ಮುಳ್ಳಹಳ್ಳಿ ಗ್ರಾಮಕ್ಕೆ ಉಜ್ಜಯಿನಿ ಶ್ರೀಗಳು

0
64

ಕುಂದಗೋಳ,23: ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಲಿಂ, ಶ್ರೀ ಚೆನ್ನಬಸವ ಶಿವಯೋಗಿಗಳವರ 75 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಮಂಗಲ ಕಾರ್ಯಕ್ರಮದ ಮಹಾ ಮಂಗಲ ಹಾಗೂ ಶ್ರೀಮಠದ ನೂತನ ಅತಿಥಿ ಗೃಹದ ಉದ್ಘಾಟನೆ ದಿ.24 ರಂದು ಜರುಗಲಿದ್ದು, ದಿ.25 ರಂದು ಸರ್ವ ಧರ್ಮಗಳ ಸಾಮೂಹಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸಂಜೆ 6 ಗಂಟೆಗೆ ಜರುಗುವ ಶ್ರೀಮಠದ ನೂತನ ಅತಿಥಿ ಗೃಹವನ್ನು ಹಾಗೂ ಮಳೆ ನೀರು ಕೊಯ್ಲು ಘಟಕವನ್ನು ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ 1008 ಜ.ಡಾ.ಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯರು ಉದ್ಘಾಟಿಸುವರು
ಸಮ್ಮುಖವನ್ನು ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಅಡ್ನೂರ, ಶಿತಿಕಂಠ ಶಿವಚಾರ್ಯ ಸ್ವಾಮೀಜಿ ಪಂಚಗ್ರಹ ಹಿರೇಮಠ ಕುಂದಗೋಳ, ಚಂದಾಪೂರದ ಸಚ್ಚಿದಾನಂದರು, ಕಲ್ಯಾಣಪೂರದ ಬಸವಣ್ಣಜ್ಜ ವಹಿಸಿಕೊಳ್ಳುವರು.
ದಿ.25 ರಂದು ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದ್ದು, ನಂತರ ನಡೆಯುವ ಧರ್ಮ ಸಭೇಯ ಸಾನಿಧ್ಯವನ್ನು ಹುಬ್ಬಳ್ಳಿ ಮೂರುಸಾವೀರಮಠದ ಶ್ರೀ ಗುರುಶಿದ್ದ ರಾಜಯೋಗೀಂದ್ರ ಸೌಆಮೀಜಿ ವಹಿಸಿಕೊಳ್ಳುವರು. ಸಮ್ಮುಖವನ್ನು ಮಂಟೂರಿನ ಶಿವಲಿಂಗೇಶ್ವರ ಶ್ರೀಗಳು ವಹಿಸಿಕೊಳ್ಳುವರು. ಸಾಮೂಹಿಕ ಕಾರ್ಯಕ್ರಮವನ್ನು ಶಾಶಕ ಸಿ.ಎಸ್.ಶಿವಳ್ಳಿ ಉದ್ಘಾಟಿಸುವರೆಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here