ವೈದಿಕ ವಿದ್ವಾಂಸ ಶಂಕರ ಸುಬ್ರಾಯ ಭಟ್ಟ ಸನ್ಮಾನ

0
53

1 sdp  1ಸಿದ್ದಾಪುರ,2: ಧರ್ಮ, ಸಂಸ್ಕøತಿ, ಸಂಸ್ಕಾರದ ಮೇಲೆ ನಂಬಿಕೆ ಇದ್ದರೆ ಏನನ್ನೂ ಸಾಧಿಸಬಹುದು. ಒಳ್ಳೆಯ ಮಾತನ್ನು ಆಡುವುದರೊಂದಿಗೆ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವವರು ಕಡಿಮೆ. ಆದರೆ ಶಂಕರ ಭಟ್ಟ ಅವರು ನುಡಿದಂತೆ ನಡೆದ ಒಬ್ಬ ಆದರ್ಶ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡವರು.
ಸಮಾಜದ ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಹಾಗೂ ಎಲ್ಲರಿಗೂ ಆದರ್ಶರಾಗಿರುವ ಅವರ ಮಾದರಿಯ ಜೀವನ ಎಲ್ಲರೂ ಪಾಲಿಸುವಂತಹುದಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ತಾಲೂಕಿನ ಮಸ್ಗುತ್ತಿಯಲ್ಲಿ ಸೋಮವಾರ ಹಿರಿಯ ವೈದಿಕ ವಿದ್ವಾಂಸರಿಗೆ ಸನ್ಮಾನ ಹಾಗೂ ಶಂಕರ ಸುಬ್ರಾಯ ಭಟ್ಟ ಮಸ್ಗುತ್ತಿ ಅವರ ಜೀವನದ ಕಿರುಪರಿಚಯವಾದ ಸೇವಾ ಭಗೀರಥ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ವಾಂಸರಿಗೆ ಸನ್ಮಾನ ಮಾಡಿದರೆ ನಮ್ಮ ಧರ್ಮಕ್ಕೆ ಹಾಗೂ ಸಂಸ್ಕøತಿಗೆ ಸನ್ಮಾನ ಮಾಡಿದಂತೆ ಎಂದು ಹೇಳಿದರು.
ಶಂಕರ ಸುಬ್ರಾಯ ಭಟ್ಟ ಮಸ್ಗುತ್ತಿ ಅವರ ಜೀವನದ ಕಿರುಪರಿಚಯ ಸೇವಾ ಭಗೀರತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಿರಸಿಯ ನ್ಯಾಯವಾದಿ ಜಿ.ಟಿ.ಹೆಗಡೆ ತಟ್ಟಿಸರ ಶಿಸ್ತು ಬದ್ಧವಾದ ಜೀವನ ನಡೆಸಿದಂತಹ ಹಾಗೂ ಸಮಾದ ಒಳ್ಳೆಯ ವ್ಯಕ್ತಿಗಳ ಕುರಿತು ಮುಂದಿನವರಿಗೆ ಅಧ್ಯಯನಕ್ಕೆ ಅನುಕೂಲವಾಗುವಂತಹ ಸಾಧಕರ ಕುರಿತು ಪುಸ್ತಕಗಳು ರಚನೆಯಾಗಬೇಕು. ಅಧ್ಯಯನ ಮಾಡಿದ್ದನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಮಾಜ ಮುಂದೆ ಬರಬೇಕೆಂದರು. ನ್ಯಾಯವಾದಿ ಎ.ಪಿ.ಭಟ್ಟ ಮುತ್ತಿಗೆ ಅಧ್ಯಕ್ಷತೆವಹಿಸಿದ್ದರು.

ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಶಂಕರ ಭಟ್ಟ ಹಾಗೂ ಕಮಲಾಕ್ಷಿ ಭಟ್ಟ, ಕೃತಿಕಾರ ಸತ್ಯನಾರಾಯಣ ಹೆಗಡೆ ಶಿರಗೋಡ ಬೈಲ್ ಉಪಸ್ಥಿತರಿದ್ದರು.
ವೇ.ಮೂ.ಸುಬ್ರಾಯ ಶಾಸ್ತ್ರೀಗಳು ಹೆಗ್ಗಾರಬೈಲ್, ವೇ.ಮೂ.ಚಂದ್ರಶೇಖರ ಭಟ್ಟ ಗಾಳೀಮನೆ, ವೇ.ಮೂ. ಮಂಜುನಾಥ ಜೋಶಿ ಶಿರಸಿ, ವೇ.ಮೂ. ಗಣಪತಿ ಗ.ಭಟ್ಟ ನೆಲೆಮಾಂವ, ವೇ.ಮೂ.ಸುಬ್ರಾಯ ಭಟ್ಟ ಬಾಳೂರು, ವೇ.ಮೂ.ವೆಂಕಟ್ರಮಣ ಕೃ.ಜೋಶಿ ಶಿವಳಮನೆ, ವೇ.ಮೂ. ಗಂಗಾಧರ ಭಟ್ಟ ಕಿಚ್ಚಿಕೇರಿ ಇವರುಗಳನ್ನು ಮಸ್ಗುತ್ತಿ ಶಂಕರ ಭಟ್ಟ ಮನೆಯವರು ಸನ್ಮಾನಿಸಿ ಗೌರವಿಸಿದರು.

ಎಸ್.ಎಸ್.ಭಟ್ಟ ಮಸ್ಗುತ್ತಿ sಸ್ವಾಗತಿಸಿದರು.ನಾಗಪತಿ ಭಟ್ಟ ಮಿಳಗಾರ ಪ್ರಾಸ್ತಾವಿಕ ಮಾತನಾಡಿದರು. ಅರ್ಪಿತಾ ಭಟ್ಟ ಪ್ರಾರ್ಥನೆ ಹಾಡಿದರು. ಉಮೇಶ ಭಟ್ಟ ಮಿಳಗಾರ ಕಾರ್ಯಕ್ರಮ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here