ನಂದಿಗದ್ದಾ ದೂರವಾಣಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ

0
36

07 jyd 1ಜೋಯಿಡಾ, 09:- ತಾಲೂಕಿನ ನಂದಿಗದ್ದಾದ ಖಾಸಗಿ ಕಟ್ಟಡದಲ್ಲಿದ್ದ ದೂರವಾಣಿ ಕಛೇರಿಯನ್ನು ಕರಾರು ಮುಗಿದ ಹಿನ್ನಲೆಯಲ್ಲಿ ಖಾಲಿ ಮಾಡುವಂತೆ ಮಾಲಿಕರು ತಿಳಿಸಿದ್ದರೂ ಇಲಾಖೆ ನಿರ್ಲಕ್ಷಿಸಿರುವದನ್ನು ಪ್ರತಿಭಟಿಸಿ ಮನೆ ಮಾಲಿಕರು ಇದೆ 30 ರಂದು ಕಚೇರಿಗೆ ಬೀಗ ಜಡಿದು ತಾಬಾ ಪಡೆಯಲು ನಿರ್ಧರಿಸಿರುತ್ತಾರೆ.
ನಂದಿಗದ್ದೆಯ ಪರಮೇಶ್ವರ ಜಿ.ಭಟ್ಟ ಎಂಬವರ ಸ್ವಂತ ಮನೆಯಲ್ಲಿ ಕರಾರಿನ ಮೇರೆಗೆ ಬಾಡಿಗೆಯಲ್ಲಿದ್ದ ದೂರವಾಣಿ ಕೇಂದ್ರವನ್ನು ಕಾರಾರು ಮುಗಿದ ಹಿನ್ನೆಲೆಯಲ್ಲಿ ಬೇರೆಡೆ ಸ್ಥಳಾಂತರಿಸಿ ತಮ್ಮ ಮನೆಯನ್ನು ಖಾಲಿ ಮಾಡಿಕೊಡುವಂತೆ ಕಳೆದ 2010 ರಲ್ಲಿ ದೂರವಾಣಿ ಇಲಾಖೆಗೆ ಅವರು ವಿನಂತಿಸಿದ್ದರು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಳೆದ 2013 ರಲ್ಲಿ ಒಮ್ಮೆ ಇದೆ ಕಛೇರಿಗೆ ಬೀಗ ಜಡದು ಪ್ರತಿಭಟಿಸಿದ್ದರು. ಆ ಸಂದರ್ಭದಲ್ಲಿ ಇಲಾಖೆಯವರು 6 ತಿಂಗಳ ಕಾಲಾವಕಾಶ ಕೇಳಿ ಸ್ಥಳ ಬದಲಾವಣೆ ಮಾಡುವ ಬರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಇಲಾಖೆ ಸ್ಥಳ ಬದಲಾಯಿಸದೆ ಮಾಲಿಕನಾದ ನನಗೆ ಜಾಗಬಿಟ್ಟು ಕೊಡದೆ ತೊಂದರೆ ಉಂಟುಮಾಡುತ್ತಿದ್ದಾರೆಂದು ಆರೋಪಿಸಿದ ಮಾಲಿಕ ಪರಮೇಶ್ವರ ಭಟ್ಟ ಹಲವು ಬಾರಿ ವಿನಂತಿಸಿದರು ಸ್ಪಂದಿಸದ ಕಾರಣದಿಂದ ಕಛೇರಿ ಇರುವ ನನ್ನ ಮನೆಗೆ ಇದೆ ತಿಂಗಳ 30 ಬೀಗ ಜಡದು ನನ್ನ ತಾಬಾ ಪಡೆಯಲು ನಿರ್ಧರಿಸಿದ್ದಾಗಿ ತಿಳಿಸಿರುತ್ತಾರೆ.
ಇದರಿಂದ ದೂರವಾಣಿ ಗ್ರಾಹಕರಿಗೆ ಆಗುವ ತೊಂದರೆಗೆ ನಾನು ಜವಾಬ್ದಾರರನಲ್ಲ ಎಂದು ಹೇಳಲು ಇಚ್ಚಿಸುತ್ತಿದ್ದೆನೆ. ಸಂಬಂದಿಸಿದ ಇಲಾಖೆ ಕ್ರಮ ಕೂಗೊಂಡು ನನ್ನ ಮನೆಯನ್ನು ಖಾಲಿ ಮಾಡಿಕೊಡಲು ವಿನಂತಿಸಿರುತ್ತಾರೆ. ಈ ಬಗ್ಗೆ ತಾಲೂಕಾ ದಂಡಾಧಿಕಾರಿಗಳಿಗೆ ಹಾಗೂ ಪೋಲಿಸ ಇಲಾಖೆಗೂ ಮಾಹಿತಿ ನೀಡಿದ್ದಾಗಿ ಲಿಖಿತ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

loading...

LEAVE A REPLY

Please enter your comment!
Please enter your name here