ಡಿ.3 ರಂದು ವಾರ್ತಾ ಇಲಾಖೆಯಿಂದ ವಿಜಯಪುರ-ಇಂಡಿ-ಸಿಂದಗಿ ಬಸವನಬಾಗೇವಾಡಿಯಲ್ಲಿ ಲೇಸರ್ ಶೋ

0
62

lesar shoa

ವಿಜಯಪುರ, : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಯಾ ತಾಲೂಕಾ ಆಡಳಿತದ ಸಹಯೋಗದಲ್ಲಿ ಡಿ.3ರಂದು ಸಂಜೆ 6 ಗಂಟೆಗೆ ವಿಜಯಪುರ, ಬಸವನಬಾಗೇವಾಡಿ, ಇಂಡಿ ಹಾಗೂ ಸಿಂದಗಿ ತಾಲೂಕಾ ಕೇಂದ್ರಗಳಲ್ಲಿ ನಾಡು-ನುಡಿ ಸಂದೇಶ ಸಾರುವ ಅಪರೂಪದ ಲೇಸರ್ ಶೋ ಹಾಗೂ ಬೀಮ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಲೇಸರ್ ಶೋ ಹಾಗೂ ಬೀಮ್ ಪ್ರದರ್ಶನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಬಾರಿಸುವ ಕನ್ನಡ ಡಿಂಡಿಮವ ಹಾಡು ಹಾಗೂ ಪುಣ್ಯಕೋಟಿ ಕಥೆಯ ಹಾಡು ಹಾಗೂ ಕನ್ನಡ ನಾಡು-ನುಡಿ ಸಂಸ್ಕøತಿಯ ಸಂದೇಶವನ್ನು ಸಾರುವ ಅತ್ಯಂತ ವಿನೂತನ ಸಂಯೋಜನೆಯ ಬೆಳಕಿನ ಕಿರಣದ ಅಪರೂಪದ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.

 

lasar
ಡಿ.3ರಂದು ಗುರುವಾರ ಸಂಜೆ 6 ಗಂಟೆಗೆ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ, ಸಿಂದಗಿಯ ಬಸ್ ನಿಲ್ದಾಣದ ಎದುರಿಗಿನ ಪ್ರಾಥಮಿಕ ಶಾಲಾ ಆವರಣ, ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನ ಆವರಣ,,ಹಾಗೂ ಇಂಡಿಯ ತಹಶೀಲ್ದಾರ ಕಚೇರಿ ಆವರಣದಲ್ಲಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here