ಅಪೂರ್ಣ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ:ಎಚ್ಚರಿಕೆ

0
36

21 joida news1ph1ಜೊಯಿಡಾ,21; ತಾಲೂಕಿನ ಬಹುನಿರೀಕ್ಷಿತ ಜೋಯಿಡಾ ಗಾಂಗೋಡಾ 6 ಕಿ.ಮಿ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ (ಪಿ.ಎಮ್.ಜಿ.ಎಸ್.ವಾಯ್)ಯಿಂದ ದಾಂಬರಿಕರಣ ಮಾಡಬೇಕಾದ ಕಾಮಗಾರಿ ಮೆಟಲಿಂಗ ಮಾಡಿಮುಗಿಸಿದರು ಈ ಕಾಮಗಾರಿ ಸಂಪೂರ್ಣ ಕಳೆಪೆ ಮಾಡಲಾಗಿದೆ. ಅಪೂರ್ಣ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ಗ್ರಾಮಸ್ಥರು ನೀಡಿದ್ದಾರೆ.
ತಾಲೂಕಾ ಕೇಂದ್ರದಿಂದ ಗಾಂಗೋಡಾ ಗ್ರಾಮದ ಒರೆಗೆ ಸುಮಾರು 6 ಕಿ.ಮಿ ರಸ್ತೆ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಿಯಾಗಿದ್ದು. ಈ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಪಿ.ಎಮ್.ಜಿ.ಎಸ್.ವಾಯ್ ಇಲಾಖೆ ಒಹಿಸಿತ್ತು. ಕಳೆದ ಎರಡು ವರ್ಷದಿಂದ ವಿಳಂಬ ಮಾಡಿ ಸಾರ್ವಜನಿಕರಿಗೆ ಮಳೆಗಾಲದಲ್ಲಿ ತೊಂದರೆ ಮಾಡಿದ ಪಿ.ಎಮ್.ಜಿ.ಎಸ್.ವಾಯ್ ಮಾಡಿದ ಕಾಮಗಾರಿಯಂತು ಸರಿ ಮಾಡಲೇ ಇಲ್ಲ. ಈ ರಸ್ತೆ ಸಂಪೂರ್ಣವಾಗಿ ದಾಂಬರಿಕರಣ ಮಾಡಬೇಕೆಂದು 4.35 ಕೋಟಿ ಹಣ ಬಿಡುಗಡೆಗೊಳಿಸಲಾಗಿತ್ತು. ಆದರೆ ಇಲಾಖೆ ಗಾಂಗೋಡಾ ಗ್ರಾಮದ ವರೆಗೆ ಕೇವಲ ಮೆಟಲಿಂಗ ಮಾಡಿ ಮುಗಿಸಿದೆ. ಇದರಿಂದ ದಾಂಬರಿಕರಣದ ಹೆಸರಿನಲ್ಲಿ ಮಂಜೂರಿಯಾದ ಹಣ ನುಂಗಿ ಹಾಕಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಇದು ಸತ್ಯವು ಹೌದು ಏಕೆಂದರೆ ಕೇಲವ 6 ಕಿ.ಮಿ. ಮೆಟಲಿಂಗಗೆ 4.35 ಕೋಟಿ ಖರ್ಚು ಮಾಡಲು ಹೇಗೆ ಸಾಧ್ಯವೆನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
[highlight]ಕಳಪೆ ಕಾಮಗಾರಿ; ಮೊದಲೆ ದಾಂಬರಿಕರಣ ಮಾಡಿ ಕೆಲಸ ಮುಗಿಸಬೇಕಾಗಿದ್ದ ಪಿ.ಎಮ್.ಜಿ.ಎಸ್.ವಾಯ್ 6 ಕಿ.ಮಿ.ರಸ್ತೆ ಕೇವಲ ಖಡಿಕರಣಮಾಡಿ ಮೆಟಲಿಂಗ ಮಾಡಿ ಮುಗಿಸಿದೆ. ಇದರಿಂದ ಈ ಮಳೆಗಾಲದಲ್ಲಂತು ಸಾರ್ವಜನಿಕರು ಸಂಪರ್ಕಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮೊಣಕಾಲಿನಷ್ಟಿರುವ ಕೆಸರಿನಲ್ಲಿ ನಡೆದುಕೊಂಡು ಮಳೆಗಾಲದ ಮೂರು ತಿಂಗÀೂ ದೂಡಿದ್ದಾರೆ. ಖಡಿಕರಣದ ಮೇಲೆ ಹಾಕಬೇಕಾಗಿದ್ದ ಮೋರಂಬ ಹಾಕದೇ ಸಾದಾ ಕೆಂಪು ಮಣ್ಣು ಹಾಕಿರುವುದರಿಂದ ಮಳೆಗಾಲದಲ್ಲಿ ಈ ರಸ್ತೆ ಕೆಸರಗದ್ದೆಯಂತಾಗಿತ್ತು. ಪೂರ್ತಿ 6 ಕಿ.ಮಿ. ವರೆಗೆ ಹಾಕಿದ ಖಡಿ ಸಂಪೂರ್ಣವಾಗಿ ಅಲ್ಲಲ್ಲಿ ಕಿತ್ತುಕೊಂಡು ಹೋಗಿದ್ದು ಈಗ ಮಳೆ ಕಡಿಮೆಯಾದರೂ ದ್ವಿಚಕ್ರ ವಾಹನಕೂಡ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲೆಗೆ ಬರುವ ವಿಧ್ಯಾರ್ಥಿಗಳು ಪ್ರತಿ ದಿನ ಪರದಾಡುವಂತಾಗಿದೆ. ಈ ಕಾಮಗಾರಿಯಷ್ಟು ಕಳಪೆ ಕಾಮಗಾರಿ ಎಲ್ಲಿಯೂ ನೋಡಲು ಸಿಗಲಾರದೆಂದು ಸ್ಥಳಿಯರು ದೂರಿದ್ದಾರೆ.
ಈ ರಸ್ತೆ ನಿರ್ಮಾಣದ ಹಂತದಲ್ಲಿ ಪಿ.ಎಮ್.ಜಿ.ಎಸ್.ವೈ ಇಲಾಖೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪ್ರಾರಂಭಿಸಿ ಮುಗಿಸದೇ ಇರುವುದು ಈ ಅವಾಂತರಕ್ಕೆ ಕಾರಣವಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕರು ಪ್ರತಿಭಟಿಸಿದಾಗ ತರಾತುರಿಯಲ್ಲಿ ಕೆಲಸ ಮುಗಿಸಿದ ಪಿ.ಎಮ್.ಜಿ.ಎಸ್.ವಾಯ್ ಕಾಮಗಾರಿಯ ಗುಣಮಟ್ಟವನ್ನು ಕಾಪಾಡದೇ ಹಣದ ಆಶೆಗಾಗಿ ಕೆಲಸ ಮುಗಿಸಿದ್ದಂತಾಗಿದೆ. ಈ ಕಾಮಗಾರಿಗೆ ಸರಿಯಾಗಿ ರೂಲಿಂಗ ಮಾಡಿಲ್ಲ. ಈ ಮೆಟಲಿಂಗ ಮೇಲೆ ಹಾಕಬೇಕಾಗಿದ್ದ ಕೆಮಿಕಲ್ ಪವಡರ ಕೂಡ ಬಳಸದೇ ಇರುವುದು ಈ ರಸ್ತೆ ಕಿತ್ತುಹೋಗಲು ಕಾರಣವಾಗಿದೆ.
ಗಾಂಗೋಡಾ ಗ್ರಾಮದ ಮುಖಂಡ ಅರ್ಜುನ ಕಾಂಬ್ಳೆ ಮಾತನಾಡಿ ಪಿ.ಎಮ್.ಜಿ.ಎಸ್.ವಾಯ್ ಇಲಾಖೆಯಿಂದ ಇಸ್ಟಿಮೆಟ ಪ್ರಕಾರ ಕೆಸಲಮಾಡಿಲ್ಲ. ಮಾಡಿದ ಕಾಮಗಾರಿ ಸಂಪೂರ್ಣ ಕಳಪೆ ಮಾಡಲಾಗಿದೆ. ರಸ್ತೆ ಪೂರ್ತಿ ಕಿತ್ತು ಹೋಗಿದೆ ಸಂಚಾರ ಮಾಡಲು ಸಾಧ್ಯವಿಲ್ಲ. ಗಾಂಗೋಡಾ ಗ್ರಾಮದ ವರೆಗೆ ಇಸ್ಟಿಮೆಟ ಪ್ರಕಾರ ದಾಂಬರಿಕರಣ ಮಾಡದೇ ಸರಕಾರದ ಹಣ ದುರ್ಬಳಕೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.
ಗ್ರಾಮದ ಪ್ರಮುಖರಾದ ರಾಯಾ ಸುಕ್ಟೊ ವೆಳಿಪ, ಕುಷ್ಟ ವಳಣೊ ಮಿರಾಶಿ, ಶಂಕರ ನಾಯ್ಕ, ನಾರು ಮಿರಾಶಿ, ಶಿಪು ಮಿರಾಶಿ, ತುಳಸಿದಾಸ ಮಿರಾಶಿ ಮುಂತಾದವರು ಗಾಂಗೋಡಾ ರಸ್ತೆ ಸರಿಪಡಿಸುವಂತೆ ಅಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here