ಇಂಗಳಗಿ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ

0
65

23kdl-02ಕುಂದಗೋಳ,23: ಸರಕಾರದ ಅತ್ಯಂತ ಜನಹಿತ ಮತ್ತು ತಮ್ಮ ಆರೋಗ್ಯ ಕೌಟಂಬಿಕ ದುಗುಡವನ್ನು ಹೋಗಲಾಡಿಸಿಕೊಳ್ಳಲು ಶೌಚಾಲಯ ನಿರ್ಮಾಣದ ಅವಶ್ಯಕತೆ ಇದೆ. ಜನರು ಮಾನಸಿಕವಾಗಿ ಬದಲಾಗಬೇಕಾದರೆ ಬಯಲು ಶೌಚದಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವೈ.ಡಿ.ಕುನ್ನಿಬಾವಿ ಕರೆ ನೀಡಿದರು.
ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಶೌಚಾಲಯ ದಿನಾಚರಣೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನಿಗೆ ಅನ್ನ, ಆಹಾರ ಎಷ್ಟು ಮುಖ್ಯವೋ ಶೌಚವೂ ಅಷ್ಟೇ ಮುಖ್ಯ. ಈ ಹಿಂದೆ ಬಯಲು ಶೌಚದ ವ್ಯವಸ್ಥೆ ಇತ್ತು. ಮುಂದುವರೆದ ದಿನಗಳಲ್ಲಿ ಸರಕಾರದ ಸಾಕಷ್ಟು ನೆರವು ಮತ್ತು ಈ ಯೋಜನೆಯ ಸಾಕಾರತೆಗಿರುವ ಅನುದಾನವನ್ನು ಸಾಕಷ್ಟು ಬಳಸಿಕೊಂಡು ಪ್ರತಿ ಹಳ್ಳಿಯಲ್ಲೂ ಶೌಚಾಲಯ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಸ್ಥಳಿಯ ಗ್ರಾಮ ಪಂಚಾಯತಿಯು ಈ ಬಗ್ಗೆ ಅನೇಕ ಬಾರಿ ತಿಳುವಳಿಕೆಯ ಕಾರ್ಯಕ್ರಮ ಸಹ ನಡೆಸಿದೆ. ಬಹುತೇಕ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಯೋಜನೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಸ್ತ್ರೀ ಪುರುಷರೆನ್ನದೇ ಎಲ್ಲರಿಗೂ ಅತೀ ಮುಖ್ಯವಾಗಿರುವ ಶೌಚ ನಮ್ಮ ಮನೆಯ ಆವರಣದಲ್ಲಿ ಇರಲೇಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅದ್ಯಕ್ಷ ಪ್ರಭುಗೌಡ ಸಂಕಾಗೌಡಶಾನಿ, ಇಂಗಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರೇಬೂದಿಹಾಳ ಸಹಿತ ಈ ಎರಡೂ ಗ್ರಾಮಗಳಿಗೆ ಶೌಚಾಲಯದ ವ್ಯವಸ್ಥೇಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬಯಲು ಶೌಚ ಮುಕ್ತ ಗ್ರಾಮಕ್ಕೆ ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗುವುದು.
ಈ ಜಾಗೃತಿ ಅಭಿಯಾನವನ್ನು ನಮ್ಮಿಂದಲೇ ಪ್ರಾರಂಭವಾಗಿ ಪ್ರತಿಯೊಬ್ಬರ ಮನೆ, ಮನ ಮುಟ್ಟಿಸಲು ಪ್ರಯತ್ನ ಮಾಡಲಾಗುವುದು. ಗ್ರಾಮೀಣಾಭಿವೃದ್ದಿಯ ಮಹತ್ವಾಕಾಂಕ್ಷಿಯ ಈ ಯೋಜನೆಯನ್ನು ಒಂದು ವರ್ಷದಲ್ಲಿ ಸಾಕಾರಗೊಳಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಪ್ರತಿ ಮನೆಯಲ್ಲೂ ಕಡ್ಡಾಯ ಶೌಚಾಲಯ ನಿರ್ಮಾಣಕ್ಕೆ ಯುವಕರಿಗೆ ಪ್ರತಿಜ್ಞೆ ಮಾಡಿಸಲಾಯಿತು.
ತಾಲೂಕ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ) ಬಸವರಾಜ ಕುಸುಗಲ್ಲ್, ಪಿಆರ್‍ಇಡಿ (ನೀರು ನಿರ್ವಹಣೆ) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್.ವೀರಕರ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಧರ್ಮಣ್ಣ, ಸದಸ್ಯರಾಧ ತಿಪ್ಪಣ್ಣ ಖಜ್ಜಿ, ಮಂಜುಗೌಡ ಪಾಟೀಲ ಸಹಿತ ಅನೇಕರು ಕಾರ್ಯಕ್ರಮದಲ್ಲಿದ್ದರು. ಕಾರ್ಯಕ್ರಮದ ನಂತರ ಗ್ರಾಮದಲ್ಲಿ ಕಾರ್ಯಕ್ರಮದ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು.

loading...

LEAVE A REPLY

Please enter your comment!
Please enter your name here