ರೈತಕುಲದ ಹೋರಾಟಕ್ಕೆ ಜಯವಾಗಲಿ

0
58

22-nvl-01ಮಾಬುಸಾಬ.ಎಮ್.ಯರಗುಪ್ಪಿ
ನವಲಗುಂದ,22: ಗಂಡು ಮೆಟ್ಟಿದ ನಾಡಿನಲ್ಲಿ ಮಹಾದಾಯಿ ನದಿ ಹಾಗೂ ಕಳಸಾ-ಬಂಡೂರಿ ಹೋರಾಟಕ್ಕೆ ಎದೆ ತಟ್ಟಿ ನಿಂತಿರುವಂತಹ ರೈತಕುಲಕ್ಕೆ ಜಯವಾಗಲಿ. ಪ್ರಕೃತಿಯ ಆಟಕ್ಕೆ ಸಿಲುಕಿ ತತ್ತರಿಸಿ ಹೋದಂತಹ ರೈತರು ನಮಗೆ ಮಹಾದಾಯಿ ನದಿಯಿಂದ ಬರಬೇಕಾದಂತಹ ನೀರಿನ ಪಾಲಾದರು ಬರಬಹುದು ಎಂಬ ನಂಬಿಕೆಯನ್ನಿಟ್ಟುಕೂಂಡು ಆಗಸ್ಟ ಮೂರರಂದು ಹೋರಾಟವನ್ನು ಆರಂಭಮಾಡಿದರು. ಆ ಹೋರಾಟದ ಛಾಯೇ ಬಂಡಾಯದ ನೆನÀಪು ಮರುಕಳಿಸುವಂತಹ ವಾತಾವರಣವನ್ನು ಸೃಷ್ಟಿಸಿದೆ. ಈ ಧರಣಿ ಸತ್ಯಾಗ್ರಹಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತಪಡಿಸಿದವರಿಗೇನು ಕಮ್ಮಿ ಇಲ್ಲಾ. ಮಲಗಿರುವಂತಹ ಸರಕಾರವನ್ನು ನಿದ್ದೆಯಿಂದ ಎಚ್ಚರಗೂಳಿಸಿರುವಂತಹ ಈ ರೈತರು ಸಹನೆ ಕಳೆದುಕೂಳ್ಳುವ ಪೂರ್ವದಲ್ಲಿ ಸರಕಾರ ಇವರ ಬೇಡಿಕೆಗೆ ಸ್ಪಂದಿಸಲಿ.
ಪ್ರಜಾಪ್ರಭುತ್ವದಲ್ಲಿ ಪ್ರಜೇಗಳಿಗಾಗಿ ಪ್ರಜೇಗಳಿಂದ ನೇಮಕವಾಗುವಂತಹ ಸರಕಾರಗಳು ಇವತ್ತು ಪ್ರಜೇಗಳನ್ನು ಗುಲಾಮರಂತೆ ನೊಡುವಂತಹ ಸ್ಥಿತಿ ಬಂದು ಒದಗಿರುವುದು ಪ್ರಜಾಪ್ರಭುತ್ವ ವ್ಯೆವಸ್ಥೆಯನ್ನು ಹೂಂದಿರುವ ನಮ್ಮ ದೇಶದ ದುದ್ರೈವದ ಸಂಗತಿ ಎಂದರೆ ತಪ್ಪಾಗಲಾರದು. ಇವತ್ತು ರೈತರು ಆರಿಸಿ ಕಳಿಸಿರುವಂತಹ ರಾಜಕೀಯ ನಾಯಕರ ಸರಕಾರಗಳು ಕುಡಿಯಲು ನೀರು ಕೂಡದಂತಹ ಬೇಜವಾಬ್ದಾರಿ ಸರಕಾರಗಳಾಗಿವೆ. ಬದುಕಲು ಗಾಳಿ , ಆಹಾರ ಎಷ್ಟು ಅವಶ್ಯವೋ ನೀರು ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದರು ಕೂಡಾ ಇದ್ಯಾವರ ಅರಿವೇ ಇಲ್ಲದಂತೆ ಸರಕಾರಗಳ ಕಾರ್ಯ ಇಂದು ಸುಗಮವಾಗಿ ಸಾಗುತ್ತಿವೆ, ಹಳ್ಳಿಗಾಡುಗಳಲ್ಲಿ ಜಾನುವಾರುಗಳಿಗೆ ಕುಡಿಯುಲು ನೀರು ಸಹ ಸಿಗದಂತಹ ಪರಿಸ್ಥಿತಿ ಬಂದೂದಗಿದೆ.
ಹುಟ್ಟಿನಿಂದ ಸಾಯುವತನಕ ಈ ದೇಹದಲಿ ಕೂನೆಯವರೆಗೆ ಉಸಿರಿರಲು ಆಹಾರವನ್ನು ಕೂಟ್ಟು ಸಾಕುವಂತಹ ಒಡೆಯ ರೈತನನ್ನು ಬಿಟ್ಟರೆ ಬೇರಾರು ಅಲ್ಲಾ ಎಂಬ ಮಾತು ಎಲ್ಲರಿಗು ನೆನಪಿರಲಿ. ಪ್ರಕೃತಿಯನ್ನು ನಂಬಿ ಆಹಾರವನ್ನು ಉತ್ಪಾದಿಸುವಂತಹ ಮನುಷ್ಯ ಈ ರೈತ. ಇವನಿಗಿಲ್ಲಾ ಜಾತಿ, ಭೇದ-ಭಾವ ಎಲ್ಲರಿಗು ಸಮಾನವಾಗಿ ನೋಡುತ್ತಿರುವಂತಹ ಅನ್ನದಾತನಿಗೆ ಸರಕಾರದಿಂದ ಅನ್ಯಾವಾಗಿದ್ದು ಮಾತ್ರ ಸತ್ಯ. ಯಾಕೆಂದರೆ ಇವತ್ತು ಕುಡಿಯಲು ಹಾಗೂ ಕೃಷಿಗೆ ನೀರು ಕೇಳಿದರು ಕೂಡಾ ಏನೂ ಕೂಟ್ಯಂತರ ರೂಪಾಯಿ ಹಣವನ್ನು ಕುಳಿತು ತಿನ್ನಲು ಕೇಳುತ್ತಿದ್ದಾನೆನ್ನುವ ಹಾಗೆ ವರ್ತಿಸುತ್ತಿರುವ ಸರಕಾರದ ನಡೆ ಎಷ್ಟು ಸರಿ? ಇವತ್ತು ಈ ಪ್ರಜಾಪ್ರಭುತ್ವ ವ್ಯೆವಸ್ಥೆಯಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಮಾಡಿಕೂಂಡು ತಾನು ತನ್ನದೆನ್ನುವಂತಹ ಸಂಸಾರವನ್ನು ಎಸಿ ರೂಮಿನಲ್ಲಿ ಸಾಕುತ್ತಿರುವಂತಹ ನಾಯಕರಿಗೆ ಬಿಸಿಲು-ಚಳಿ ಮಳೆಯನ್ನದೆ ನಿತ್ಯ ನಿರಂತರ ಭೂಮಿ-ತಾಯಿಯ ಸೇವೆ ಮಾಡುತ್ತಿರುವಂತಹ ನೇಗಿಲ ಯೋಗಿಯ ನೋವು ತಿಳಿಯುವುದಾದರು ಹೇಗೆ? ಇವತ್ತು ನೀರಿಗಾಗಿ ಹೋರಾಟವಾಗಬಾರದಿತ್ತು ಆದರು ಕೂಡಾ ನೀರಿಗಾಗಿ ಹೋರಟಕ್ಕೀಳಿದ ರೈತಕುಲಕ್ಕೆ ಜಯವಾಗಲಿ ಎನ್ನುವುದು ಸಾರ್ವಜನಿಕರ ಆಶಯ.

[highlight]ರೈತನ ಹೋರಾಟ ಸಮಾಜದ ಉಳಿವಿಗಾಗಿ[/highlight]
ಇವತ್ತು ನಗರದಲ್ಲಿ ಪಕ್ಷಾತೀತ ಹೋರಟ ಸಮಿತಿ ಹೋರಾಟಕ್ಕೆ ಕುಳಿತು ಬರೂಬ್ಬರಿ ನಾಲ್ಕು ತಿಂಗಳಾಗಿದೆ. ಇಲ್ಲಿ ಹಗಲಿರುಳು ನೀರು ಕೊಡಿ ಅಂತಾ ಸತ್ಯಾಗ್ರಹವನ್ನು ಮಾಡುತ್ತಿರುವಂತಹ ರೈತನದೇನು ಸ್ವಾರ್ಥಕ್ಕಾಗಿ ಹೋರಾಟ ಅಂತ ತಿಳಿದಿರುವಿರಾ? ನಾವೆಲ್ಲರು ಇಂದು ಸೂಕ್ಷ್ಮವಾಗಿ ಯೋಚಿಸಿ ನೋಡಿದಾಗ ಈ ರೈತರ ಹೋರಾಟಕ್ಕೆ ಸರಕಾರ ಮಣಿದು ಈ ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೆ ತಂದಿದ್ದೆ ನಿಜವಾದರೆ ಮಹಾದಾಯಿ ನದಿಯ ನೀರು ಮಲಪ್ರಭೆಗೆ ಜೋಡನೆಯಾಗಿದ್ದೆ ನಿಜವಾದರೆ ಯಾರು ಹೋರಾಟವನ್ನು ಮಾಡಿದ್ದಾರೋ ಅಂತವರ ಮನೆಗೆ ಅಷ್ಟೇ ನೀರು ಹೂಗುತ್ತಾ ಅಂತಾ ನಾವೆಲ್ಲಾ ಯೋಚನೆಯನ್ನು ಮಾಡಬೇಕು. ಇದು ಮಾನವಕುಲದ ಉಳಿವಿಗಾಗಿ ಹೋರಾಟ, ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಹಾಗಾಗಿ ಎಲ್ಲರು ಕೂಡಾ ಇವತ್ತು ಈ ಹೋರಾಟದಲ್ಲಿ ಭಾಗಿಯಾಗಿ ನಮಗೆ ಸಿಗಬೇಕಾಗಿರುವಂತಹ ನೀರನ್ನು ಪಡದೆ ತಿರುತ್ತೆವೆಂದು ಕಂಕಣ ಬದ್ದರಾಗಿ ಮನೆಗೂಬ್ಬರಂತೆ ಹೋರಾಟದಲ್ಲಿ ಬಂದು ಕುಳಿತರೆ ಆಡಳಿತದಲ್ಲಿರುವಂತಹ ಕೇಂದ್ರ ಸರಕಾರವಿರಬಹುದು, ರಾಜ್ಯ ಸರಕಾರವಿರಬಹುದು ನಡುಗಿ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲಾ ಯಾಕೆಂದರೆ ಜನಶಕ್ತಿಯ ಮುಂದೆ ಯಾವ ಶಕ್ತಿಯ ಆಟವು ನಡೆಯದು. ಪ್ರಜಾಪ್ರಭುತ್ವದ ವ್ಯೆವಸ್ಥೆಯಲ್ಲಿ ಸರಕಾರಗಳು ರಚನೆಯಾಗುವುದು ಮಾತ್ರ ಜನಾದೇಶದ ಮೇಲೆ.

[highlight]ಸರಕಾರ ತನ್ನ ಬೇಜವಾಬ್ದಾರಿಗೆ ಬೆಲೆ ತೆತ್ತಲೆಬೇಕು.[/highlight]
ಈ ಹೆಸರು ಉಸಿರಿನ ಮೇಲೆ ಇರುವವನೆ ಅನ್ನದಾತ. ಅಂತಹ ಅನ್ನದಾತ ಇಂದು ಸರಕಾರಗಳ ನಿರ್ಲಕ್ಷತನದಿಂದ ಆತ್ಮಹತ್ಯೇಯನ್ನು ಮಾಡಿಕೂಳ್ಳುತ್ತಿದ್ದಾನೆ. ಈ ವರ್ಷದ ಬರಗಾಲ ಅವನನ್ನು ಸಂಪೂರ್ಣವಾಗಿ ಜರ್ಜರಿತರನ್ನಾಗಿ ಮಾಡಿದೆ. ಈ ಲೋಕಕ್ಕಾಕಿ ನಿಸ್ವಾರ್ಥದಿಂದ ಭೂಮಿ-ತಾಯಿಯೂಂದಿಗೆ ಒಡನಾಟವನ್ನು ಬೆಳೆಸಿ ಅನ್ನವನ್ನು ಹಾಕುತ್ತಿದ್ದರೆ ಇವತ್ತಿನ ನಾಚಿಕೆಗೇಡಿನ ಸರಕಾರಗಳು ರೈತಕುಲದ ಸಾವಿನ ಮನೆಯಲ್ಲು ರಾಜಕೀಯವನ್ನು ಮಾಡುತ್ತಿರುವುದು ಮಾತ್ರ ದುರಂತದ ಸಂಗತಿ. ನಮಗೆಲ್ಲಾ ಜನ್ಮವನ್ನು ಕೂಡುವಂತಹ ತಾಯಿಯು ಯಾವ ರೀತಿಯಾಗಿ ಉಚ್ಚಸ್ಥಾನದಲ್ಲಿ ನಿಲ್ಲುತ್ತಾಳೋ ಅದೇ ರೀತಿ ಈ ಮೌಂಸ ಮುದ್ದೇಯ ದೇಹವನ್ನು ಸಾಕಿ-ಸಲುಹಲು ಪಣ ತೂಟ್ಟಿರುವಂತಹ ರೈತನ ಕಾಯಕವನ್ನು ಮೆಚ್ಚಲೇಬೇಕು. ನಾವು ಇತಿಹಾಸವನ್ನು ಕೆದಕಿ ನೋಡಿದರು ಕೂಡಾ ಮೂದಲಿನ ಕಾಲದಲ್ಲಿಯು ರೈತರಿಗೆ ದೇವರ ಸ್ಥಾನವನ್ನು ನೀಡುತ್ತಿದ್ದರು. ಇಂದು ನಾವೆಲ್ಲಾ ದೇವರ ರೂಪವನ್ನು ಕಾಣದಿದ್ದರು ಕೂಡಾ ಅನ್ನವನ್ನು ಉತ್ಪಾದಿಸಿ ಕೂಡುವ ಈ ನೇಗಿಲಯೋಗಿಯೇ ನಮ್ಮ ಪಾಲಿನ ನಿಜವಾದ ದೈವಿ ಪುರುಷನೆಂದರೆ ತಪ್ಪಾಗಲಾರದು. ಇಂತಹ ಮಹಾತ್ಮರೂಂದಿಗೆ ರಾಜಕೀಯ ನಾಟಕವನ್ನಾಡÀುತ್ತಿರುವಂತಹ ಸರಕಾರಗಳು ಮುಂದಿನ ದಿನಮಾನಗಳಲಿರೀ ಬೇಜವಾಬ್ದಾರಿತನಕ್ಕೆ ಹೆಚ್ಚಿನ ಬೆಲೆಯನ್ನು ತೆರೆಯಲೇ ಬೇಕಾಗುತ್ತದೆ. ಈ ರೈತಕುಲ ಮನಸ್ಸು ಮಾಡಿದರೆ ಬುದ್ದಿವಂತರ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು ಅಂತಹ ಶಕ್ತಿ ಅವನಲ್ಲಿದೆ.

[highlight]ರೈತಕುಲದ ಹೋರಾಟಕ್ಕೆ ಕೈಜೋಡಿಸಿ[/highlight]
ಈ ಭಾಗದ ನಾಲ್ಕು ದಶಕಗಳ ಯೋಜನೆಯಾದಂತಹ ಮಹಾದಾಯಿ ಹಾಗೂ ಕಳಸಾ-ಬಂಡೂರಿ ನೀರಿನ ಯೋಜನೆಯನ್ನು ಅನುಷ್ಠಾನಗೂಳಿಸಬೇಕೇಂದು ನಿರಂತರವಾಗಿ ರೈತಪಡೆ ಹೋರಾಟವನ್ನು ಮಾಡುತ್ತಾ ಬಂದಿದ್ದರು ಕೂಡಾ ಯಾವುದೇ ಸರಕಾರಗಳು ಇಲ್ಲಿಯವರೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲೇ ಇಲ್ಲಾ. ಈ ಯೋಜನೆಯು ರಾಜಕೀಯ ನಾಯಕರಿಗೆ ಚುನಾವಣೆಯಲ್ಲಿ ಒಂದು ವಿಷಯವಾಗಿ ಮಾರ್ಪಟ್ಟಿದ್ದು ಬಿಟ್ಟರೆ ಈ ಕುರಿತು ತಮ್ಮ ಆತ್ಮಸಾಕ್ಷಿಯಾಗಿ ಯೋಚಿಸಿದವರು ಒಬ್ಬರು ಇಲ್ಲಾ ಇಂತಹ ಪರಿಸ್ಥಿತಿಯಲ್ಲಿ ರೈತ ನಾಯಕರು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ಯಾಕೆಂದರೆ ನಾವು ಆರಿಸಿ ಕಳಿಸಿರುವಂತಹ ಸರಕಾರ ನಮ್ಮ ವಿರುದ್ದ ನಡೆದುಕೂಳ್ಳುತ್ತಿದ್ದರೆ ಅಥವಾ ನಮ್ಮ ಬೇಡಿಕೆಯನ್ನು ಈಡೇರಿಸಲು ಮೀನಾಮೇಷ ಎಣಿಸಿದರೆ ಅಂತಹವರ ವಿರುದ್ದ ್ಲ ಹೋರಾಟದ ಮಾರ್ಗ ಅನಿವಾರ್ಯವಾಗುತ್ತದೆ. ಅಂತಹ ಮಾರ್ಗವನ್ನು ಇವತ್ತು ನೇಗಿಲಯೋಗಿ ಹಿಡಿದಿದ್ದಾನೆ. ನಮ್ಮ ರಾಜ್ಯದ ನೀರು ನಾವು ಕೇಳಲು ಹೋರಾಟವನ್ನು ಮಾಡುವುದು ಅನಿವಾರ್ಯವಾಗಿದೆ. ಅಂತಹ ಹೋರಾಟಕ್ಕೆ ಕೇವಲ ಬೆಂಬಲವನ್ನು ನೀಡಿದರೆ ಅಷ್ಟೇ ಸಾಲದು ಆ ಹೋರಾಟ ಅಂತ್ಯ ಕಾಣುವವರೆಗೆ ರ್ಯತಕುಲದ ಜೋತೆಗಿದ್ದು ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡಬೇಕಾಗಿರುವುದು ಪ್ರತಿಯೂಬ್ಬರ ಕರ್ತವ್ಯವಾಗಿದೆ.
[highlight]ನಾವು ಈ ನೀರಿನ ಹೋರಾಟವನ್ನು ಆರಂಭ ಮಾಡಿ ಇವತ್ತಿಗೆ ನೂರ ಹನ್ನೇರಡು ದಿವಸವಾಯಿತು. ಇಲ್ಲಿಯವರೆಗೆ ನಮ್ಮ ಹೋರಾಟಕ್ಕೆ ಈ ತಾಲೂಕಿನ ಸಮಸ್ತ ರೈತರಿಂದ, ವರ್ತಕರಿಂದ, ಕೂಲಿ-ಕಾರ್ಮಿಕರಿಂದ, ಮಹಿಳೆಯರಿಂದ ಉತ್ತಮವಾದಂತಹ ಬೆಂಬಲ ಸಿಕ್ಕಿದೆ ತಾಲೂಕಿನಿಂದ ಹಿಡಿದು ರಾಜ್ಯಾದ್ಯಂತಯಿರುವಂತಹ ನೂರಾರು ಸಂಘಟನೆಗಳ ಬೆಂಬಲವನ್ನು ನಾವು ಯಾವಾಗಲು ಮರೆಯಲು ಸಾಧ್ಯವಿಲ್ಲಾ. ಅವರಿಗೆಲ್ಲಾ ಪಕಾತೀತ ಹೋರಾಟ ಸಮಿತಿ ಚಿರಋಣಿಯಾಗಿರುತ್ತದೆ.. ಇವತ್ತು ನಮ್ಮನ್ನಾಳುವ ಜನಪ್ರತಿನಿಧಿಗಳ ನಿರ್ಲಕ್ಷತನದಿಂದ ನಾವು ಈ ಮಹಾದಾಯಿ ಹಾಗೂ ಕಳಸಾ-ಬಂಡೂರಿ ನಾಲೆಗಳನ್ನು ಮಲಪ್ರಭೆಗೆ ಜೋಡಿಸಲು ಹೋರಾಟವನ್ನು ಮಾಡುವುದು ಅನಿವಾರ್ಯವಾಗಿದೆ. ಇಲ್ಲಿಯವರೆಗೆ ಸಹಕಾರವನ್ನು ಕೂಟ್ಟ ರೀತಿಯಲ್ಲಿ ಮುಂದೆಯೋ ನಮಗೆ ನಿಮ್ಮ ಬೆಂಬಲದ ಅವಶ್ಯಕತೆಯಿದೆ. ನಿಮಗೆ ಕೈಮುಗಿದು ಬೇಡಿಕೂಳ್ಳುವುದಿಷ್ಟೇ ಈ ತಾಲೂಕಿನ ಪ್ರತಿಯೂಂದು ಮನೆಯಿಂದ ಒಬ್ಬ ವ್ಯಕ್ತಿ ಭಾಗಿಯಾದರೆ ಸರಕಾರ ಎಚ್ಚೇತ್ತುಕೂಂಡು ಕೂಡಲೇ ಈ ಯೋಜನೆ ಅನುಷ್ಠಾನ ಮಾಡಿ ನಮಗೆ ಕಳಸಾ ಬಂಡೂರಿ ನೀರು ಈ ಭಾಗಕ್ಕೆ ಹರಿಸುವುದರಲ್ಲಿ ಯಾವುದೇ ಸಂದೇಹವಿಲ್ಲಾ.

ಲೋಕನಾಥ ಹೆಬಸೂರ
ಅಧ್ಯಕ್ಷರು ಪಕ್ಷಾತೀತ ರೈತ ಹೋರಾಟ ಸಮಿತಿ, ನವಲಗುಂದ
[highlight]ಇವತ್ತು ರೈತಕುಲ ನಾಶವಾಗುತ್ತಿದೆ. ಈ ವರ್ಷ ಭೀಕರ ಬರಗಾಲ ಬಿದ್ದಿರುವುದರಿಂದ ಕುಡಿಯಲು ಹಾಗೂ ಕೃಷಿಗೆ ನೀರು ಕೇಳಿದರೆ ಕೂಡದಂತಹ ಸರಕಾರಕ್ಕೆ ನಾಚಿಕೆಯಾಗಬೇಕು. ನಮ್ಮ ರಾಜ್ಯದಲ್ಲಿ ಹುಟ್ಟಿ ಮೂವತ್ತೇಳು ಕಿಲೋ ಮೀಟರ ಹರಿಯುವಂತಹ ಮಹಾದಾಯಿ ನದಿಯ ನೀರು ನಾವು ಬಳಕೇ ಮಾಡಲು ತಕರಾರು ತೆಗೆಯುತ್ತಿರುವಂತಹ ಗೋವಾ ಮಹಾರಾಷ್ಟ್ರ ಸರಕಾರಗಳ ನಡೆ ಎಷ್ಟು ಸರಿ? ಈ ಮಹಾದಾಯಿ ನದಿಯ ಯೋಜನೆ ಅನುಷ್ಠಾನಕ್ಕೆ ಇಷ್ಟು ವಿಳಂಭವಾಗುತ್ತಿರುವುದಕ್ಕೆ ಕಾರಣ ರಾಜ್ಯ ಸರಕಾರಗಳ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎನ್ನುವ ಮಲತಾಯಿ ಧೋರಣೆ ಮತ್ತು ನಾವು ಆರಿಸಿ ಕಳಿಸಿರುವಂತÀಹ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೂರತೆಯಿಂದ ಇದು ಹಿಂದೆ ಬಿದ್ದಿದೆ. ಈ ಭಾಗಕ್ಕೆ ನೀರು ಬರುವವರೆಗೆ ನಾವು ಹೋರಾಟವನ್ನು ಮಾಡುತ್ತೇವೆ. ಈ ಗಂಡು ಮೆಟ್ಟಿದ ನಾಡಿನಲ್ಲಿ ಮತ್ತೂಂದು ಬಂಡಾಯವಾದರು ಸರಿ ರಕ್ತವನ್ನು ಹರಿಸಿಯಾದರು ನೀರು ಪಡದೆ ತೀರುತ್ತೇವೆ. ನಮ್ಮ ಹೋರಾಟಕ್ಕೆ ಇಲ್ಲಿಯವರೆಗೆ ಸಹಕರಿಸುತ್ತಾ ಬಂದಿರುವಂತಹ ಸಮಸ್ತ ತಾಲೂಕಿನ ಜನರಿಗೆ ನಾವು ಆಭಾರಿಯಾಗಿದ್ದೇವೆ. ನಿಮ್ಮೇಲ್ಲರ ಸಹಕಾರ ಹಿಗೆಯೇ ಮುಂದುವರೆಯಲಿ.

loading...

LEAVE A REPLY

Please enter your comment!
Please enter your name here