ತೆವಳುವ ಗಾಡಿಯಲ್ಲಿಯೇ ಅಯ್ಯಪ್ಪನ ಸೇವೆ ಮಾಡುವ ಭಕ್ತ

0
69

ayyappan bhakt

 

ಆಲಮಟ್ಟಿ: ಹೌದು ಅಚ್ಚರಿಯಾದರೂ ಸತ್ಯ..ಈ ವ್ಯಕ್ತಿ ಅಂಗವಿಕಲ, ಸೊಂಟದ ಕೆಳಗಿನ ಸ್ವಾಧೀನ ಇಲ್ಲ..ಆದರೇ ದೃಢ ಸ್ವಭಾವದ ವ್ಯಕ್ತಿ..ಹೀಗೆ ತಾನು ಹೊತ್ತ ಹರಿಕೆ ತೀರಿಸಲು ಕೇರಳದ ಶಬರಿಮಲೈಗೆ ತನ್ನ ಸಾಧನವಾದ ತೆವಳುತ್ತಲೇ ತೆರಳುತ್ತಿರುವ ಅಪರೂಪದ ಭಕ್ತ.
ಈತನ ಹೆಸರು ನಾಗಪ್ಪ ಜಂಗಪ್ಪ ಗೊಲ್ಲರ ವಯಸ್ಸು 25 ವರ್ಷ. ಬಸವನಬಾಗೇವಾಡಿ ಈತನ ಗ್ರಾಮ. ಕಳೆದ ಏಳು ವರ್ಷದಿಂದಲೂ ಈತ ಅಯ್ಯಪ್ಪನ ಭಕ್ತ. ಪ್ರತಿ ವರ್ಷವೂ ಮಾಲೆಧಾರಿಯಾಗಿ ವೃತವನ್ನು ಪಾಲಿಸುತ್ತಾನೆ. ಆದರೆ ಅಯ್ಯಪ್ಪನ ದರ್ಶನಕ್ಕೆ ತೆರಳಿಲ್ಲ. ಇದೇ ಮೊದಲ ಬಾರಿಗೆ ಆತನ ಬೇಡಿಕೆ ಪೂರೈಕೆಯಾದ ಕಾರಣ ತಾನು ಅಂಗವಿಕಲನಾದರೂ ತನ್ನ ವಾಹನವಾಗಿರುವ ತೆವಳುವ ಗಾಡಿಯಲ್ಲಿಯೇ ಸುಮಾರು 1500 ಕಿ.ಮೀ ದೂರದ ಕೇರಳದ ಶಬರಿಮಲೈಗೆ ತೆರಳುತ್ತಿದ್ದಾನೆ.
ಅದಕ್ಕಾಗಿಯೇ ತೆವಳುವ ಹೊಸ ಗಾಡಿ ನಿರ್ಮಿಸಿಕೊಂಡಿದ್ದು, ಕಟ್ಟಿಗೆಯ ಕೆಳಗೆ ನಾಲ್ಕು ಬೇರಿಂಗ್‍ವುಳ್ಳ ಗಾಲಿಗಳಿವೆ, ಹಿಂದೆ ಕಬ್ಬಿಣದಿಂದ ನಿರ್ಮಿಸಿದ ಕಂಬದಲ್ಲಿ ತಾನು ತೆರಳುತ್ತಿರುವ ಬಗೆಯನ್ನು ಬರೆದಿದ್ಧಾನೆ. ಎರಡು ಕೈಯಲ್ಲಿ ಕಟ್ಟಿಗೆ ಚಪ್ಪಲಿ ಮಾಡಿಕೊಂಡಿದ್ದು, ಕೈಯನ್ನು ರಸ್ತೆಗೆ ಒತ್ತುತ್ತಾ ಮುಂದಕ್ಕೆ ಚಲಿಸುತ್ತಿದ್ದಾನೆ.
ಪ್ರತಿನಿತ್ಯ 20 ಕಿ.ಮೀ ವರೆಗೆ ತೆರಳುವ ಉದ್ದೇಶಹೊಂದಿದ್ದು, ಮುಂದಿನ 45 ದಿನದ ನಂತರ ಶಬರಿಮಲೈ ತಲುಪುವ ಗುರಿ ಹೊಂದಿದ್ದೇನೆ ಎನ್ನುತ್ತಾನೆ ನಾಗಪ್ಪ.
ಈತನ ಸಹಾಯಕ್ಕಾಗಿ ಈತನ ತಂದೆ ಜಂಗಪ್ಪ ಗೊಲ್ಲರ (48) ಕೂಡಾ ನಡೆಯುತ್ತಾ ಸಾಗುತ್ತಿದ್ದು, ನಾಗಪ್ಪನಿಗೆ ಸಹಾಯ ಮಾಡುತ್ತಿದ್ದಾರೆ, ಅವರು ನಡೆಯುತ್ತಲೇ ಶಬರಿಗೆ ತೆರಳುವ ಉದ್ದೇಶ ಹೊಂದಿದ್ದಾರೆ.
ದಾರಿಯಲ್ಲಿ ಬರುವ ಗ್ರಾಮದ ದೇವಸ್ಥಾನದಲ್ಲಿ ಮಲಗಲು ನಿರ್ಧರಿಸಿದ್ದೇವೆ, ಅಲ್ಲದೇ ಅದೇ ಗ್ರಾಮದಲ್ಲಿ ಜನ ನೀಡುವ ಅನ್ನ ಆಹಾರವನ್ನೇ ತಿಂದು ಸಾಗುತ್ತಿದ್ದೇನೆ ಎನ್ನುತ್ತಾರೆ ನಾಗಪ್ಪ. ಮಂಗಳವಾರ (ನ-24)ದಿಂದ ನನ್ನ ಯಾತ್ರೆ ಆರಂಭಗೊಂಡಿದ್ದು, ಮಂಗಳವಾರ ಬಸವನಬಾಗೇವಾಡಿಯಲ್ಲಿ ಅಯ್ಯಪ್ಪ ಭಕ್ತರು ಸೇರಿ ನನ್ನನ್ನು ಬೀಳ್ಕೊಟ್ಟರು ಎನ್ನುತ್ತಾರೆ ನಾಗಪ್ಪ. ಬುಧವಾರ ಆಲಮಟ್ಟಿಯನ್ನು ಆತ ತಲುಪಿದ್ದಾನೆ. ಪ್ರತಿನಿತ್ಯ 20 ರಿಂದ 25 ಕಿ.ಮೀ ವರೆಗೆ ಪ್ರಯಣಿಸುವ ಗುರಿ ಇಟ್ಟುಕೊಂಡಿದ್ದು, ಕಟ್ಟಿಗೆಯ ಚಪ್ಪಲಿ ಕೈಗೆ ಹಾಕಿಕೊಂಡು ತಳ್ಳಿಕೊಳ್ಳುವಾಗ ಕೈ ಬೇನೆ ಬರುತ್ತಿದೆ, ಆದರೂ ಎಷ್ಟೇ ಕಷ್ಟ ಬಂದರೂ ಹೋಗಬೇಕೆಂಬ ಮನೋಇಚ್ಛೆ ಸದೃಢವಾಗಿದೆ, ಅಯ್ಯಪ್ಪ ಈ ಎಲ್ಲ ಸಮಸ್ಯೆಗಳಿಂದ ನನ್ನನ್ನು ಪಾರು ಮಾಡುತ್ತಾನೆ ಎನ್ನುತ್ತಾನೆ ನಾಗಪ್ಪ.

loading...

LEAVE A REPLY

Please enter your comment!
Please enter your name here