ಟಕ್ಕಳಕಿಗ್ರಾಮದಲ್ಲಿ ಏಡ್ಸ್ ಜಾಗೃತಿ, ರಕ್ತ ತಪಾಸಣಾ ಶಿಬಿರ

0
40

aids
ಬಸವನಬಾಗೇವಾಡಿ: ಏಡ್ಸ್ ರೋಗಿಗಳನ್ನು ಸಮಾಜದಲ್ಲಿ ನಿಕೃಷ್ಟ ಭಾವನೆಯಿಂದ ನೋಡದೇ ಸರ್ವರೊಂದಿಗೂ ಸಹಬಾಳ್ವೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ವಿವೇಕಾನಂದ ಯೂಥ್ ಮೂವ್‍ಮೆಂಟ್‍ನ ಮೇಲ್ವಿಚಾರಕ ಶರಣಬಸು ಹಾದಿಮನಿ ಹೇಳಿದರು.
ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್‍ಷನ್ ಸೊಸಾಯಿಟಿ (ಕೆಎಸ್‍ಎಪಿಎಸ್) ಹಾಗೂ ವಿಜಯಪುರದ ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್ ಏಡ್ಸ್ ಜಾಗೃತಿ ಮತ್ತು ಗರ್ಭಿಣಿಯರ ಹಾಗೂ ಜನಸಾಮಾನ್ಯರ ರಕ್ತ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಏಡ್ಸ್ ನಿರ್ಮೂಲನೆಗೆ ಜನಸಾಮಾನ್ಯರೆಲ್ಲರೂ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೈ ಜೋಡಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಹಾಯಕರಾದ ಎ.ಐ.ಬಿದ್ನಾಳ, ಎಂ.ಬಿ.ಹುಣಶ್ಯಾಳ, ಸಾವಿತ್ರಿ ಸಕ್ರಿ, ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ರಕ್ತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here