ಶ್ರಮದಾನ ಸಮಾರಂಭ

0
56

2kdl-02ಕುಂದಗೋಳ,2: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ನಿಸ್ವಾರ್ಥ ಸೇವೆಯಿಂದ ಸಮಾಜ ಸೇವೆ ಮಾಡಲು ಮುಂದಾಗಿರುವದು ಶಾಘ್ಲನೀಯವಾಗಿದೆ ಎಂದು ಮಾಜಿ ಸಚಿವ ವಿದಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶಿರೂರ ಗ್ರಾಮದ ಬಸವೇಶ್ವವರ ದೇವಸ್ಥಾನದಲ್ಲಿ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದ ವಿದ್ಯಾಸಂಸ್ಥೆಯವರು ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಗ್ರಾಮೀಣ ಜಾಗೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಥಿತಿಸ್ಥಾನವನ್ನು ವಹಿಸಿ ಮಾತನಾಡಿದ ಅವರು ಕಳೆದ 8 ದಿನಗಳಿಂದ ಪಟ್ಟಣದ ವಿದ್ಯಾರ್ಥಿಗಳು ಈ ಗ್ರಾಮಕ್ಕೆ ಬಂದು ರಸ್ತೆಗಳನ್ನು ಶುಚಿಗೊಳಿಸುವದು ದೇವಸ್ಥಾನಗಳ ಸ್ವಚ್ಛತೆ, ಗಟಾರುಗಳ ಸ್ವಚ್ಛತೆ ಮಾಡುವ ಮೂಲಕ ಇಲ್ಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಈ ಸಮಾಜ ಸೇವೆ ತಮ್ಮ ಜೀವನದಲ್ಲಿ ನಿರಂತರವಾಗಿ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಹಿಳಾ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಹಮ್ಮಿಕೊಂಡಿರುವದು ಸಂತಸದ ವಿಷಯವಾಗಿದೆ ಪ್ರತಿಯೊಬ್ಬರು ತಾವು ವಾಸಿಸುವಂತಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಂದಾಗ ಮಾತ್ರ ಆ ಭಾಗದ ಜನತೆ ಆರೋಗ್ಯವಂತಾ ಜೀವನಸಾಗಿಸಲು ಸಾದ್ಯವಾಗುತ್ತದೆ ಎಂದರು ಅದ್ಯಕ್ಷತೆಯನ್ನು ಗ್ರಾ.ಪಂ.ಉಪಾದ್ಯಕ್ಷ ಬಾಬುಗೌಡ ಪಾಟೀಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅದ್ಯಕ್ಷ ಯಲ್ಲವ್ವ ನೆರ್ತಿ, ಜೆಡಿಎಸ್ ಜಿಲ್ಲಾದ್ಯಕ್ಷ ಮುಜಾಹಿದ ಕಂಟ್ರಾಕ್ಟರ್, ರಾಜಣ್ಣ ಕೊರವಿ, ಬಿ.ಬಿ.ಗಂಗಾಧರಮಠ, ತಾಲುಕಾ ಅದ್ಯಕ್ಷ ರುದ್ರಪ್ಪ ಗಾಣಿಗೇರ, ಮಹಿಳಾ ವಿದ್ಯಾಪೀಠದ ಉಪನ್ಯಾಸಕರಾದ ಡಾ: ಡಿ.ಪಿ.ಮನಕಟ್ಟಿ, ಸುನೀಲ್ ಮಣಕವಾಡ, ಮಹೇಶ ಅಣ್ಣಿಗೇರಿ, ಶ್ರೀಮತಿಯರಾದ ಎಸ್.ಟಿ.ಮುದರಡ್ಡಿ, ಸರಿತಾ ಚಕ್ರಸಾಲಿ, ವಿದ್ಯಾರ್ಥಿ ಸಹನಾ ಆಲೂರ, ಕುಮಾರಿ ಫಕ್ಕೀರಗೌಡ್ರ, ಗ್ರಾಮದ ಹಿರಿಯರಾದ ಶೇಖರಗೌಡ ಪಾಟೀಲ್, ಶಂಕರಗೌಡ ದೊಡಮನಿ, ಸುರೇಶ ಕೋಳೂರ, ಆರ್,ಎಚ್.ಹಿರೇಮಠ, ಮುಂತಾದವರು ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here