ಟಿಪ್ಪು ಸುಲ್ತಾನ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ: ದಾನಪ್ಪ ಕಬ್ಬೇರ

0
41

01 Rudresh 02
ಧಾರವಾಡ,21: ಮೈಸೂರು ಹುಲಿ ಎಂದೇ ಇತಿಹಾಸದಲ್ಲಿ ದಾಖಲಾಗಿರುವ ಹಜರತ್ ಟಿಪ್ಪು ಸುಲ್ತಾನರು ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂಥ ಮಹಾನ್ ತ್ಯಾಗಿಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹು-ಡಾ ಅಧ್ಯಕ್ಷ ದಾನಪ್ಪ ಕಬ್ಬೇರ ಹೇಳಿದರು.
ನಗರದ ಅಂಜುಮನ್-ಎ-ಸಂಸ್ಥೆಯ ವತಿಯಿಂದ ಹಜರತ್ ಟಿಪ್ಪು ಸುಲ್ತಾನರ 265ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅನೇಕ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನವನ್ನು ಮರೆಯಬಾರದು. ಜಾತ್ಯಾತೀತ ಮನೋಭಾವದ ಅರಸು ಹಜರತ್ ಟಿಪ್ಪು ಸುಲ್ತಾನರು, ತಮ್ಮ ಜೀವನವನ್ನೇ ನಾಡಿಗೆ ತ್ಯಾಗ ಮಾಡಿದ ಮಾಹಾನ್ ನಾಯಕ.ಆದರೆ ಕೆಲವರು ಇಲ್ಲದ ಅಪಪ್ರಚಾರದ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಜನರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಕಬ್ಬೇರ ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಸಮಾಜಕ್ಕೆ ಪ್ರತಿಯೊಬ್ಬರ ಕೊಡುಗೆಯೂ ಸಹ ಮುಖ್ಯ. ಈ ದಿಸೆಯಲ್ಲಿ ಹಜರತ್ ಟಿಪ್ಪು ಸುಲ್ತಾನರು ಯಾವುದೇ ಒಂದು ಪ್ರಾಂತ, ಸಮುದಾಯಕ್ಕೆ ಸೇರಿದವರಲ್ಲ.ಅವರ ಜಾತ್ಯಾತೀತ ತತ್ವ ಮತ್ತು ತ್ಯಾಗದ ಜೀವನ ಎಲ್ಲರಿಗೂ ಆದರ್ಶಪ್ರಾಯ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತವನ್ನು ನೀಡಿದ್ದಾರೆ. ಅದರಂತೆ ಆರೋಗ್ಯದಿಂದ ಇರುವ ಎಲ್ಲರೂ ಸಹ ರಕ್ತದಾನ ಮಾಡುವ ಮುಖಾಂತರ ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಬೇಕು.ಅದು ನಾವು ಹಜರತ್ ಟಿಪ್ಪು ಸುಲ್ತಾನರಿಗೆ ಸಲ್ಲಿಸುವ ಬು ದೊಡ್ಡ ಗೌರವ ಎಂದರು.ಮುಂಬರುವ ದಿನಗಳಲ್ಲಿ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ರಕ್ತ ದಾನ ಶಿಬಿರ ಆಯೋಜಿಸುವ ಉದ್ದೇಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಎಂ.ಖಾಜಿ, ಖ್ಯಾತ ವೈದ್ಯರಾದ ಡಾ.ಮಹ್ಮದಇಕ್ಬಾಲ ಶೇಖ, ಡಾ.ನವೀನ ಮಂಕಣಿ, ಡಾ.ಇಮ್ತಿಯಾಜ ಶೇಖ, ಡಾ.ಕವನ ದೇಶಪಾಂಡೆ, ಡಾ.ಎಸ್.ಎ.ಕಾಂಟ್ರಾಕ್ಟರ್, ಡಾ.ಸರೋಷ ಜಮಾದಾರ,ಡಾ.ಉಮೇಶ ಹಳ್ಳಿಕೇರಿ, ಡಾ.ಉಷಾ., ಡಾ.ಅವಳವಂಡಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿರಿದ್ದರು.
ಎಸ್.ಎಸ್.ಸೌದಾಗರ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ನಜೀರಹುಸೇನ ಮನಿಯಾರ ನಿರೂಪಿಸಿದರು.ಸಹಕಾರ್ಯದರ್ಶಿ ರಫೀಕ ಶಿರಹಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here