ಜಾತ್ಯಾತೀತ ಜನತಾ ದಳ ಸಭೆ

0
97

30kdl-04ಕುಂದಗೋಳ,1: ರಾಜ್ಯದಲ್ಲಿರುವ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ 35 ಮಂತ್ರಿಗಳನ್ನಾಗಿಸಿ ಅವರುಗಳಿಗೆ 10 ಸಂಸದಿಯಕಾರ್ಯದರ್ಶಿಗಳನ್ನಾಗಿಸಿ ಜನತೆಗೆ ಮಂಕು ಬೂದಿ ಎರಚಿ ಹಗಲು ದರೋಡೆಗೆ ನಿಂತಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಆರೋಪಿಸಿದರು.

ಪಟ್ಟಣದ ಶಿವಾನಂದಮಠದ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕ ಜಾತ್ಯಾತೀತ ಜನತಾ ದಳ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಜ್ವಲಂತ ಸಮಸ್ಯೆಯಾಗಿರುವ ಕಳಸಾ ಬಂಡೂರಿ, ಮಹದಾಯಿ ನದಿ ನೀರು ಜೋಡನೆ ಸಂಭಂದಿಸಿದ ಹೋರಾಟವನ್ನು ಕೇಂಧ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷಸಿವೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ವಿಪಕ್ಷವಾಗಿದ್ದ ಜೆಡಿಎಸ್ ಪರಿಣಾಮಕಾರಿಯಾಗಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿತು. ಅದರ ಫಲವಾಗಿಯೇ ಇಂದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಜನರಿಂದಾದ ಜನಾದೇಶವಲ್ಲ. ಬದಲಿಗೆ ಬಿಜೆಪಿಗಿ ಮೇಲಿದ್ದ ಬೃಷ್ಟಾಚಾರದ ಹೊರೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಸಿದ್ರಾಮಯ್ಯ ಆಡಳಿತ ನಡೆಸತೊಡಗಿದ್ದಾರೆ. ನ್ನ ಜೀವಮಾನದ ರಾಜಕೀಯದಲ್ಲಿಯೇ ಎಂದೂ 10 ಜನ ಶಾಶಕರು ಸಂಸದಿಯ ಕಾರ್ಯದರ್ಶಿಗಳಾಗಿರಲಿಲ್ಲ ಎಂದರು.

ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಬರಗಾಲದಿಂದ ಕಂಗೆಟ್ಟು ತಮ್ಮ ಆತ್ಮ ಗೌರವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅನ್ನದಾತನ ಬೆಳೆ ಸಾಲ ಮನ್ನಾ ಬೆಳೆ ಪರಿಹಾರದ ಬಗ್ಗೆ ಗಮನ ಹರಿಸಿಲ್ಲ. ಜನರ ಸಮಸ್ಯೆಗಳಿಗೆ ಸ್ಫಂದಿಸದ ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಛಾಟಿ ಬೀಸಲು ಅಣಿಯಾಗದ ವಿರೋಧ ಪಕ್ಷವಾಗಿರುವ ಬಿಜೆಪಿ ಸದ್ಯ ಮೌನವೃತ ಹಿಡಿದಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲವನ್ನು ಕುಮಾರಸ್ವಾಮಿ ನೇತೃತ್ವದ ಜಾ.ದಳ ಸಂಪೂರ್ಣವಾಗಿ ಮನ್ನಾ ಮಾಡಿಯೇ ತೀರುತ್ತದೆ ಈ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದರು.ಮುಂಬರುವ ಜಿಲ್ಲಾ ಹಾಗೂ ತಾಲೂಕ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಇಗಲೇ ಮತದಾರರಿಗೆ ರಾಜ್ಯದಲ್ಲಿನ ಆಡಳಿತ ಕಾಂಗ್ರೆಸ್ ಹಾಗೂ ಸದನಗಳಲ್ಲಿ ವಿಪಕ್ಷವಾಗಿರುವ ಬಿಜೆಪಿ ಪಕ್ಷಗಳು ಜನವಿರೋಧಿಯಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜನತೆಯ ಅಶೋತ್ತರಗಳನ್ನು ಇಡೇರಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಬರಗಾಲ ಪೀಡಿತ ಪ್ರದೇಶವೆಂದು ತಾಲೂಕನ್ನು ಘೋಷಿಸಿದರೂ ಒಂದೇ ಒಂದು ಕೆಲಸವೂ ನಡೆದಿಲ್ಲ. ಇದರಿಂಧ ಕೃಷಿ ಕೂಲಿ ಕಾರ್ಮಿಕರು ಗುಳೆ ಹೊರಟಿದ್ದಾರೆ. ಬಡವರ ಬಿಪಿಎಲ್ ಕಾರ್ಡ್‍ಗಳನ್ನು ಸಕಾರಣವಿಲ್ಲದೇ ರದ್ದು ಪಡಿಸಲಾಗುತ್ತಿದೆ. ಹೀಗಾಗಿ ಮುಂಬರುವ ಜಿಲ್ಲಾ ಹಾಗೂ ತಾಲೂಕ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷ ಅಭೂತಪೂರ್ವ ಗೆಲವು ಸಾಧಿಸಲಿದೆ ಎಂಬುದಕ್ಕೆ ಸಭೆಯಲ್ಲಿ ಉಪಸ್ಥಿತರಿರುವ ಸಾವೀರಾರು ಕಾರ್ಯಕರ್ತರೇ ಉದಾಹರಣೆಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ತಾಲೂಕಿನಲ್ಲಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಜನತೆಯ ಬೇಡಿಕೆಗಳನ್ನು ಇಡೇರಿಸಲು 2016 ಜನೇವರಿ 10 ರಂದು ತಹಶೀಲ್ದಾರ ಕಚೇರಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದಾಗಿ ತಿಳಿಸಿದರು.

ಅದ್ಯಕ್ಷತೆಯನ್ನು ತಾಲೂಕಾದ್ಯಕ್ಷ ರುದ್ರಣ್ಣ ಗಾಣಿಗೇರ ವಹಿಸಿದ್ದರು. ಮಾಜಿ ಸಚಿವ ಅಲ್ಕೋಡ್ ಹನಮಂತಪ್ಪ, ಜಿಲ್ಲಾದ್ಯಕ್ಷ ಮುಜಾಹಿದ್ ಕಾಂಟ್ರಾಕ್ಟರ್, ಹುದಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮುಖಂಡರಾದ ಬಿ.ಬಿ.ಗಂಗಾಧರಮಠ, ಎಚ್.ಎಲ್.ನಧಾಪ್, ಮಹಾಬಳೇಶ್ವರ ಮಾದನೂರ,ಮಲ್ಲಿಕಾರ್ಜುನ ಕಿರೇಸೂರ. ಎಸ್.ಟಿ.ಹಿರೇಗೌಡ್ರ, ಶೇಖಪ್ಪ ಹರಕುಣಿ, ಶಂಕರಗೌಡ ದೊಡಮನಿ, ಎಸ್.ಎಪ್.ನಿರಂಜನಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ಕೆ.ಆರ್.ಡಗಲಿ,ರಜಿಯಾಬೇಗಂ ಹಸೂಬಾಯಿ, ಸಾವಕ್ಕ ಬಡಿಗೇರ, ಮಹೀಳಾ ಘಟಕದ ಅದ್ಯಕ್ಷೆ ಪಾಟೀಲ, ಖಲಂದರ ಖಾಳಾ, ರಹಿಮನಸಾಬ ಕಿಲ್ಲೇದಾರ, ಯರಗುಪ್ಪಿ ಗ್ರಾ.ಪಂ.ಸದಸ್ಯರಾದ ಪಕ್ಕೀರೇಶ ದುಂಡಿ, ಅಣ್ಣಪ್ಪ ಬಳಗಲಿ, ಮಾಬುಸಾಬ ಟಪಾಲ, ಸಿದ್ದಣ್ಣ ಉಳ್ಳಾಗಡ್ಡಿ ಶಿವಣ್ಣ ಹುಬ್ಬಳ್ಳಿ ಸಹಿತ ಹಲವಾರು ಗ್ರಾಮಗಳಿಂದ ಆಗನಿಸಿದ್ದ ನೂರಾರು ಪಕ್ಷ ದ ಕಾರ್ಯಕರ್ತರು ಸಭೆಯಲ್ಲಿದ್ದರು. ಶೇಖಣ್ಣ ಹರಕುಣಿ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here