈತಕುಲ

ಇಂದು ಬರಗಾಲದ ಭವಣೆಯು ಇಡಿ ರೈತಸಮುದಾಯವನ್ನು ಚಿಂತೆಗಿಡು ಮಾಡಿದೆ. ಬಿತ್ತಲು ಕಾಳು, ಗೂಬ್ಬರ ಕೂಳ್ಳಲು ಕೈಗಡವಾಗಿ ಲೇವಾದೇವಿದಾರರಿಂದ ಹಾಗೂ ಬ್ಯಾಂಕಿನಿಂದ ಸಾಲವನ್ನು ಪಡೆದು ಬಿತ್ತಿದರೆ ಪ್ರಕೃತಿಯ ಆಟದೋಳಗ ಭೂಮಿತಾಯಿಯ ಉಡಿಯು ಇಂದು ಬರಿದಾಗಿ ನಿಂತಿದೆ. ಒಂದು ಕಡೆ ಮಳೆಯಿಲ್ಲದೆ ಬೆಳೆಯಿಲ್ಲಾ, ಬೆಳೆಯಿಲ್ಲದೆ ಬದುಕಿಲ್ಲಾ . ಬೆಳೆಯಿದ್ದರೆ ಅದಕ್ಕೆ ಸರಿಯಾದ ಬೆಲೆಯಿಲ್ಲಾ ಎಲ್ಲವು ದಲ್ಲಾಳಿಗಳ ಕೈಗೂಪ್ಪಿಸಿ ಮನೆಗೆ ಬರುವ ರೈತರ ಬದುಕು ಒಂದು ಕಡೆಯಾದರೆ. ಇಂದು ಇದೆ ಮಳೆ ಬಾರದೇಯಿರುವುದರಿಂದ ಮಾನವಕುಲದೂಂದಿಗೆ ಜಾನುವಾರುಗಳಿಗೂ ಕುಡಿಯಲು ನೀರು ಸಹ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಕೈಕಟ್ಟಿಕುಳಿತಿರುವುದು ಎಷ್ಟು ಸರಿ? ಈ ಒಂದು ಬರಗಾಲಕ್ಕೆ ಇಂದು ರಾಜ್ಯದಲ್ಲಿ ಸುಮಾರು 530 ಮಂದಿ ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

[highlight]ರೈತರಿಗೆ ವಿಶೇಷ ಪರಿಹಾರ ಸಿಕ್ಕಿದೆಯಾ?

ರೈತಕುಲ ಒಡೆಯನ ಸರಣಿ ಆತ್ಮಹತ್ಯೆಯು ದಿನದಿಂದ ದಿನಕ್ಕೆ ಮುಂದುರೆದಿದೆ. ಉತ್ತರ ಕರ್ನಾಟಕದ ಕಡೆ ಬೆಳೆ ಬಂದಿಲ್ಲವೆಂದು ನೂಂದಿರುವ ರೈತರು ಮಾಡಿದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಯನ್ನು ಮಾಡಿಕೂಳ್ಳುತ್ತಿದ್ದರೆ ದಕ್ಷಿಣ ಕರ್ನಾಟಕದ ರೈತರು ಬೆಳೆದ ಕಬ್ಬು, ಭತ್ತಕ್ಕೆ ಸರಿಯಾದ ಬೆಲೆ ಬಾರದೆ ನೂಂದ ಅನ್ನದಾತ ಬೆಳೆದ ಬೆಳೆದ ಬೆಂಕಿ ಹಚ್ಚುವುದರ ಮೂಲಕ ಸರಕಾರದ ವಿರುದ್ದ ತನ್ನ ಆಕ್ರೋಶವನ್ನು ವ್ಯೆಕ್ತಪಡಿಸಿ ಬಡವನ ಸಿಟ್ಟು ದವಡೆಗೆ ಮೂಲವೆನ್ನುವಂತೆ ತನ್ನ ಕೂಪಕ್ಕೇ ತಾನೇ ಬಲಿಯಾಗುತ್ತಿರುವುದು ನಮ್ಮ ದೇಶದ ದುದ್ರೈವದ ಸಂಗತಿ, ಹಿಗೆಯೇ ರೈತರ ಆತ್ಮಹತ್ಯೆಯು ಮುಂದುವರೆದರೆ ಮುಂದೂಂದು ದಿನ ರೈತರನ್ನು ಹುಡುಕುವಂತಹ ಪರಿಸ್ಥಿತಿ ಬಂದರು ಆಶ್ಚರ್ಯಪಡಬೇಕಾಗಿಲ್ಲಾ.

ಪರಿಹಾರ ನೀಡುವಲ್ಲಿಯು ತಾರತಮ್ಯ.

ಇಂದು ರೈತರು ಬಿತ್ತುವುದನ್ನು ಬಿಟ್ಟು ಬೇರೆ ಕಾಯಕದ ಕುರಿತು ಕಲಿತಿರುವುದಿಲ್ಲಾ. ಇಂತಹ ಪರಿಸ್ಥಿತಿಯಲ್ಲಿ ಭೂಮಿತಾಯಿಯ ಮಡಿಲಲ್ಲಿ ಬೆಳೆಯಿಲ್ಲದೆ ಬರಡಾಗಿರುವುದನ್ನು ಕಂಡು ಆತ್ಮಹತ್ಯೆಯನ್ನು ಮಾಡಿಕೂಂಡಿರುವ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಣೆ ಮಾಡಿದರೆ ಆ ಪರಿಹಾರ ಆ ಕುಟುಂಬಕ್ಕೆ ಸರಿಯಾಗಿ ಮುಟ್ಟಿದೆಯಾ ಅಂತಾ ಆ ಕುರಿತು ವರದಿಯನ್ನು ಸಂಬಂದಪಟ್ಟ ಜಿಲ್ಲಾಧಿಕಾರಿಗಳಿಂದ ಎಷ್ಟು ಸಾರಿ ಪಡೆದಿದೆ ಅನ್ನುವುದು ನಾವೆಲ್ಲರು ಯೋಚಿಸಬೇಕಾಗಿದೆ ಯಾಕೆಂದರೆ ಮಂಡ್ಯದಲ್ಲಿ ರೈತ ಆತ್ಮಹತ್ಯೆಯನ್ನು ಮಾಡಿಕೂಂಡಿರುವಂತಹ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ರಾಜಕೀಯವನ್ನು ಮಾಡಿದ್ದು ಎಲ್ಲರಿಗು ತಿಳಿದಿರುವಂತಹ ವಿಷಯವಾಗಿದೆ. ಇಂದು ಆತ್ಮಹತ್ಯೆಯನ್ನು ಮಾಡಿಕೂಂಡಿರುವ ಎಷ್ಟು ಅನ್ನದಾತರ ಕುಟುಂಬಕ್ಕೆ ಸರಿಯಾಗಿ ಪರಿಹಾರ ಧನ ಸಿಕ್ಕಿದೆ ಮತ್ತು ನಮ್ಮ ರಾಜ್ಯ ಸರ್ಕಾರ ರೈತರ ಆತ್ಮಹತ್ಯೆಯನ್ನು ತಡೆಯುವಲ್ಲಿ ವಿಫ¯ವಾಗಿರುವುದರ ಜೊತೆಗೆ ಪರಿಹಾರವನ್ನು ಸರಿಯಾಗಿ ನೀಡುವಲ್ಲಿಯು ಕೂಡಾ ತಾರತಮ್ಯ ನೀತಿಯನ್ನು ಅನುಸರಿಸಿದೆ.

ಅಸಾಮಾನ್ಯ ರೈತರ ವಿದ್ಯೆ.

ಈ ಭೂಮಿಯ ಮೇಲೆ ಮನುಷ್ಯನ ಸಂಬಂಧ ಸುಮಾರು ಆರೆಂಟು ಸಾವಿರ ವರ್ಷಗಳದ್ದು. ನಾಗರಿಕತೆಯು ಬೆಳೆದಿದ್ದು ಕೃಷಿ ಶುರುವಾದ ನಂತರ. ಭೂಮಿತಾಯಿ ಇದು ಮನುಕುಲಕ್ಕೆ ಸಿಕ್ಕಿರುವಂತಹ ಅತ್ಯಮೂಲ್ಯವಾದಂತಹ ಚಿನ್ನ , ಯಾಕೆಂದರೆ ಇಂದು ಈ ಮನುಕುಲ ಬದುಕಲು ಕಾರಣವೆ ಅದು. ಈ ನೆಲದ ನಂಟಿನ ಕಾರಣವಾಗಿ ರೈತ ಗಳಿಸಿಕೂಂಡ ಜ್ಞಾನವು ಅಸಾಮಾನ್ಯವಾದುದು. ಆ ಒಂದು ಕ್ಷೇತ್ರದಲ್ಲಿ ತೂಡಗಿಸಲು ಶ್ರಮವೆಂಬ ಬಂಡವಾಳವನ್ನು ಯಾರೂ ಹೇಳಿ ಕೂಡದ ಪಾಠವನ್ನು ನೆಲ ಸ್ಪರ್ಶಿಸುತ್ತಲೆ ಹೇಳಿಕೂಡುತ್ತದೆ. ಯಾವ ನೆಲದಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು, ಬಿತ್ತನೆಯ ವಿಧಾನ, ಹವಾಮಾನಕ್ಕೆ ತಕ್ಕಂತೆ ಬೆಳೆಯು ಬೆಳೆಯುವುದರ ಜೋತೆಗೆ ಬೆಳೆಯ ಸಂಗ್ರಹ-ವಿನಿಮಯ-ವಿನಿಯೋಗ ಹೇಗೆ ಎನ್ನುವುದೆಲ್ಲಾ ಈ ನೆಲ ಮನುಷ್ಯನಿಗೆ ಹೇಳಿಕೂಟ್ಟಿದೆ.

ಸ್ಪಂದನೆ ನೀಡದ ಸರಕಾರಗಳು.

ರೈತರು ಈ ದೇಶದ ಬೆನ್ನೇಲಬು ಅಂತಾ ಹೇಳುವ ಸರಕಾರಗಳು ಇಂದು ರೈತರ ಮೇಲೆ ಚಪ್ಪಡಿ ಕಲ್ಲನ್ನು ಎಳೆಯುವ ಕೆಲಸವನ್ನು ಮಾಡುತ್ತಿದೆ. ಈ ನಮ್ಮ ರಾಜ್ಯದ ವ್ಯೆವಸ್ಥೆಯಲ್ಲಿ ರೈತರು ಏನಾದರು ಸವಲತ್ತು ಪಡೆಯಲು ಹೋರಾಟವನ್ನು ಮಾಡುವುದು ಅನಿವಾರ್ಯವಾಗಿದೆ. ಇಂದು ನವಲಗುಂದ- ನರಗುಂದದಲ್ಲಿ ರೈತರು ನೀರಿಗಾಗಿ ಹೋರಾಟವನ್ನು ಮಾಡುತ್ತಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದನೆಯನ್ನು ನೀಡದಿದ್ದರೆ ಇದಕ್ಕು ತಮಗೂ ಯಾವುದೆ ಸಂಬಂಧವಿಲ್ಲವೆನ್ನುವಂತೆ ಇಲ್ಲಿಯವರೆಗೆ ಈ ಭಾಗದ ಜನಪ್ರತಿನಿಧಿಗಳು ನಡೆದುಕೂಂಡಿದಾರೆ, ಇವರು ನೀರಿನಲ್ಲಿಯು ರಾಜಕೀಯವನ್ನು ಮಾಡುತ್ತಿದ್ದಾರೆ.

ರೈತರ ಆತ್ಮಹತ್ಯೆ ನಿಲ್ಲಲಿ.

ಇಂದು ನಾಡಿನಲ್ಲಿ ಅನ್ನದಾತನ ಶವಯಾತ್ರೆ ನಡೆಯುತ್ತಿದ್ದರೆ ಸರಕಾರಗಳು ಇಲ್ಲಿಯವರೆ ರೈತರ ಆತ್ಮಹತ್ಯೆಯನ್ನು ತಡೆಯಲು ಒಂದು ಸರಿಯಾದ ಕ್ರಮವನ್ನು ತೆಗೆದುಕೂಳ್ಳದಿರುವುದು ದುದ್ರ್ರೈವದ ಸಂಗತಿಯಾಗಿದೆ. ಇವತ್ತು ಅನ್ನದಾತರಿಗೆ ಇಂತಹ ಪರಿಸ್ಥಿತಿ ಬರಲು ನಮ್ಮನ್ನಾಳುವ ಜನಪ್ರತಿನಿಧಿಗಳೆ ಕಾರಣ. ಕೇವಲ ಚುನಾವಣೆ ಬಂದಾಗ ನಾವು ನಿಮ್ಮೂಂದಿಗಿದ್ದೇವೆ ಅಂತಾ ಉದ್ದುದ್ದ ಭಾಷಣವನ್ನು ಮಾಡುವ ರಾಜಕೀಯದವರು ಗೆದ್ದು ಬಂದ ನಂತರ ರೈತರ ನೋವಿಗೆ ಸ್ಪಂದಿಸದಿರುವುದು ಅವರ ನಿಜವಾದ ಬಣ್ಣ ತೋರಿಸಿ ಕೂಡುತ್ತದೆ. ಸಾಲ ಮನ್ನಾ,ಬಡ್ಡಿ ಮನ್ನಾದಂತಹ ಜನಪ್ರೀಯ ಘೋಷಣೆಗಳು, ಕ್ರಮಗಳು ರೈತರ ಭವಣೆಯನ್ನು ಸದ್ಯಕ್ಕೆ ಮಾತ್ರ ನೀಗುತ್ತದೆ ಆದರೆ ಸಮಸ್ಯೆಯು ಮಾತ್ರ ಹಾಗೆಯೇ ಮುಂದುವರೆಯುತ್ತದೆ. ಜೂತೆಗೆ ಸರಕಾರಿ ಬ್ಯಾಂಕುಗಳಿಂದ ತೆಗೆದುಕೂಂಡಿರುವಂತಹ ಸಾಲವೇನು ಮನ್ನಾ ಆಗಬಹುದು ಆದರೆ ಲೇವಾದೇವಿದಾರರ ಸಾಲ, ಬಡ್ಡಿ ಮನ್ನಾ ಆಗುವುದೆ ಬಡ್ಡಿ ಚಕ್ರ ಬಡ್ಡಿಯ ಸುಲಿಗೆ ಸಿಕ್ಕು ಆತ್ಮಹತ್ಯೆಯನ್ನು ಮಾಡಿಕೂಳ್ಳುವಂತಹ ಪರಿಸ್ಥಿತಿ ನಿರ್ಮಾನವಾಗುತ್ತದೆ. ಈ ರ್ಯತಕುಲದ ಒಡೆಯನ ಆತ್ಮಹತ್ಯೆ ಯಾವಾಗ ನಿಲ್ಲುವುದು ಎಂಬ ಪ್ರಶ್ನೇ ಸಾರ್ವಜನಿಕರನ್ನು ಕಾಡುತ್ತಿದೆ.

[highlight]

ಯಾವುದೆ ಫಲವನ್ನು ಬಯಸದೇ ಉಳುವ ಕಾಯಕದಲ್ಲಿ ತೂಡಗುವ ರೈತರು ಇಂದು ಬರಗಾಲದಿಂದ ಬೆಳೆಬಾರದೇ ಮಾಡಿದ ಸಾಲ ದ್ವೀಗುಣವಾಗಿ ಆತ್ಮಹತ್ಯೆಯನ್ನು ಮಾಡಿಕೂಳ್ಳುತ್ತಿದ್ದಾರೆ. ಭೂಮಿ ತಾಯಿಯ ಪುತ್ರರಾಗಿ ಹಗಲಿರುಳು ಚಳಿ-ಮಳೆಯನ್ನು ಲೆಕ್ಕಿಸದೇ ಫಸಲು ತೆಗೆದು ಮಾರುಕಟ್ಟೆಗೆ ತರುವ ರೈತನ ಸೇವೆಗೆ ನಾವು ಯಾವಾಗಲೂ ಕೃತಘ್ನರಾಗಿರಬೇಕು. ಇಂತವರು ದಯಮಾಡಿ ಆತ್ಮಹತ್ಯೆಯನ್ನು ಯಾವುದೇ ಕಾರಣಕ್ಕೂ ಮಾಡಿಕೂಳ್ಳಬಾರದು ಯಾಕೆಂದರೆ ಸಾವೇ ಎಲ್ಲದಕ್ಕು ಪರಿಹಾರವಲ್ಲ. ಈಜಬೇಕು ಇದ್ದು ಜಯಿಸಬೇಕು ಎನ್ನುವ ಗಾದೆ ಮಾತಿನಂತೆ ಬದುಕು ಸಾಗಿಸಿದಾಗ ಎಲ್ಲದಕ್ಕು ಪರಿಹಾರ ಸಿಕ್ಕೆ ಸಿಗುತ್ತದೆ.

  • ಶ್ರೀಶೈಲ ಮೂಲಿಮನಿ
loading...

LEAVE A REPLY

Please enter your comment!
Please enter your name here