ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ: ಸಜ್ಜನರ್

0
55

30kwr2ಕಾರವಾರ,1: ಮಾಹಿತಿ ಹಕ್ಕು ಅದಿ ನಿಯಮದಡಿ(ಆರ್‍ಟಿಐ) ಮಾಹಿತಿ ನೀಡದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗವು 1.69 ಕೋಟಿ ರೂ. ದಂಡ ವಿಧಿಸಿದೆ ಎಂದು ಮಾಹಿತಿ ಆಯೋಗದ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಯಲ್ಲಿ ಅರ್ಜಿದಾರರಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಮಾಹಿತಿ ನೀಡದ ಕಾರಣ ಸುಮಾರು 14.35 ಲಕ್ಷ ರೂ. ಪರಿಹಾರ ಸಹ ನೀಡಲಾಗಿದೆ. ಕಳೆದ ಹತ್ತು ವರ್ಷಗಳಿಗೆ ಹೊಲಿಸಿದರೆ ವರ್ಷದಿಂದ ವರ್ಷಕ್ಕೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 2013 -14ರಲ್ಲಿ ಆಟಿಐ ಮಾಹಿತಿ ಕೋರಿ ಒಟ್ಟೂ 4,94,491 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ 4,59421 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಅದರೆ 2014-15 ರಲ್ಲಿ ಒಟ್ಟೂ 6,18,429 ಅರ್ಜಿಗಳು ಬಂದಿವೆ. ಅವುಗಳಲ್ಲಿ 5,89,576 ಅರ್ಜಿಗಳಿಗೆ ಮಾಹಿತಿ ನೀಡುವ ಮೂಲಕ ವಿಲೇವಾರಿ ಮಾಡಲಾಗಿದೆ. ಅಲ್ಲದೆ 28,853 ಅರ್ಜಿಗಳು ಬಾಕಿ ಇದೆ ಎಂದರು.
ಈಗಾಗಲೇ ಕಂದಾಯ ಇಲಾಖೆಗೆ ಸುಮಾರು 2,00,703, ಗಾಮೀಣಾಭಿವೃದ್ಧಿ 1,00,772, ನಗರಾಭಿವೃದ್ಧಿ ಇಲಾಖೆಗೆ 84,384 ಸಾವಿರ, ಗೃಹ ಇಲಾಖೆಗೆ 30,155, ಸಾರಿಗೆ ಇಲಾಖೆಗೆ 24,569 ಹಾಗೂ ಶಿಕ್ಷಣ ಇಲಾಖೆಗೆ 23,527 ಸಾವಿರ ಅರ್ಜಿಗಳು ಬಂದಿವೆ. ಸೂಕ್ತ ಮಾಹಿತಿ ನೀಡದ ನಗರಾಭಿವೃದ್ಧಿ ಇಲಾಖೆ ವಿವಿಧ ಅಧಿಕಾರಿಗಳಿಗೆ ಸುಮಾರು 48 ಲಕ್ಷ, ಕಂದಾಯ ಇಲಾಖೆಗೆ ಸುಮಾರು 47 ಲಕ್ಷ ರೂ., ಹಾಗೂ ಗಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸುಮಾರು 39 ದಂಡ ವಿಧಿಸಲಾಗಿದೆ ಎನ್ನುವ ಮಾಹಿತಿಗಳನ್ನು ನೀಡಿದರು.
ವಿವಿಧ ಇಲಾಖೆಗೆ ಬರುವ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾಹಿತಿಗಳನ್ನು ಆಯಾ ಇಲಾಖೆಯ ವೆಬ್‍ಸೈಟ್‍ನಲ್ಲಿ ಹಾಕುವ ಕ್ರಮಕೈಗೊಳ್ಳಲಾಗುತ್ತಿದೆ. ಇದರಿಂದ ಆಯೋಗಕ್ಕೆ ಬರುವ ಮೇಲ್ಮನವಿ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು. ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಆಯುಕ್ತರು ಮಾಹಿತಿ ಹಕ್ಕು ಕಾರ್ಯಾಗಾರ ನಡೆಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಐಓ ರಾಮಪ್ರಸಾದ್ ಮನೋಹರ್, ಎಸ್‍ಪಿ ಆರ್. ದಿಲೀಪ್ ವೇದಿಕೆಯಲ್ಲಿ ಇದ್ದರು.

loading...

LEAVE A REPLY

Please enter your comment!
Please enter your name here