ಖಾನಾಪುರದಲ್ಲಿ ಕಾನೂನು ಸಾಕ್ಷರತಾ ಶಿಬಿರ

0
44

 

ಖಾನಾಪುರ23 : ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಸನ್ನಿವೇಶ ಬದಲಾಗಬೇಕು ಮತ್ತು ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆ ತೊಲಗಿ ಮಹಿಳೆ ಮತ್ತು ಪುರುಷರಲ್ಲಿ ಸಮಾನತೆ ಏರ್ಪಡಬೇಕು ಎಂದು ಸ್ಥಳೀಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಅಭಿಪ್ರಾಯ ಪಟ್ಟರು.

ಸೋಮವಾರ ಪಟ್ಟಣದ ಪಟ್ಟಣ ಪಂಚಾಯ್ತಿ ಸಭಾಗೃಹದಲ್ಲಿ ಪಟ್ಟಣ ಪಂಚಾಯ್ತಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನ ಜಾಗರಣ ಸಂಸ್ಥೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳು ಆಯೋಜಿಸಿದ್ದ ಮಹಿಳೆಯರಿಗೆ ಕಾನೂನು ಸಾಕ್ಷರತಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ ಸಿದ್ರಾಮಪ್ಪ, ಸರ್ಕಾರಿ ಅಭಿಯೋಜಕ ಕೆ ಎನ್ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ ಐ ಬಿ ಲಂಗೋಟಿ, ಎ ಡಿ ಲೋಕರೆ, ರುದ್ರಗೌಡ ಪಾಟೀಲ, ಚಂದ್ರಶೇಖರ ಅಂಬೋಜಿ, ಎಸ್ ಎಸ್ ಕಪಿಲೇಶ್ವರಿ, ಆರ್ ಎಸ್ ಕಿತ್ತೂರ, ಎಂ ವಾಯ್ ಮಾದರ, ಪಿ ವಾಯ್ ಪಡಿಪಾಟೀಲ ಸೇರಿದಂತೆ ಪಟ್ಟಣ ಪಂಚಾಯ್ತಿ, ನ್ಯಾಯಾಲಯ ಹಾಗೂ ಜನ ಜಾಗರಣ ಸಂಸ್ಥೆಯ ಸಿಬ್ಬಂದಿ, ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಇದ್ದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನ ಜಾಗರಣ ಸಂಸ್ಥೆಯ ಎಲ್ ಡಿ ಪಾಟೀಲ ಸ್ವಾಗತಿಸಿದರು. ವಕೀಲ ಸಾದಿಕ್ ನಂದಗಡಿ ನಿರೂಪಿಸಿದರು. ಪ್ರೇಮಾನಂದ ನಾಯ್ಕ ವಂದಿಸಿದರು.

loading...

LEAVE A REPLY

Please enter your comment!
Please enter your name here