ಪ್ರೌಢಶಾಲಾ ನೌಕರರ ಸಹಕಾರ ಸಂಘ ಅಸ್ತಿತ್ವಕ್ಕೆ ಸದಸ್ಯರ ಆರ್ಥಿಕ ಸಂಕಟ ನಿವಾರಿಸಿ: ಜಾರಕಿಹೊಳಿ

0
56

ಬೆಳಗಾವಿ 23 ; ಲಂದು ಅಸ್ತಿತ್ವಕ್ಕೆ ಬಂದಿರುವ ಸರಕಾರಿ ಪ್ರೌಢಶಾಲಾ ನೌಕರರ ಸಹಕಾರ ಪತ್ತಿನ ಸಹಕಾರ ಪತ್ತಿನ ಸಂಘ ನಿಯಮಿತ ಉತ್ತÀ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ. ಪ್ರೌಢ ಶಾಲಾ ಶಿಕ್ಷಕರ ಮತ್ತು ನೌಕರರ ಆಭಿವೃದ್ಧಿಗೆ ಶ್ರಮಿಸಲಿ. ಸಂಸ್ಥೆಯ ಸದಸ್ಯರ ಸಾಮಾಜಿಕ, ಶೈಕ್ಷಣಿಕ ಸುಧಾರಣೆಯತ್ತ ಗಮನಹರಿಸಲಿ. ಸಾಮಾಜಿಕ ಕಾರ್ಯಗಳನ್ನೂ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನುಡಿದರು.
ಅವರು ಇಂದು ಸರಕಾರಿ ಪ್ರೌಢಶಾಲಾ ನೌಕರರ ಸಹಕಾರ ಪತ್ತಿನ ಸಹಕಾರ ಪತ್ತಿನ ಸಂಘ ನಿಯಮಿತವನ್ನು ಉದ್ಘಾಟಿಸಿ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಸಂಘವನ್ನು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘರ ಅಧ್ಯಕ್ಷ ಆರ್. ಜಿ. ಮಂತುರ್ಗಿ ಮಾತನಾಡುತ್ತ, ಸಂಘದ ಆರಂಭಕ್ಕೆ ಕಾರಣ ಹಾಗೂ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಅತಿಥಿಗಳಾದ ಡಾ. ರವಿ ಪಾಟೀಲ ತಮ್ಮ ಮಾತಿನಲ್ಲಿ, ಸಂಘ ತನ್ನ ಸದಸ್ಯರ ಆರ್ಥಿಕ ಸಂಕಷ್ಟವನ್ನು ನೀಗಿಸಲಿ. ಶಿಕ್ಷಕರಿಗಾಗಿ ವಿಜಯಾ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಉಪಚಾರ ಒದಗಿಸುತ್ತಿದ್ದು, ಅದರ ಲಾಭ ಪಡೆದುಕೊಳ್ಳಲು ಕರೆ ನೀಡಿದರು.

ಸಂಘದ ಆರಂಭಿಕ ಉತ್ಸಾಹ ನಿರಂತರವಾಗಿರಲಿ. ಸಾಕಷ್ಟು ಸದಸ್ಯರನ್ನು ಹೊಂದಿ ಎಲ್ಲರಿಗೂ ಮಾದರಿಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ನುಡಿದರು. ಎನ್. ಬಿ. ಬನ್ನೂರ, ಯುವರಾಜ ಕದಂ, ಡೈಟ್ ಪ್ರಾಚಾರ್ಯ ಡಿ. ಎಮ್. ದಾನೋಜಿ, ಬಿಇಓಗಳಾದ ಆರ್.ಪಿ ಜುಟ್ಟನವರ, ಯು.ಡಿ ಹುನಕುಪ್ಪಿ, ಆರ್. ಎಸ್. ಭಂಡಾರಿ, ರಾಮು ಗುಗವಾq ಮಂತಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಆರ್ ಎನ್ ಜವಳೇಕರ ಸ್ವಾಗತಿಸಿದರು.ಅಷ್ಟಗಿ ಕಾರ್ಯಕ್ರಮ ನಿರೂಪಿಸಿದರು. ಬಿಆರ್‍ಪಿ ಪಿ ಎಚ್ ನಾಯ್ಕ ವಂದಿಸಿದರು,

loading...

LEAVE A REPLY

Please enter your comment!
Please enter your name here