ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರ ಉದ್ಘಾಟನೆ

0
62

30 srs 4ಶಿರಸಿ,1: ರಸ್ತೆ ಸುರಕ್ಷತೆ ಹಾಗೂ ವಾಹನ ಚಾಲನಾ ನಿಯಮಗಳ ಪಾಲನೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಿರಸಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರಾರಂಭಿಸಲಾದ ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರ ಸೋಮವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಉಮಾಶಂಕರ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ ರಸ್ತೆ ನಿಯಮ ಪಾಲನೆ ಕಾನೂನುಗಳಿದ್ದರೂ ಜಗತ್ತಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ದೇಶ ಭಾರತವಾಗಿದೆ. ಚಾಲಕರು ಹಾಗೂ ಜನಸಾಮಾನ್ಯರು ರಸ್ತೆ ನಿಯಮಗಳ ಪಾಲನೆ ಬಗ್ಗೆ ಗಮನ ನೀಡದಿದ್ದರೆ ಈ ಅಪಘಾತಗಳ ಸಂಖ್ಯೆ ಹೆಚ್ಚುತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ನಿಯಮ ಪಾಲನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಜಾಗೃತಿ ಕೇಂದ್ರ ಸಹಕಾರಿಯಾಗಲಿದೆ ಎಂದರು.
ಹಲವಾರು ಕಡೆಗಳಲ್ಲಿ ಆರ್.ಟಿ.ಓ. ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ಕೊರತೆ ಇದೆ. ಎಲ್ಲಾ ಕಡೆಗಳಲ್ಲೂ ಸಾಧ್ಯವಾದಷ್ಟು ಸ್ವಂತ ಕಚೇರಿ ಹೊಂದಲು ಪ್ರಯತ್ನ ನಡೆಸಲಾಗುತ್ತಿದೆ. ಸಿಬ್ಬಂದಿ ಕಒರತೆ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಿರಸಿಯಲ್ಲಿ ಕಚೇರಿ ನಿರ್ಮಾಣಕ್ಕೆಂದು ಕೆ.ಎಚ್.ಬಿ.ಕಾಲೋನಿಯಲ್ಲಿ ಜಾಗ ಮಂಜೂರಾತಿ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆವರೆಗೆ ತಾತ್ಕಾಲಿಕವಾಗಿ ಕಚೇರಿ ವ್ಯಾಪ್ತಿಯಲ್ಲಿ ಜಾಗೃತಿ ಕೇಂದ್ರ ಹಾಗೂ ಚಾಲನಾ ಪಥದಲ್ಲಿ ಕಾಯ ನಿರ್ವಹಿಸುತ್ತೇವೆ ಎಂದರು.

ಪ್ರಾದೇಶಿಕ ಸಾಗಿರಿ ಅಧಿಕಾರಿ ಡಾ.ಮುಗಳವಳ್ಳಿ ಕೇಶವ ಧರಣಿ ಮಾತನಾಡಿ, ಕಳೆದ ಸಾಲಿನಲ್ಲಿ ಭಾರತದಲ್ಲಿ 6 ಲಕ್ಷ ಅಪಘಾತ ಪ್ರಕರಣಗಳು ನಡೆದಿದೆ. 12 ಲಕ್ಷ ಜನರು ಗಾಯಾಳುಗಳಾಗಿದ್ದರೆ 1 ಲಕ್ಷ ಕ್ಕೂ ಅಧಿಕ ಮಂದಿ ಇಹಲೋಕ ತ್ಯಜಿಸಿದ್ದಾರೆ. 70 ಸಾವಿರ ಮಂದಿ ಮಕ್ಕಳನ್ನು, ಗಂಡನನ್ನು, ತಂದೆ-ತಾಯಿಯನ್ನು, ಪಾಲಕರನ್ನು ಕಳೆದುಕೊಂಡಿದ್ದಾರೆ. 40 ಸಾವಿರ ಮಂದಿ ಪಾದಚಾರಿಗಳು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. 25 ಸಾವಿರ ಮಂದಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ. ಹೆಲ್ಮೆಟ್ ಧರಸಿದಿರುವುದು, ಸೀಟ್ ಬೆಲ್ಟ್ ಹಾಕದಿರುವುದು, ಮೊಬೈಲ್ ಬಳಕೆಯಿಂದ, ರಸ್ತೆಯ ನಿಯಮಗಳನ್ನು ಪಾಲಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಕಾನೂನಿನ ಭಯ ಜನರಲ್ಲಿ ಇಲ್ಲದಿರುವುದು ಕೂಡ ಕಾರಣ. ಹಾಗಾಗಿ ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಅರಿವು ಬೆಳೆಸಿಕೊಳ್ಳಬೇಕು ಎಂದರು. ಹಿರಿಯ ವಾಹನ ನಿರೀಕ್ಷಕ ಸಿ.ಡಿ.ನಾಯ್ಕ ಈ ವೇಳೆ ಹಾಜರಿದ್ದರು.

[highlight]ಪ್ರಾದೇಶಿಕ ಸಾರಿಗೆ ಕಚೇರಿ ಇರುವುದು ಕೆರೆ ಅತಿಕ್ರಮಿತ ಕಟ್ಟಡದಲ್ಲಿ. ಆದರೂ ಜನಸೇವೆ ಮಾಡುವ ಹಿನ್ನೆಲೆಯಲ್ಲಿ ಇದೇ ಜಾಗದಲ್ಲಿ ಚಾಲನಾ ಪಥವನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಸಾರ್ವಜನಿಕ ಉಪಯೋಗಕ್ಕಾಗಿ ನಗರಸಭೆ ಜಾಗ ಬಳಸಲಾಗುತ್ತಿದೆಯೇ ವಿನಃ ಬೇರಾವ ಉದ್ದೇಶವಿಲ್ಲ. ಸರ್ಕಾರದಿಂದ ಇಲಾಖೆ ಕಟ್ಟಡ ನಿರ್ಮಿಸಲು ಜಾಗ ಮಂಜೂರಾತಿ ನೀಡಿದರೆ ತಕ್ಷಣ ಈ ಜಾಗದಿಂದ ವರ್ಗಾವಣೆಯಾಗುತ್ತೇವೆ. ಆವರೆಗೆ ಊರಿನ ನಾಗರಿಕರ, ಅಧಿಕರಿಗಳ ಸಹಕಾರ ಬೇಕು.
ಡಾ.ಮುಗಳವಳ್ಳಿ ಕೇಶವ ಧರಣಿ- ಪ್ರಾದೇಶಿಕ ಸಾರಿಗೆ ಅಧಿಕಾರಿ

loading...

LEAVE A REPLY

Please enter your comment!
Please enter your name here