ಅರಣ್ಯ ಪ್ರದೇಶದ ಮೇಲೆ ಹೇರಲಾಗುತ್ತಿರುವ ಒತ್ತಡ ಪ್ರಕೃತಿ ಮೇಲೆ ದುಷ್ಪರಿಣಾಮ : ಶಾಸಕ ಸೈಲ್

0
44

ಅಂಕೋಲಾ,3 : ಅರಣ್ಯ ಪ್ರದೇಶದ ಮೇಲೆ ಹೇರಲಾಗುತ್ತಿರುವ ಒತ್ತಡದಿಂದಾಗಿ ಪ್ರಕೃತಿಯ ಮೇಲೆ ದುಷ್ಪರಿ ಣಾಮ ಬೀರುವಂತಾಗಿದೆ. ಅರಣ್ಯವನ್ನು ಸಮೃದ್ಧಗೊಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಗಿಡ-ಮರಗಳ ಸಂರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆಯವರು ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಎಲ್.ಪಿ.ಜಿ. ಗ್ಯಾಸ್ ಕಿಟ್‍ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸತೀಶ ಸೈಲ್ ಹೇಳಿದರು.
ಅವರು ನ.2 ರಂದು ಸೋಮವಾರ ತಾಲೂಕಿನ ಬೆಳಸೆ ಗ್ರಾ.ಪಂ. ಆವರಣದಲ್ಲಿ ಅರಣ್ಯ ಇಲಾಖೆ ಆಯೋಜಿ ಸಿದ್ದ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೆ ಗ್ಯಾಸ್ ವಿತರಿಸಿ ಅವರು ಮಾತನಾಡಿ, ಬೆಳಸೆ, ಶೆಟಗೇರಿ, ಹೊನ್ನೆಬೈಲ್ ಗ್ರಾಮ ಪಂಚಾಯತ ವ್ಯಾಪ್ತಿಯ 85 ಫಲಾನುಭವಿಗಳಿಗೆ ಎಲ್.ಪಿ.ಜಿ. ಗ್ಯಾಸ್ ಸೌಲಭ್ಯವನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ 200 ಫಲಾನುಭವಿಗಳಿಗೆ ಸೌಕರ್ಯ ಒದಗಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಸರಸ್ವತಿ ಗೌಡ ಮಾತನಾಡಿ, ಉರುವಲು ಕಟ್ಟಿಗೆಯನ್ನು ಉಳಿತಾಯ ಗೊಳಿಸುವುದರೊಂದಿಗೆ ಜನರಲ್ಲಿ ಅರಣ್ಯದ ಕುರಿತು ಜಾಗೃತಿ ಮೂಡಿಸುವ ದಿಶೆಯಲ್ಲಿ ಆಯೋಜಿಸಿರುವ ವಿಶಿಷ್ಟ ಕಾರ್ಯಕ್ರಮದ ಪ್ರಯೋಜನವನ್ನು ಫಲಾನುಭವಿಗಳು ಪಡೆದುಕೊಳ್ಳುವ ಮೂಲಕ ಅರಣ್ಯ ಸಂರಕ್ಷ ಣೆಯೊಂದಿಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜಿ.ಪಂ. ವಿನೋದ ನಾಯಕ, ತಾ.ಪಂ. ಅಧ್ಯಕ್ಷ ವಿನೋದ ಗಾಂವಕರ, ಗ್ರಾ.ಪಂ. ಅಧ್ಯಕ್ಷರಾದ ಶಂಕರ ಗೌಡ, ಶಶಿಧರ ನಾಯಕ, ಉಪಾಧ್ಯಕ್ಷೆ ಗಂಗೆ ಗೌಡ, ಪಿ.ಡಿ.ಓ. ನೀಲಕಂಠ ನಾಯಕ ಉಪಸ್ಥಿತರಿದ್ದು ಮಾತನಾಡಿದರು. ಅರಣ್ಯ ರಕ್ಷಕ ಯಮನಪ್ಪ ಪ್ರಾರ್ಥನೆ ಹಾಡಿದರು. ಆರ್.ಎಫ್.ಓ. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಎ.ಸಿ.ಎಫ್. ಪಾಂಡುರಂಗ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಆರ್.ಎಫ್.ಓ. ಸುರೇಶ ನಾಯ್ಕ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here