ರಾಮಸೇನೆಯ ಉಪವಾಸ ಸತ್ಯಾಗ್ರಹ ತಾತ್ಕಾಲಿಕ ಹಿಂದಕ್ಕೆ

0
41

03-Harugeri photo-01

ಹಾರೂಗೇರಿ 03: ಈಗಾಗಲೇ ಹಾರೂಗೇರಿಗೆ ಪೋಲಿಸ್‍ಠಾಣೆ ಮುಂಜೂರಾಗಿದ್ದು, ಅದಕ್ಕೆ ತಾಂತ್ರಿಕ ತೊಂದರೆಯಿರುವ ಕಾರಣ ಇನ್ನೇರೆಡು ತಿಂಗಳಲ್ಲಿ ಅಧಿಕೃತವಾಗಿ ಪೋಲಿಸ್‍ಠಾಣೆ ಪ್ರಾರಂಭವಾಗಲಿದೆ, ಆ ನಿಟ್ಟಿನಲ್ಲಿ ಶ್ರೀರಾಮಸೇನೆಯು ಹಮ್ಮಿಕೊಂಡ ಪ್ರತಿಭಟನೆಯನ್ನು ವಾಪಸ ಪಡೆಯಬೇಕೆಂದು ರಾಯಬಾಗ ಸಿಪಿಐ ಸಂತೋಷ ಸತ್ಯನಾಯ್ಕ ಮನವಿ ಮಾಡಿದರು.

ಅವರು ಸ್ಥಳೀಯ ಪುರಸಭೆ ಆವರಣದಲ್ಲಿ ಶ್ರೀರಾಮಸೇನೆ ಹಾಗೂ ಆರ್‍ಟಿಐ ಕಾರ್ಯಕರ್ತರು ವತಿಯಿಂದ ಹಮ್ಮಿಕೊಂಡಿದ್ದ ಪೋಲಿಸ್‍ಠಾಣೆ ಪ್ರಾರಂಭ ಹಾಗೂ ಪಿಎಸ್‍ಐ ನೇಮಕ ಕುರಿತು ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕರಿಗೆ ಹಣ್ಣಿನ ರಸ ನೀಡಿ ಮಾತನಾಡಿದರು.

ಇದುವರೆಗೂ ಕೇವಲ ಪೋಲಿಸರ ವಿರುದ್ದ ಮಾತ್ರ ಪ್ರತಿಭಟನೆಗಳು ಜರುಗುತ್ತಿದ್ದವು, ಆದರೆ ಇಂದು ಪೋಲಿಸರ ಕರ್ತವ್ಯ ನಿಷ್ಠೆಯನ್ನು ಬೆಂಬಲಿಸಿ ಹಾರೂಗೇರಿಯಲ್ಲಿ ಪೋಲಿಸ್‍ಠಾಣೆ ಆರಂಭಿಸಲು ಶ್ರೀರಾಮಸೇನೆ ಕಾರ್ಯಕರ್ತರು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ, ಆದ್ದರಿಂದ ಪ್ರತಿಯೊಬ್ಬರು ಸಮಾಜಕ್ಕಾಗಿ ಹೋರಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಸಿಪಿಐ ಸಂತೋಷ ಸತ್ಯನಾಯ್ಕ ತಿಳಿಸಿದರು.

ಸಮಾಜದಲ್ಲಿನ ಅನ್ಯಾಯ ಅತ್ಯಾಚಾರ, ಗುಂಡಾಗಿರಿ ಹೋಗಲಾಡಿಸಲು ಪೋಲಿಸರ ಕರ್ತವ್ಯ ನಿಷ್ಠೆ ತುಂಬಾ ಮುಖ್ಯ, ಈ ವಿಷಯವನ್ನು ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಸಿಪಿಐ ಅವರೇ ತಮ್ಮ ಮಾತಿಗೆ ಗೌರವ ಕೊಟ್ಟು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿವಾಗಿ ಹಿಂದಕ್ಕೆ ಪಡೆಯುತ್ತಿದ್ದು, ಶೀಘ್ರದಲ್ಲಿಯೇ ಪೋಲಿಸ್‍ಠಾಣೆ ಆರಂಭಿಸಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಶ್ರೀರಾಮಸೇನೆಯ ಬೆಳಗಾವಿ ಜಿಲ್ಲಾ ವಿಭಾಗ ಪ್ರಮುಖ ಗೋಪಾಲ ನಾಯಿಕ ಆಗ್ರಹಿಸಿದರು.

ಈ ಉಪವಾಸ ಸತ್ಯಾಗ್ರಹದಲ್ಲಿ ಆರ್‍ಟಿಐ ತಾಲೂಕಾ ಅಧ್ಯಕ್ಷ್ಯ ಭೀಮು ಕರ್ಣವಾಡಿ, ಬಿಜೆಪಿಯ ಕುಡಚಿ ಮಂಡಲ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾರುತಿ ಕಲ್ಯಾಣಕರ, ಶ್ರೀರಾಮಸೇನೆಯ ತಾಲೂಕಾ ಸಂಚಾಲಕ ವಿಜಯ ಪತ್ತಾರ, ಭರತೇಶ ಹುಕ್ಕೇರಿ, ರಾಜು ಐತವಾಡೆ, ಬಸಲಿಂಗ ಪಾಟೀಲ, ಸುನೀಲ ವಾಘ್ಮೋಡೆ, ವಿಕ್ರಮ ಪತ್ತಾರ, ಶಿವಾನಂದ ಮಠಪತಿ, ಬಸಗೌಡ ಪಾಟೀಲ, ವಸಂತ ಅಲಕನೂರ, ಶಿವಪುತ್ರ ಪತ್ತಾರ, ಆನಂದ ಕಂಚಗಾರ, ತುಕಾರಾಮ ದಳವಾಯಿ, ಹನುಮಂತ ಕಂಚಗಾರ, ಪರಶುರಾಮ ದಳವಾಯಿ, ಸಂತೋಷ ಶಿಂಧೆ, ರಾಜು ಕೆಳಗಡೆ, ಗಜಾನಂದ ನಾವ್ಹಿ, ಶ್ರೀಶೈಲ ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಾಯಬಾಗ ಸಿಪಿಐ ಸಂತೋಷ ಸತ್ಯನಾಯ್ಕ, ಕುಡಚಿ ಪಿಎಸ್‍ಐ ಜಿ.ಐ ಕಲ್ಯಾಣಶೆಟ್ಟಿ, ಅಪರಾದ ವಿಭಾಗ ಪಿಎಸ್‍ಐ ಎಸ್,ಎಮ್ ಶಿರಗುಪ್ಪಿ, ಪುರಸಭೆ ಮುಖ್ಯಾಧಿಕಾರಿ ಜಿ.ವ್ಹಿ ಹಣ್ಣಿಕೇರಿ, ಇಎಸ್‍ಐ ಬಿ.ಎಚ್ ಬಿಸಲನಾಯಕ, ರಾಮಣ್ಣ ಹೊರಟ್ಟಿ ಸೇರಿದಂತೆ ಅನೇಕರು ಉಪವಾಸ ಸತ್ಯಗ್ರಹವನ್ನು ಸಂಧಾನದ ಮೂಲಕ ಪರಿಹರಿಸಿದರು.

loading...

LEAVE A REPLY

Please enter your comment!
Please enter your name here