ಜಿಲ್ಲಾ, ತಾಲೂಕಾ ಘಟಕಗಳಿಗೆ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ

0
63

3 rnr2
ರಾಣಿಬೆನ್ನೂರು ,3:  ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆದಿದ್ದ ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ ಬಣದ) ಜಿಲ್ಲಾ ಮತ್ತು ತಾಲೂಕಾ ಘಟಕಗಳಿಗೆ ಅಧ್ಯಕ್ಷ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶಿವಪುತ್ರಪ್ಪ ಡಿ ಮಲ್ಲಾಡದ ಇವರನ್ನು ಜಿಲ್ಲಾ ಪ್ರಭಾರಿ ಅಧ್ಯಕ್ಷರನ್ನಾಗಿ, ಹನುಮಂತಪ್ಪ ಬಿ ಹೊಸಳ್ಳಿ ಇವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ, ಪ್ರದಾನ ಕಾರ್ಯದರ್ಶಿಗಳನ್ನಾಗಿ ರವಿ ಕುಬೇರಪ್ಪ ಓಲೇಕಾರ, ರಾಣಿಬೆನ್ನೂರು ತಾಲೂಕಾ ಅಧ್ಯಕ್ಷರಾಗಿ ಬಸಪ್ಪ ಕರಿಯಪ್ಪ ಓಲೇಕಾರ, ಉಪಾಧ್ಯಕ್ಷರಾಗಿ ದಿಳ್ಳೆಪ್ಪ ಸತ್ಯಪ್ಪನವರ, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಪರಮೇಶ ಹನುಮಂತಪ್ಪ ಚಿನ್ನಣ್ಣನವರ, ಹಿರೇಕೆರೂರು ತಾಲೂಕಾ ಅಧ್ಯಕ್ಷರನ್ನಾಗಿ ಶೇಖಪ್ಪ ಜಿ ಮಾಳಗಿ, ಶಿಗ್ಗಾಂವ ತಾಲೂಕಾ ಅಧ್ಯಕ್ಷರಾಗಿ ಮುತ್ತು ಅಡಿವೇಪ್ಪ ಗುಡಗೇರಿ ಇವರುಗಳನ್ನು ಆಯ್ಕೆ ಮಾಡಿದ್ದು, ಉಳಿದ ಬ್ಯಾಡಗಿ, ಸವಣೂರು, ಹಾನಗಲ್ಲ ತಾಲೂಕುಗಳ ಅಧ್ಯಕ್ಷ ಪದಾದಿಕಾರಿಗಳ ಆಯ್ಕೆಯ ಜವ್ಹಾಬ್ದಾರಿಯನ್ನು ಜಿಲ್ಲಾ ಪ್ರಭಾರಿ ಅಧ್ಯಕ್ಷರಾದ ಶಿವಪುತ್ರಪ್ಪ ಮಲ್ಲಾಡದ ಇವರಿಗೆ ವಹಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here