ಪಟ್ಟಣ ಸೇರಿದಂತೆ ವಿವಿಧೆಡೆ ಸಂಭ್ರಮದ ಮಕ್ಕಳ ದಿನಾಚರಣೆ: ಸಿಹಿ ವಿತರಣೆ

0
61

Dinacharane
 

 

 

ಬಸವನಬಾಗೇವಾಡಿ: ಮಕ್ಕಳಲ್ಲಿರುವ ಸೂಪ್ತಪ್ರತಿಭೆಯನ್ನು ಪ್ರೋತ್ಸಾಹಿಸುವ ಜೊತೆಗೆ ಮಕ್ಕಳ ಭವಿಷ್ಯ ಹಸನಾಗಿಸುವ ನಿಟ್ಟಿನಲ್ಲಿ ಸಂಸ್ಕಾರ ಅವಶ್ಯಕವಾಗಿದೆ ಎಂದು ವಿಶ್ವ ಬಂಧು ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ ಹೇಳಿದರು.
ಸ್ಥಳೀಯ ತಾಲೂಕ ಪಂಚಾಯತ ಸಭಾಭವನದಲ್ಲಿ ಬಸವೇಶ್ವರ ಆಂಗ್ಲ್ ಮಾಧ್ಯಮ ಶಾಲೆ ಹಾಗೂ ವಿಶ್ವ ಬಂಧು ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ಮಕ್ಕಳ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಯಾವುದೇ ತೆರನಾಗಿ ಭಯದ ವಾತಾವರಣ ನಿರ್ಮಿಸದೇ ಪೂರಕವಾದ ಪರಿಸರ ನಿರ್ಮಿಸಬೇಕೆಂದು ಹೇಳಿದರು.
ಮಕ್ಕಳಲ್ಲಿ ಸೂಪ್ತವಾದ ಪ್ರತಿಭೆ ಅಡಗಿದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸುವದು ಪಾಲಕರ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದ್ದು ಮಕ್ಕಳ ಭಾವನೆಗಳಿಗೆ ಗೌರವ ನೀಡುತ್ತಾ ಅಕ್ಕರೆಯಿಂದ ಕಾಣಬೇಕು ಅಲ್ಲದೆ ಸೂಕ್ಷ್ಮವಾದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರದಂತೆ ಜಾಗೃತಿವಹಿಸಬೇಕಾಗಿದೆ, ಮಕ್ಕಳ ಭವಿಷ್ಯದಲ್ಲಿ ರಾಷ್ಟ್ರದ ಜೀವಾಳವಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಸಂಜೀವ ಕಲ್ಯಾಣಿ ಮಾತನಾಡಿ ಇಂದಿನ ಯುಗದಲ್ಲಿ ಮೊಬೈಲ್ ಸೇರಿದಂತೆ ಟಿ.ವಿ ಮಕ್ಕಳ ಕೈಯಲ್ಲಿ ಸಿದಂತೆ ಎಚ್ಚರಿಕೆವಹಿಸಿ ಉತ್ತಮ ಸಂಸ್ಕಾರ ನೀಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ಆಧುನಿಕತೆಯಲ್ಲಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಂ ಬೀರುತ್ತಿದ್ದು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಶಿಕ್ಷಕಿ ಗಿರಿಜಾ ಪಾಟೀಲ ಮಾತನಾಡಿದರು, ಪುರಸಭೆ ಉಪಾಧ್ಯಕ್ಷ ಮುರುಗೇಶ ನಾಯಕೋಡಿ, ಸಮಿತಿ ಪ್ರಧಾನ ಕಾರ್ಯದರ್ಶಿ ಡಾ: ಅಮರೇಶ ಮಿಣಜಗಿ, ಮುಖ್ಯಗುರುಗಳು ಎನ್.ಎನ್.ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು, ಜಾಹೀರಾಬೇಗಂ ಸ್ವಾಗತಿಸಿದರು, ಸುನಂದಾ ಪಡಶೆಟ್ಟಿ ನಿರೂಪಿಸಿದರು, ಕುಸುಮಾ ಅಂಗಡಿ ವಂದಿಸಿದರು, ಇದೇ ಸಂದರ್ಭದಲ್ಲಿ ಮಕ್ಕಳು ಮಹಾ ಪುರುಷರ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದರು, ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಕರವೇ: ಸ್ಥಳೀಯ ಬಸವೇಶ್ವರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕ ಹಮ್ಮಿಕೊಂಡ “ಮಕ್ಕಳ ದಿನಾಚರಣೆ” ಕಾರ್ಯಕ್ರಮದಲ್ಲಿ ಕರವೇ ತಾಲೂಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡಿದಾಗ ಮಕ್ಕಳು ಮನೆಯ ಹಾಗೂ ರಾಷ್ಟ್ರದ ಆಸ್ತಿಯಾಗಿ ಹೆಮ್ಮರವಾಗಿ ಬೆಳೆಯುತ್ತಾರೆ, ಪಾಲಕರು ಶಿಕ್ಷಕರು ಅರಿತುಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಶ್ರಮಿಸಬೇಕೆಂದು ಹೇಳಿದರು.
ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀಶೈಲ ಹೆಬ್ಬಾಳ, ಉಮೇಶ ಅವಟಿ, ಸುರೇಶ ಹಾರಿವಾಳ, ಸಂತೋಷ ಕೂಡಗಿ, ಮಂಜು ಹಾರಿವಾಳ, ಜಗದೀಶ ನಿಕ್ಕಂ, ಮಹಾಂತೇಶ ಚಿನಿವಾಲ, ಮಂಜು ಹೂಗಾರ, ಚಂದ್ರು ನಿಕ್ಕಂ, ಶಿವು ನಾಗಠಾಣ ಸೇರಿದಂತೆ ಮುಂತಾದವರು ಇದ್ದರು. ನಂತರ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿ ಶುಭಕೋರಿದರು.

loading...

LEAVE A REPLY

Please enter your comment!
Please enter your name here