ಬೆಳೆ ವಿಮೆಗಾಗಿ ಜೋಯಿಡಾದಲ್ಲಿ ರೈತರಿಂದ ಪ್ರತಿಭಟನೆ

0
47

18 jyd ph3--- (1)

ಜೋಯಿಡಾ 19 : ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿದ ಸರಕಾರ ಇಲ್ಲಿನ ರೈತರ ಬೆಳೆ ಹಾನಿಗೆ ಯಾವುದೇ ಪರಿಹಾರ ನೀಡಲಿಲ್ಲ. ಬದಲಾಗಿ ಪ್ರತಿ ವರ್ಷವೂ ತಪ್ಪದೆ ಬೆಳೆ ವಿಮೆ ಭರಣಮಾಡಿಕೊಳ್ಳುತ್ತಿರುವ ಸೇವಾ ಸಹಕಾರಿ ಸಂಘಗಳೂ ರೈತರ ಬೆಳೆ ಹಾನಿಗೆ ವಿಮಾ ಪರಿಹಾರವನ್ನು ನೀಡಲು ಮುಂದೆ ಬರುತ್ತಿಲ್ಲ.
ಇತ್ತ ಬೆಳೆ ಹಾನಿ, ಅತ್ತ ಬರಗಾಲ ಎರಡರ ನಡುವೆ ತತ್ತರಿಸಿರುವ ನಮಗೆ ಬೆಳೆವಿಮೆ ಪರಿಹಾರವನ್ನಾದರೂ ನೀಡಿ ಎಂದು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದ ತಾಲೂಕಿನ ವಿವಿದೆಡೆಗಳಿಂದ ಬಂದ ನೂರಾರು ರೈತ ಬಾಂದವರು ಬೆಳೆ ವಿಮೆಗಾಗಿ ಪಟ್ಟು ಹಿಡಿದು ಪ್ರತಿಭಟಿಸಿದ ಘಟನೆ ಇಂದು ಜೋಯಿಡಾದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಾಜರಿದ್ದ ಕೃಷಿ ಅಧಿಕಾರಿ ಬಿ.ಎಸ್.ಹಿರೇಮಠ ಬೆಳೆ ಹಾನಿಗೆ ಅರ್ಜಿಸಲ್ಲಿಸಿದವರಿಗೆ ಸರಕಾರದಿಂದ ಪರಿಹಾರ ನೀಡಲಾಗುವುದು, ಯಾರು ಬೆಳೆ ಹಾನಿಆದ ಬಗ್ಗೆ ಇಲಾಖೆಗೆ ಮಾಹಿತಿ ಅರ್ಜಿ ನೀಡಿಲ್ಲವೊ ಅವರು ಕೂಡಲೆ ಅರ್ಜಿಸಲ್ಲಿಸಬೆಕು, ಬೆಳೆ ವಿಮೆಗೆ ಸಂಬಂದಿಸಿದಂತೆ ನಿಯಮಾನುಸಾರ ಮೇಲಾಧಿಕಾರಿಗಳ ಹಾಗೂ ವಿಮಾ ಸಂಸ್ಥೆಗಳ ನಿರ್ಧೇಶನದಂತೆ ಸರ್ವೆಕಾರ್ಯ ಕೈಗೊಳ್ಳಲಾಗುವುದೆಂದು ಬರವಸೆ ನೀಡಿದರು. ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು, ಅಧಿಕಾರಿಗಳ ಬರವಸೆಗೆ ತೃಪ್ತಿದಾಯಕವಾಗಿರದ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಮೊರೆಹೋಗುವ ನಿರ್ಧಾರ ಕೈಗೊಳ್ಳಲಾಯಿತು.
ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ರಫಿಕ್ ಖಾಜಿ, ಜೋಯಿಡಾ ತಾಲೂಕಿನಾದ್ಯಂತ ಈಬಾರಿ ಮಳೆ ಕಡಿಮೆಯಾಗಿ ಸಕಾಲಕ್ಕೆ ಬೆಳೆಗೆ ನೀರಿಲ್ಲದೆ ಭತ್ತದ ಗದ್ದೆಗಳು ಒಣಗಿ, ಹಲವು ರೋಗಕ್ಕೆ ತುತ್ತಾಗಿ ಬೆಳೆ ಹಾನಿ ಸಂಭವಿಸಿದೆ. ಸರಕಾರವೆನೊ ಬರಗಾಲ ಘೋಷಣೆ ಮಾಡಿ ಅಭಿವೃದ್ದಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆ ಆದರೆ, ನಿಜವಾಗಿಯೂ ಬೆಳೆ ಹಾನಿಯಿಂದ ನೋವು ಅನುಭಸುತ್ತಿರುವ ತಾಲೂಕಿನ ರೈತರಿಗೆ ಯಾವುದೇ ಪರಿಹಾರ ನೀಡಲಿಲ್ಲ. ಇದು ರೈತರನ್ನು ಮಾನಸಿಕವಾಗಿ ದೃತಿಗೆಡಿಸಿದೆ. ಇನ್ನೊಂದೆಡೆ ಸೋಸೈಟಿಗಳು ಬೆಳೆವಿಮೆ ಕಂತನ್ನು ತಪ್ಪದೆ ರೈತರಿಂದ ತುಂಬಿಸಿಉಕೊಳ್ಳುತ್ತಿದೆ ಆದರೆ, ರೈತರ ಬೆಳೆ ಹಾನಿಗೆ ಮಾತನ್ನೆ ಎತ್ತದೆ ಬೆಳೆ ವಿಮೆ ಪರಿಹಾರವನ್ನೂ ನೀಡದೆ ಅವರನ್ನು ಅತಂತ್ರರನ್ನಾಗಿಸಿ ಗೋಲಿಡುವಂತೆ ಮಾಡಿದೆ ಇದು ಘೋರ ಅನ್ಯಾಯವಾಗಿದ್ದು, ಸಂಬಂದಿಸಿದ ಸೋಸೈಟಿಗಳು ಬೆಳೆವಿಮೆ ಪರಿಹಾರ ನೀಡುವ ಬರವಸೇ ನೀಡುವವರೆಗೂ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಜೆ.ಡಿ.ಎಸ್.ತಾಲೂಕಾಧ್ಯಕ್ಷ ರವಿ ರೆಡ್ಕರ್ ಮಾತನಾಡಿ ರೈತರ ಸಮಸ್ಯೆ ಸರಕಾರ ಸ್ಪಂದಿಸುತ್ತಿಲ್ಲ. ಶ್ರೀಮಂತ ಉದ್ಯಮಿಗಳಿ ಆದ ನಷ್ಟಕ್ಕೆ, ಹಲವು ಆಕಷ್ಮಿಕ ದುರ್ಘನೆಗಳಿಗೆ ಸರಕಾರ ಲಕ್ಷಾಂತರ ರೂಪಾಯಿ ತತ್ತಕ್ಷಣ ನೀಡುತ್ತಿದೆ.ಆದರೆ ಹೊಟ್ಟೆಗೆ ಅನ್ನನೀಡುವ ರೈತ ದೇಶಕ್ಕೆ ಬೆನ್ನೆಲುಬು ಆದರೆ ಇವರ ಆಕ್ರಂದನಕ್ಕೆ ಕಿವಿಗೊಡದೆ ಸರಕಾರ ಜಾಣಕುರುಡುತನ ಪ್ರದರ್ಶಿಸುತ್ತಿರುವದು ಖೇದಕರ. ಎಲ್ಲಾ ರೈತ ಬಾಂಧವರು ಬೆಳೆ ಬೆಳೆಯುವುದನ್ನು ನಿಲ್ಲಿಸಿ ಪ್ರತಿಭಟಿಸಿದರೆ ಮಾತ್ರ ಸರಕಾರಕ್ಕೆ ಅನ್ನದ ಬಿಸಿ ಮುಟ್ಟಲಿದೆ. ಇನ್ನು ಮುಂದೆ ಇದೆ ಕೆಲಸ ಮಾಡಿ ಸರಕರಕ್ಕೆ ಎಚ್ಚರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಆನಂದು ಪೊಕಳೆ, ವ್ಯಾಪಾರಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ವಿನಯ ದೇಸಾಯಿ, ಶ್ರೀಪಾದ ಮಡಿವಾಳ, ತುಕಾರಾಮ ಮಾಂಜ್ರೇಕರ್, ಬಾಬಾಜಿ ದೇಸಾಯಿ, ಶ್ರೀಕಾಂತ ಟೆಂಗ್ಸೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here