ಕಪ್ಪು ಪಟ್ಟಿ ಕಟ್ಟಿಕೊಂಡು ರಾಜೋತ್ಸವ ಆಚರಿಸಿದ ಸಮನ್ವಯ ಸಮಿತಿ

0
50

ಹುಬ್ಬಳ್ಳಿ,2: ಧರಣಿ ನಿರತ ಕಳಸಾಬಂಡೂರಿ ಸಮನ್ವಯ ಸಮಿತಿ ವೇದಿಕೆಯಲ್ಲಿ ಸದಸ್ಯರೆಲ್ಲರೂ ಕಪ್ಪು ಬಟ್ಟೆ ಕಟ್ಟಿಕೊಂಡು ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿದರು.
ಈ ಸಮಯದಲ್ಲಿ ಸಮಿತಿಯ ಅಧ್ಯಕ್ಷ ಸಿದ್ದು ತೇಜಿ ಮಾತನಾಡಿ ರಾಜ್ಯದಲ್ಲಿ 700ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಅವರ ಸಾವಿನ ಸರಣಿ ಮುಗಿದಿಲ್ಲ, ಈಗಲೂ ದಿನ ನಿತ್ಯ 2-3 ಜನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದನ್ನು ತಡೆಯಲು ರಾಜ್ಯ ಸರಕಾರÀದ ಆಡಳಿತ ಯಂತ್ರ ಮತ್ತು ಮುಖ್ಯಮಂತ್ರಿಗಳು ಅಸ್ಥೆವಹಿಸುತ್ತಿಲ್ಲ ಹೀಗಾಗಿ ರೈತರನ್ನು ದೇವರೇ ಕಾಪಾಡ ಬೇಕೆಂದು ನುಡಿದರು. ಅಲ್ಲದೇ ರೈತರು ಸತತವಾಗಿ 110 ದಿನಗಳಿಂದ ಪ್ರತಿಭಟನೆ ಮಾಡುತ್ತಾ ಇದ್ದರೂ ಯಾವುದೇ ಫಲ ಸಿಕ್ಕಿಲ್ಲ, ಅದಕ್ಕಾಗಿ ನಾವು ರಾಜ್ಯೋತ್ಸವವನ್ನು ಕಪ್ಪು ಬಟ್ಟೆ ಕಟ್ಟಿಕೋಂಡು ಆಚರಿಸಿದ್ದೇವೆ ಎಂದರು. ಈ ಸಂದರ್ಬದಲ್ಲಿ ಮತ್ತೋಬ್ಬ ರೈತ ಮುಖಂಡ ರಾಜಣ್ಣ ಕೊರವಿ ಮಾತನಾಡಿ ಯಾವುದೇ ಉಪಯೋಗಕ್ಕೆ ಬಾರದೆ 230 ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ. ನಾವು ವರ್ಷಕ್ಕೆ 1ಟಿ.ಎಂ.ಸಿ ನೀರನ್ನು ಕುಡಿಯಲು ಕೇಳುತ್ತಿದ್ದೇವೆ. ಆದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ತಮ್ಮ ಅಧಿಕಾರದ ಇತಿ ಮಿತಿಯಲ್ಲಿ ಗೋವಾ ರಾಜ್ಯದೋಡನೆ ಮಾತುಕತೆ ನಡೆಸಿ ನಮಗೆ ನೀರು ಬರುವಂತೆ ಆಸ್ಥೆವಹಿಸಲಿ ಎಂದರು.
ಸಮಿತಿಯ ಇನ್ನೋಬ್ಬ ಸದಸ್ಯರಾದ ವಿಕಾಸ ಸೋಪ್ಪಿನ ಮಾತನಾಡಿ ನಾವು ಕನ್ನಡ ರಾಜೋತ್ಸವವನ್ನು ಆಚರಿಸುವದು ಸೂತಕದ ಮನೆಯಲ್ಲಿ ಸಂಭ್ರಮ ಪಟ್ಟಂತೆ ಎಂದರು. ರೈತರ ಬೇಡಿಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಸರಕಾರಗಳಿಗೆ ರೈತ ಪರ , ಜನಪರ ಸಂಘಟನೆಗಳು ಮುಂಬರುವ ದಿನಗಳಲ್ಲಿ ಸರಿಯಾದ ಪಾಠವನ್ನು ಕಲಿಸಲಿವೆ ಎಂದು ನುಡಿದರು. ಬಾಬಾಜಾನ ಮುದೋಳ, ಶೇಖರಯ್ಯ ಮಠಪತಿ, ಸಂಜು ಧುಮಕನಾಳ, ವೀರಣ್ಣ ನೀರಲಗಿ, ಮಹೇಶ ಪತ್ತಾರ, ಸಾಯಿ ನಗರದ ಸಾಯಿ ಗೆಳೆಯರ ಬಳಗದ ಸದಸ್ಯರು ಸಿದ್ದು ಮಾಯಣ್ಣವರ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here