ಬರ ಕಾಮಗಾರಿಯಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕರವೇ ಹಾಗೂ ವಿವಿಧ ಸಂಘ ಸಂಸ್ಥೆಳಿಂದ ತಹಶೀಲ್ದಾರಗೆ ಮನವಿ

0
74

23kdl-01ಕುಂದಗೋಳ,23: ತಾಲೂಕನ್ನು ಬರಪೀಡಿತ ಎಂದು ಸಾರಿದರೂ ಕೂಡ ಹಲವಾರು ಗ್ರಾಮಗಳಲ್ಲಿ ಕೂಲಿ ಕೆಲಸವಿಲ್ಲದೇ ಜನತೆ ಗುಳೆ ಹೋಗುತ್ತಿದ್ದಾರೆ. ಹೊಸಕಟ್ಟಿ ಗ್ರಾಮ ಸಹಿತ ಅನೇಕ ಗ್ರಾಮಗಳಲ್ಲಿ ಹಾಡು ಹಗಲೇ ಸರಾಯಿಯನ್ನು ಮಾರಾಟ ಮಾಡಿ ಜನತೆಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಯಾವುದೇ ಅಧಿಕಾರಿಗಳು ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನಪರ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿದ ನೂರಾರು ಕರವೇ ಹಾಗೂ ಜನಪರ ಸಂಘಟನೆಯ ಮುಖಂಡರು, ತಾಲ,ಊಕಿನ ಹಲವಡೆ ಕೆಲಸವಿಲ್ಲದೇ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಬೆಳೇ ಇಲ್ಲದ್ದರಿಂದ ಕಂಗಾಲಾಗಿ ಸಾಕಷ್ಟು ಸಾಲ, ಸೋಲ ಮಾಡಿರುವ ಜನತೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಕೂಡಲೇ ಬರ ಕಾಮಗಾರಿ ಆರಂಬಿಸಬೇಕು. ಅಲ್ಲದೇ ಹೊಸಕಟ್ಟಿ ಗ್ರಾಮ ಸಹಿತ ತಾಲೂಕಿ ಬಹುತೇಕ ಕಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ದಂಧೆಯಿಂದಾಗಿ ಮಹಿಳೆಯರು ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕುಟುಂಭಗಳು ಬೀದಿಗೆ ಬೀಳತೊಡಗಿವೆ. ಇದನ್ನು ತಡೆಗಟ್ಟಲು ಹಲವಾರು ಬಾರಿ ಸಂಭಂದಿಸಿದವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯಜನವಾಗಿಲ್ಲ. ಇದೇ ವ್ಯವಸ್ಥೇ ತಾಲೂಕಿನ ಹಲವಾರು ಗ್ರಾಮಗಳಲ್ಲೂ ಸಹ ಇದ್ದು ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ತಕ್ಷಣ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಅವರಿಗೆ ಉದ್ಯೋಗವನ್ನು ನೀಡಿ ಅವರ ಬದುಕಿಗೆ ದಾರಿ ಮಾಡಿಕೊಡಬೇಕು. ಜೀವನ ನಿರ್ವಹಿಸುವುದೇ ಕಷ್ಟವಾಗಿರುವ ಇಂದಿನ ಪರಿಸ್ಥಿಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ ಎಂ.ಎಸ್.ಬನಸಿ ಮನವಿ ಸ್ವೀಕರಿಸಿದರು. ಕರವೇ ಮುಖಂಡರಾದ ಕಲ್ಲಪ್ಪ ಹರಕುಣಿ, ರೈತ ಮುಖಂಡ ಶಂಕರಗೌಡ ದೊಡಮನಿ, ಯಲ್ಲಪ್ಪ ಬರದ್ವಾಡ, ಮೌಲಾ ತಹಶೀಲ್ದಾರ, ಶಿವಾನಂದ ಮಲ್ಲಿಗವಾಡ, ಅಶೋಕ ಸಂಶಿ, ಮಂಜು ಗೋಣೆಪ್ಪನವರ, ಅಡಿವೆಪ್ಪ ತಳವಾರ, ನಾರಾಯಣ ಅಂಗಡಿ, ಅರುಣಗೌಡ ಪಾಟೀಲ, ಸಂಕನಗೌಡ ಪಾಟೀಲ, ಈರಣ್ಣ ಮಲ್ಲಿಗವಾಡ, ರಮೇಶ ಅಣ್ಣಿಗೇರಿ, ಚಂದ್ರಗೌಡ ಪಾಟೀಲ ಮತ್ತಿತರರು ಈ ಸಂದಭ್ದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here