ಕಳಸ ಗ್ರಾಮದಲ್ಲಿ ಕಾಂಗ್ರೆಸ ಪಕ್ಷ ತೊರೆದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಜೆಪಿಗೆ ಸೇರ್ಪಡೆ

0
92

2kdl-01ಕುಂದಗೋಳ ,2: ತಾಲೂಕಿನ ಕಳಸ ಗ್ರಾಮದ ನೂರಾರು ಮುಸ್ಲಿಂ ಸಮಾಜದ ಮುಖಂಡರು ಕಾಂಗ್ರೆಸ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ದುರಾಡಳಿತಕ್ಕೆ ಹಾಗೂ ಅಲ್ಪ ಸಂಖ್ಯಾತರ ಬಗ್ಗೆ ನಿಷ್ಕಾಳಜಿವಹಿಸುತ್ತಿರುವದಕ್ಕೆ ಬೇಸತ್ತು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿ ಜಿಲ್ಲಾದ್ಯಕ್ಷ ಎಂ.ಆರ್.ಪಾಟೀಲ್ ನೇತೃತ್ವದಲ್ಲಿ ಬಿಜೆಪಿಗೆ ಅಧಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾದ್ಯಕ್ಷ ಪಾಟೀಲ್ ರಾಜ್ಯದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಆಡಳಿತ ನೆಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ ಸರ್ಕಾರ ಅಭಿವೃದ್ದಿಗೊಳಿಸುವಲ್ಲಿ ಸಂಪೂರ್ಣ ವಿಫಲತೆಗೊಂಡಿದೆ.ಕೇವಲ ಅಧಿಕಾರಿ ಹಂಚಿಕೆಯಲ್ಲಿಯೇ ಕಾಲಹರಣ ಮಾಡುತ್ತಿರುವ ಈ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುತ್ತಿಲ್ಲಾ, ರೈತರ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲಾ ಇದರಿಂದ ರಾಜ್ಯದಲ್ಲಿ 700 ಕ್ಕೂ ಹೆಚ್ಚು ರೈತರು ಆತ್ಮಹತ್ಯ ಮಾಡಿಕೊಂಡರೂ ಅವರಿಗೆ ಪರಿಹಾರ ನೀಡುತ್ತಿಲ್ಲಾ ಇದರಿಂದ ರಾಜ್ಯದ ಜನತೆ ರೋಸಿ ಹೋಗಿದ್ದು ಮುಂದೆ ಜರುಗಲಿರುವ ಚುನಾವಣೆಯಲ್ಲಿ ಮತದಾರರು ಈ ಕಾಂಗ್ರೆಸ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆಂದು ಹೇಳಿದರು.
ಜಿ.ಪಂ.ಅದ್ಯಕ್ಷ ಟಿ.ಜೆ.ಬಾಲಣ್ಣವರ ಮಾತನಾಡಿ ರಾಜ್ಯದಲ್ಲಿರುವ ಎಲ್ಲ ಅಲ್ಪ ಸಂಖ್ಯಾತರ ಹಿತವನ್ನು ಕಾಪಾಡುತ್ತೇವೆ ಅಂತಾ ಹೇಳಿ ಅಲ್ಪಸಂಖ್ಯಾತರನ್ನು ಚುನಾವಣೆಗಾಗಿ ಮಾತ್ರ ಉಪಯೋಗಿಸುತ್ತಿರುವ ರೈತ ವಿರೋದಿ ಕಾಂಗ್ರೆಸ ಸರ್ಕಾರ ದುರಾಡಳಿತಕ್ಕೆ ಬೇಸತ್ತು ಅಲ್ಪಸಂಖ್ಯಾತರು ನಮ್ಮ ಪಕ್ಷಕ್ಕೆ ಹೆಚ್ಚಿನ ಸಂಖ್ಯಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಪ್ರಮುಖರಾದ ಹಜರೇಸಾಬ ಗುಡಾರದ, ಹುಸೆನಸಾಬ ಕಾರಡಗಿ, ಹುಸೆನಸಾಬ ತೋಟದ, ರಫಿಕಸಾಬ ಬಾಲೆಬಾಯಿ, ಹಜರೇಸಾಬ ಗುಡಾರದ, ಮಲ್ಲಿಕರೇಹಾನ ಮೀರಾನವರ, ದಾದಾಫೀರ ಬಾಲೆಬಾಯಿ, ಇಮಾಮಹುಸೆನ ಗುಡಾರದ, ಮುಸ್ತಾಕ ಸುರಣಗಿ ಹಾಗು ಅನೇಕ ಕಾರ್ಯಕರ್ತರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಗೆ ಸೆರ್ಪಡೆಗೊಂಡರು.
ಈ ಸಂದರ್ಭದಲ್ಲಿ ತಾಲೂಕ ಅದ್ಯಕ್ಷ ಎನ್.ಎನ್.ಪಾಟೀಲ, ಈರಣ್ಣ ಜಡಿ, ಮಾಲತೇಶ ಶ್ಯಾಗೋಟಿ, ಮಂಜುನಾಥ ಅಣ್ಣಿಗೇರಿ, ನಿಂಗಪ್ಪ ಬಡಿಗೇರ, ಅಖಂಡಪ್ಪ ಕಳಸೂರ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here