ಚಂದಗುಳಿ ಗಂಟೆ ಗಣೇಶ ದೇವಸ್ಥಾನಕ್ಕೆ ಸುಂದರ ಕೆತ್ತನೆಯ ಕರ್ಣಮುಚ್ಚಿಗೆ

0
123

7 ylp news 1
ಯಲ್ಲಾಪುರ,8: ಶ್ರೀಕ್ಷೇತ್ರ ಚಂದಗುಳಿ ಮಹಾಗಣಪತಿ ದೇವಸ್ಥಾನ ಕೇರಳದ ದೇವಸ್ಥಾನ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು,ದೇವಸ್ಥಾನ ಗರ್ಭಗುಡಿಯ ಒಳಭಾಗದಲ್ಲಿ ಮೂರ್ತಿಯ ಮೇಲ್ಭಾಗದಲ್ಲಿ ಆಳವಡಿಸುವ ಕರ್ಣಮುಚ್ಚಿಗೆ ಹಾಗೂ ಗರ್ಭಗುಡಿಯ ಪ್ರಧಾನ ಬಾಗಿಲನ್ನು ಶಾಸ್ತೋಕ್ತವಾಗಿ,ಸುಂದರವಾಗಿ ಬಿಕ್ಕುಗುಡಿಗಾರ ಕಲಾಕೇಂದ್ರದ ಕಲಾವಿದರಾದ ಗುಡಿಗಾರ ಸಹೋದರರು ನಿರ್ಮಿಸಿದ್ದಾರೆ.

ದೇಶ-ವಿದೇಶಗಳಲ್ಲಿತಮ್ಮಛಾಪು ಮೂಡಿಸಿದ ಕಲಾಕೇಂದ್ರದ ಕಲಾವಿದ ಸಹೋದರರಾದ ಸಂತೋಷ ಮತ್ತು ಅರುಣ ಗುಡಿಗಾರ 12ಜನ ಸಹದ್ಯೋಗಿ ಕಲಾವಿದರೊಂದಿಗೆಸತತ ನಾಲ್ಕು ತಿಂಗಳುಕಾಲ ಅವಿರತ ಶ್ರಮಪಟ್ಟು ಈ ಕಲಾಕೃತಿ ನಿರ್ಮಿಸಿದ್ದಾರೆ. 13ಅಡಿಉದ್ದ,ಅಗಲ ಹೊಂದಿರುವ ಈ ಕರ್ಣಮುಚ್ಚಿಗೆಯನ್ನುಹಲಸು ಮತ್ತುಶವಣಿ ಕಟ್ಟಿಗೆಯಿಂದ ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ಮುಚ್ಚಿಗೆಯಲ್ಲಿ ಗಣಪತಿಯ ಆಯುಧಗಳು,ವಾಹನ,ಮತ್ತಿತರ ಕಲಾಕೃತಿಗಳನ್ನು ಸುಂದರವಾಗಿ ಕೆತ್ತಲಾಗಿದ್ದು.ಸುಮಾರು 110ಘನ ಅಡಿ ಕಟ್ಟಿಗೆ ಬಳಸಲಾಗಿದೆ.ಸುಮಾರು 37 ಘನ ಅಡಿಕಟ್ಟಿಗೆಯಲ್ಲಿ ಸುಂದರವಾಗಿ ಗರ್ಭಗುಡಿಯ ಪ್ರಧಾನ ಬಾಗಿಲನ್ನು ನಿರ್ಮಿಸಲಾಗಿದ್ದು,ಮಹಾಗಣಪತಿ ದೇವಸ್ಥಾನಕ್ಕೆ ತೆರಳಿದ್ದು ಗಂಟೆ ಮಂಟಪದ ನಿರ್ಮಾಣ ಮಾತ್ರ ಬಾಕಿ ಇದೆ.ಈ ಕಲಕೃತಿಗೆ ಅಗತ್ಯ ಕಟ್ಟಿಗೆಯನ್ನು ದೇವಸ್ಥಾನದವರೇ ಒದಗಿಸಿದ್ದು,ಕೆತ್ತನೆಯಖರ್ಚು ವೆಚ್ಚಗಳನ್ನು ಹುಬ್ಬಳ್ಳಿಯ ಮಹಾವೀರ ಕುಂದೂರ ಭರಿಸಿದ್ದಾರೆ.

loading...

LEAVE A REPLY

Please enter your comment!
Please enter your name here