ಮಧ್ಯರಾತ್ರಿ ಜವರಾಯನ ಅಟ್ಟಹಾಸ: ಮೂವರು ಬಿಜೆಪಿ ಮುಖಂಡರ ಸಾವು

0
41

ಬೆಳಗಾವಿ:1 ಖಾನಾಪುರ ತಾಲೂಕಿನ ಬಿಡಿ ಗ್ರಾಮದ ಬುರಣಕಿ ಕ್ರಾಸ್ ಬಳಿ ಕಪ್ಪು ಬಣ್ಣದ ಪಾರ್ಚುನರ ವಾಹನ ಕೆಎ 22 ಎನ್ 9801 ಮರಕ್ಕೆ ಡಿಕ್ಕಿ ಹೊಡೆದ ಪರೀಣಾಮ ವಾಹನ ಚಲಾಯಿಸುತ್ತಿದ್ದ ಗೋಕಾಕ ತಾಲೂಕಿನ ಅರಬಾವಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಹೇಶ ಅಂಗಡಿ(42) ಬಸವರಾಜ ಮಗದುಮ್(62),ಸದಾನಂದ ಹಿರೇಮಠ(55) ಸ್ಥಳದಲ್ಲೆ ಸಾವಿಗೀಡಾದ ಘಟನೆ ಸೋಮವಾರ ತಡರಾತ್ರಿ 1 ಗಂಟೆ ನಂತರ ನಡೆದಿದೆ.

ವಾಹನದಲ್ಲಿದ್ದ ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದು ಅವರನ್ನು ತಡರಾತ್ರಿಯೇ ಅವರ ಸಂಬಂಧಿಕರು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಆನಂದ ಗೊಟಡಕಿ ಅವರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣ ಪುಟ್ಟ ಒಳಪೆಟ್ಟು ಗಾಯಗಳು ಮಾತ್ರ ಆಗಿವೆ. ವಾಹನ ವೇಗಕ್ಕೆ ಸಂಪೂರ್ಣ ಅಪ್ಪಚ್ಚಿಯಾಗಿದ್ದು ಸಾವಿಗಿಡಾದವರ ದೇಹಗಳು ವಾಹನದಲ್ಲಿ ಸಿಕ್ಕಿ ಕೊಂಡಿದ್ದವು. ವಾಹನ ಬಾಗಿಲು ತರೆಯಲಾಗದೆ ವಾಹನದಿಂದ ಶವಗಳನ್ನು ತಗೆಯಲು ಪೋಲಿಸರು ಹರಸಾಹಸ ಮಾಡ ಬೇಕಾಯಿತು.

ಪೋಲಿಸರು ಜೆಸಿಬಿ ವಾಹನ ತರೆಸಿ ಕಾರ ವಾಹನಗಳ ಬಾಗಿಲಗಳನ್ನು ಪ್ರತ್ಯೇಕಗೊಳಿಸಿದರು. ಈ ಸಂಧರ್ಬದಲ್ಲಿ ಬೀಡಿ ಭಾಗದ ನಂದಗಡ ಎಸ್‍ಐ ಸಿ.ಬಿ.ಬೆಟಗೇರಿ,ಜಿಪಂ ಸದಸ್ಯ ಅಶೋಕ ಚಲುವಾದಿ,ಮಾಹಾಬಳೇಶ್ವರ ಚವಲಗಿ,ಮಲ್ಲಿಕಾರ್ಜುನ ಮುತಗೇಕರ,ಮಹೇಶ ಗುರವ,ಭರತ್ ಪಾಟೀಲ,ವಿನೋದ ತಿಪ್ಪಣ್ಣವರ ಶವಗಳನ್ನು ಹೊರತಗೆಯಲು ಪೋಲಿಸರಿಗೆ ಸಹಾಯ ಮಾಡಿದರು. ಗೋಕಾಕ ಮೂಲದ ಇವರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ತೆರಳಿ ಬರುವಾಗ ಈ ಅವಘಡಕ್ಕೆ ಕಾರಣವಾಗಿದೆ. ವಾಹನ ಮಹೇಶ ಅಂಗಡಿ ಚಲಾಯಿಸುತ್ತಿದ್ದು ಅತಿ ವೇಗದಿಂದ ಚಲಾಯಿಸುತ್ತಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವಾಹನ ವೇಗಕ್ಕೆ ಸಂಪೂರ್ಣ ಹಿಡಿತ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹತ್ತಿರದ ಇನ್ನೊಂದು ಮರಕ್ಕೆ ಡಿಕ್ಕಿ ಹೊಡೆದು ವಾಹನ ತಿರುಗಿ ಅಳ್ನಾವರತ್ತ ಮುಖ ಮಾಡಿ ನಿಂತಿದೆ. ಅಪಘಾತ ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಗಿನ ಜಾವ ನಂದಗಡ ಪೋಲಿಸರು ಘಟನಾ ಸ್ಥಳಕ್ಕೆ ಬೇಟಿ ನೀಡಿದರು. ಬೈಲಹೊಂಗಲ ಡಿಎಸ್‍ಪಿ ಶೇಖರ ಅಗಡಿ,ನಂದಗಡ ಪಿಎಸ್‍ಐ ಆನಂದ ವಿಟಿ ಮತ್ತು ಖಾನಾಪುರ ಸಿಪಿಐ ಶೇಖರಪ್ಪ ಎಚ್ ಸ್ಥಳಕ್ಕೆ ಹಾಜರಾಗಿ 8 ಗಂಟೆ ಸುಮಾರಿಗೆ ಶವಗಳನ್ನು ಹೊರತಗೆಯುವಲ್ಲಿ ಯಶಸ್ವಿಯಾದರು. ಬೀಡಿ ಆರೋಗ್ಯ ಕೇಂದ್ರದಲ್ಲಿ 3 ಶವಗಳ ಮರಣೊತ್ತರ ಪರೀಕ್ಷೆ ನಡೆಸಿ ವಾರಸದಾರರಿಗೆ ನೀಡಲಾಯಿತು. ಮಹೇಶ ಅಂಗಡಿ ಬೆಳಗಾವಿಯಲ್ಲಿ ಸದಾಶಿವ ನಗರ ಬಳಿ ಲಕ್ಮೀ ಕಾಂಪ್ಲೆಕ್ಸ ಹತ್ತಿರ ಪೆಟ್ರೂಲ್ ಬಂಕ ಹೊಂದಿದ್ದಾರೆ. ಇವರು ಸಂಸದ ಸುರೇಶ ಅಂಗಡಿಯವರ ಹತ್ತಿರದ ಸಂಬಂಧಿಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here