ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದಾಗಲೇ ಈ ಭಾಗದ ಅಭಿವೃದ್ದಿ ಸಾಧ್ಯ: ಮೆಹಬೂಬ.ಯರಗುಪ್ಪಿ

0
85

01-nvl-01ನವಲಗುಂದ,2: ಕರ್ನಾಟಕ ಏಕೀಕರಣವಾದಾಗಿನಿಂದ ಇಲ್ಲಿಯವರೆಗೆ ಉತ್ತರ ಕರ್ನಾಟಕ ಮಲತಾಯಿ ಧೋರಣೆಯನ್ನು ಅನುಭವಿಸುತ್ತಾ ಬಂದಿದೆ, ಈ ಮಲತಾಯಿ ಧೋರಣೆಯನ್ನು ಖಂಡಿಸಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲೇಬೇಕೆಂದು ರೈತಪರ ಹೋರಾಟಗಾರ ಬಸನಗೌಡ ಪಾಟೀಲ್ ಪತ್ರಿಕಾಗೂಷ್ಠಿಯ ಮುಖಾಂತರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಈ ಕುರಿತು ಪತ್ರಿಕಾಗೂಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣವಾದಾಗಿನಿಂದ ಇಲ್ಲಿಯವರಗೂ ಈ ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಪಟ್ಟಿದೆ. ಸಾಮಾನ್ಯವಾಗಿ ಯುವಕರು ಉದ್ಯೋಗ ಅವಕಾಶವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಂತೆ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿಯು ಬಂದು ಒದಗಿದೆ, ಯಾವುದೆ ಪಕ್ಷಗಳಾಗಲಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಭಾಗದ ಹದಿಮೂರು ಜಿಲ್ಲೆಗಳ ಬಗ್ಗೆ ಸದಾ ಮಲತಾಯಿ ಧೋರಣೆಯನ್ನು ತೂರುತ್ತಾ ಬಂದಿರುವ ಕಾರಣದಿಂದ ಹಾಗೂ ನಮ್ಮ ಮುಂಬರುವ ಯುವ ಪೀಳಿಗೆಗೆ ಯಾವುದೇ ತರಹದ ಅನ್ಯಾಯವಾಗಬಾರದೆಂಬ ಕಾರಣದಿಂದ ಪ್ರತ್ಯೇಕ ರಾಜ್ಯ ಅನಿವಾರ್ಯವಾಗಿದೆ. ಅದರಂತೆ ನಮ್ಮ ರಾಜ್ಯದ ರಾಜ್ಯದ ರಾಜಧಾನಿ ಬೆಂಗಳೂರು ನಗರವು ಈ ಭಾಗದಿಂದ ಬಹು-ದೂರವಿರುವುದರಿಂದ ಇಲ್ಲಿಯ ಬಡ ಕಾರ್ಮಿಕರು, ವಿಧ್ಯಾರ್ಥಿಗಳು ಹಾಗೂ ಅಂಗವಿಕಲರು, ವಯೋವೃದ್ದರು ರಾಜ್ಯ ಸರಕಾರದಿಂದ ಕೆಲಸ ಕಾರ್ಯಗಳನ್ನು ಪೂರೈಸಲಾಗುತ್ತಿಲ್ಲಾ. ನಮ್ಮ ಈ ಭಾಗದಲ್ಲಿರುವ ಅನೇಕ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅದಿರು, ಮರಳು ಮತ್ತು ಖನಿಜ ಸಂಪತ್ತುಗಳು ದೂರೆಯುತ್ತವೆ.

ಅದರಿಂದ ನಮಗೆ ಸಾಕಷ್ಟು ಆದಾಯವು ದೂರೆಯುತ್ತದೆ. ಮೇಲಾಗಿ ನಮ್ಮಲ್ಲಿರುವಂತಹ ಮಹಾನದಿಗಳಿಂದ , ಫಲವತ್ತಾದ ಸಾವಿರಾರು ಎಕರೆ ಕೃಷಿ ಭೂಮಿಯಿಂದ ಸಾಕಷ್ಟು ಪ್ರಮಾಣದ ಸಂಪನ್ಮೂಲ ದೂರೆಯುತ್ತದೆ. ಹಾಗೂ ಉದ್ದಿಮೆಗಳ ಒಂದು ಲೆಕ್ಕಾಚಾರದಲ್ಲಿ ನೋಡಿದಾಗ ಸಕ್ಕರೆ ಕಾರ್ಖಾನೆ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಉತ್ಪಾದಿಸುವಂತಹ ಸಾಮಥ್ರ್ಯತೆಯನ್ನು ಈ ಭಾಗದ ಭೂಮಿಯು ಹೊಂದಿದ್ದು ಇದು ಪ್ರತ್ಯೇಕ ರಾಜ್ಯವಾದರೆ ಇಷ್ಟೇಲ್ಲಾ ಆದಾಯ ಸಾಕಾಗುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜಗತ್ತಪ್ರಸಿದ್ದ ಪ್ರೇಕ್ಷಣಿಯ ಸ್ಥಳಗಳಿವೆ ಇವುಗಳನ್ನು ನೋಡಲು ಬರುವಂತಹ ಪ್ರವಾಸಿಗರಿಂದಲು ನಮಗೆ ಆದಾಯವು ದೂರೆಯುತ್ತದೆ.
ಇಲ್ಲಿಯ ಎಲ್ಲಶಾಸಕರು ಹೆಸರಿಗೆ ಮಾತ್ರ ತಾಲೂಕಿನವರು. ಇವರು ವಾಸಿಸುವುದು ತಮ್ಮ ಕುಟುಂಬದ ಪರಿವಾರದೂಂದಿಗೆ ಬೆಂಗಳೂರಿನಲ್ಲಿಯೇ ಇದ್ದು ಆಡಳಿತವನ್ನು ನಡೆಸುವರು ಈ ಭಾಗದ ಜನಪ್ರತಿನಿಧಿಗಳು. ಇವರಿಗೆ ಸರಕಾರದಿಂದ ನಿವೇಶನಗಳನ್ನು ಬೆಂಗಳೂರಿನಲ್ಲಿ ನೀಡುವುದರಿಂದ ಇವರು ತಮ್ಮ ಅಧಿಕಾರವಧಿಯಲ್ಲಿ ಸುಸಜ್ಜಿತ ಮನೆಗಳನ್ನು ಕಟ್ಟಿಕೂಂಡು ವಾಸಿಸುತ್ತಿರುವುದರಿಂದ ಅವರು ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಗಮನವನ್ನು ನೀಡುತ್ತಿಲ್ಲಾ. ಈ ಭಾಗದ ಜನಪ್ರತಿನಿಧಿಗಳು ಈ ನಮ್ಮ ಉತ್ತರ ಕರ್ನಾಟಕ ಭಾಗವನ್ನು ಕೇವಲವಾಗಿ ನೋಡುತ್ತಿದ್ದಾರೆ. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಆಗಲೇಬೇಕು ಇದರಿಂದ ಇಲ್ಲಿ ಉದ್ದಿಮೆಗಳು, ವ್ಯಾಪಾರ ವಹಿವಾಟುಗಳು ನಡೆದು ನೀವು ನಿರುದ್ಯೋಗಿ ತನದಿಂದ ದೂರವಾಗಿ ಸ್ವತಂತ್ರ್ಯ ಬದುಕು ಬಾಳಬಹುದು ಇಲ್ಲವಾದಲ್ಲಿ ನೀವು ಸರಕಾರಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಅವರು ತಂಗಬೇಕಾಗುತ್ತದೆ. ಇದರಿಂದ ತಾವು ತಮ್ಮ ಪಾಲಕರೂಂದಿಗೆ ದೂರವಾಗುತ್ತಿರಿ ಹಾಗೂ ನಿಮ್ಮ ಕಲೆ, ಸಂಸ್ಕøತಿ ಹಾಗೂ ಸಂಬಂಧಿ ಇವುಗಳಿಂದ ವಂಚಿತರಾಗುತ್ತಿರಿ ಜಾಗೃತರಾಗಿ ಹೋರಟಕ್ಕೆ ಮುಂದಾಗಿರಿ ಯುವಶಕ್ತಿಯನ್ನು ತಡೆಯುವ ಶಕ್ತಿಯು ಯಾರಲ್ಲಿಯು ಇಲ್ಲಾ.

[highlight] ನಾವು ಪ್ರತ್ಯೇಕ ರಾಜ್ಯವನ್ನು ಕೇಳಲು ಹಲವಾರು ಕಾರಣಗಳಿವೆ ಅದರಲ್ಲಿ ಮುಖ್ಯವಾದವುಗಳೆಂದರೆ. ರಾಜಕೀಯವಾಗಿ ನೋಡಿದಾಗ ನಾಮನಿರ್ದೇಶಿತ ವಿಧಾನಪರಿಷತ ಸದಸ್ಯರನ್ನು ನೇಮಕ ಮಾಡುವಾಗಲೂ ಕೂಡಾ ದಕ್ಷಿಣ ಕರ್ನಾಟಕದವರೆಗೆ ಹೆಚ್ಚಿನ ಪ್ರಾಶಸ್ತ್ಯವನ್ನೂ ಕೊಡಲಾಗುತ್ತದೆ.* ಈ ಭಾಗದ ನದಿಯ ನೀರಿನ ಯೋಜನೆಗಳಾದ ಮಾಹಾದಾಯಿ, ಮಲಪ್ರಭಾ, ಘಟಪ್ರಭಾ, ಯೋಜನೆಗಳು ಅನೇಕ ವರ್ಷ ಕಳೆದರು ಕೂಡಾ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲಾ.* ಸರಕಾರಿ ನೌಕರರ ನೇಮಕಾತಿಯನ್ನು ಮಾಡೂವಾಗಲೂ ದಕ್ಷಿಣ ಕರ್ನಾಟಕದವರೆಗೆ ಮೊದಲ ಪ್ರಾಶಸ್ಯ್ತೆ.

ಮುಖ್ಯಮಂತ್ರಿಗಳು ಎತ್ತಿನ ಹೊಳೆ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ತೋರಿಸದಂತಹ ಇಚ್ಚಾಶಕ್ತಿ ಈ ನಮ್ಮ ಭಾಗದ ಯೋಜನೆಗಳಿಗೆ ತೋರಿಸುತ್ತಿಲ್ಲಾ ಈ ಭಾಗವನ್ನು ಅಭಿವೃಧ್ದಿಯ ವಿಷಯದಲ್ಲಿ ಸಂಪೂರ್ಣವಾಗಿ ನೀರ್ಲಕ್ಷಿಸಿದ್ದಾರೆ. ದಕ್ಷಿಣ ಕರ್ನಾಟಕದವರಿಗೆ ಕೊಡುವಷ್ಟು ಅನುದಾನ ಈ ಭಾಗಕ್ಕೆ ನೋಡುವುದಿಲ್ಲಾ ಒಟ್ಟಾರೆಯಾಗಿ ಒಂದು ಕಣ್ಣಿನ ಬೆಣ್ಣೆ ಒಂದು ಕಣ್ಣಿಗೆ ಸಣ್ಣ ಎನ್ನುವಂತೆ ಈ ಭಾಗಕ್ಕೆ ಸುಣ್ಣವೆ ಗತಿಯಾಗಿದೆ.

ಕಳೆದ ಮೂರು ವರ್ಷಗಳಿಂದ ನಮಗೆಲ್ಲಾ ಅನ್ನವನ್ನು ಹಾಕುವಂತಹ ಅನ್ನದಾತನೂಂದಿಗೆ ಈ ಪ್ರಕೃತಿಯು ಒಂದಲ್ಲಾ ಒಂದು ರೀತಿಯ ಆಟವನ್ನು ಆಡುತ್ತಿದೆ. ಅಂತಹದರಲ್ಲಿ ಈ ವರ್ಷ ಬೀಕರ ಬರಗಾಲ ಇದರಿಂದ ಬಿತ್ತಿದ ಕಾಳು ಬರದಂತಹ ಪರಿಸ್ಥಿತಿ. ಇಷ್ಟೇಲ್ಲಾ ನೋವನ್ನು ಮನದಾಳದಲ್ಲಿಟ್ಟುಕೂಂಡು ಕಳೆದ ದಿನಗಳಿಂದ ವ್ಯರ್ಥವಾಗಿ ಗೋವಾ ರಾಜ್ಯದ ಮಾಂಡೋವಿ ನದಿಯನ್ನು ಸೇರತ್ತ್ತಿರುವಂತಹ ಮಹಾದಾಯಿ ನದಿಯ ನೀರನ್ನು ಕೂಎಇ ಅಂತ ಕೇಳಿದರೆ ಇಲ್ಲಸಲ್ಲದ ಉತ್ತರವನ್ನು ನೀಡುತ್ತಿರುವ ಸರಕಾರಗಳ ಬಗ್ಗೆ ಏನೆನ್ನಬೇಕು.

ಮಹಾದಾಯಿ ಆ ನದಿ ಹುಟ್ಟಿದ್ದು ಮಾತ್ರ ನಮ್ಮ ರಾಜ್ಯದಲ್ಲಿ ಆ ನದಿಯಲ್ಲಿ ಬರುವಂತಹ ನಮ್ಮ ಪಾಲಿನ 45 ಟಿ.ಎಮ್.ಸಿ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಕೆ ಮಾಡಲು ಕೂಡಿ ರೈತರು ಅಂತಾ ಶಾಂತ ರೀತಿಯ ಹೋರಾಟವನ್ನು ಮಾಡುತ್ತಿದ್ದರು ಕೂಡಾ ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಲ್ಲಿಯವರೆಗೆ ಸರಿಯಾಗಿ ಸ್ಪಂದಿಸಿಲ್ಲವೆಂದರೆ ಇವತ್ತು ಆಡಳಿತ ಸರಕಾರಗಳು ಏಕಿರಬೇಕು ಎಂಬ ಪ್ರಶ್ನೇ ಮನದಲ್ಲಿ ಕಾಡುವುದು. ಕೇವಲ ಕುಡಿಯಲು ನೀರು ಕೂಡದಂತಹ ಸರಕಾರಗಳು ಮುಂದೂಂದು ದಿನ ಆಹಾಕಾರವೆದ್ದು ಆಹಾರವನ್ನೇನಾದರು ಕೇಳಿದರೆ ಕೂಡುವರೆ? ಇಂದು ಇಡಿ ಮನುಕುಲವನ್ನು ಸಾಕುತ್ತಿರುವಂತಹ ನೆಗಿಲಯೊಗಿಗೆ ಮಳೆರಾಯ ಬಾರದ ಕಾರಣ ಭೂಮಿತಾಯಿ ಒಡಲಿನಲ್ಲಿ ಬಿತ್ತಿದಂತಹ ಕಾಳು ಮೂಳಕೆ ಒಡೆಯದಂತಹ ಸ್ಥಿತಿ ನಿರ್ಮಾನವಾಗಿ ಮಾಡಿದ ಸಾಲ ಮೈಮೇಲೆರಗಿ ಆತ್ಮಹತ್ಯೆಯನ್ನು ಮಾಡಿಕೂಳ್ಳುವಂತಹ ಪರಿಸ್ಥಿತಿ ಬಂದಿದೆ.

ಈ ರೈತಕುಲಕ್ಕೆ ಹಲವಾರು ರೀತಿಯ ತೂಂದರೆಗಳು, ತಾಪತ್ರೆಯಗಳು ಬರುತ್ತಿರುತ್ತವೆ. ತಾನು ತನ್ನದೆನ್ನುವುದನ್ನು ಬಿಟ್ಟು ಹಗಲಿರುಳು ಮಣ್ಣಿನ ಮಗನಾಗಿ ಚಳಿ ಮಳೆಯನ್ನದೆ ದುಡಿದರು ಕೂಡಾ ಲಾಭವೆನ್ನುವುದು ಮರಿಚಿಕೆಯಾಗಿ ಉಳಿದಿದೆ. ಇಂದು ರಾಜ್ಯ ಸರಕಾರ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಂತಾ ಮಲತಾಯಿಯ ಧೋರಣೆಯನ್ನು ತೋರುತ್ತಿದೆ.
ಅಭಿವೃದ್ದಿ ವಿಷಯ ಬಂದಾಗಲೂ ಸರಕಾರಗಳು ಕೂಡಾ ಉತ್ತರ ಕರ್ನಾಟಕದ ಕುರಿತು ತಾರತಮ್ಯ ತೋರುತ್ತಿವೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಲತಾಯಿ ಧೋರಣೆಗೆ ಉತ್ತರ ಕರ್ನಾಟಕ ಒಳಪಡುತ್ತಿದೆ. ಕೇವಲ 6 ತಿಂಗಳ ಯೋಜನೆ ಮೇಕೆದಾಟುಗಾಗಿ ಮಾನ್ಯ ಮುಖ್ಯಮಂತ್ರಿಗಳು ತರಾತುರಿಯಲ್ಲಿ ಸರ್ವಪಕ್ಷದ ನಿಯೋಗವನ್ನು ದೆಹಲಿಗೆ ಒಯ್ದು ಈ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಹಣ ತಂದರು ಆದರೆ ಕಳೆದ ನಾಲ್ಕು ದಶಕಗಳಿಂದ ನವಲಗುಂದ – ನರಗುಂದದ ರೈತರು ಮಹಾದಾಯಿ ಹಾಗೂ ಕಳಸಾ ಬಂಡೂರಿಯನ್ನು ಮಲಪ್ರಭೆಗೆ ಜೋಡಿಸಿ ಅಂತಾ ಹೋರಾಟ ಮಾಡುತ್ತಿದ್ದರು ಇವತ್ತಿನವರೆಗೂ ಯಾವ ಸರಕಾರಗಳು ಕೂಡಾ ಯೋಜನೆ ಅನುಷ್ಠಾನ ಮಾಡಿಲ್ಲಾ.

ಈ ಯೋಜನೆಯ ಕುರಿತು ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲಾ. ಇಂದು ಬರಗಾಲ ಬಿದ್ದಿದೆ. ರೈತರು ಸಾಲ ಮಾಡಿ ಬಿತ್ತಿದ ಕಾಳು ಕೂಡಾ ಬರದೇ ಕಂಗಾಲಾಗಿ ಹೋಗಿದ್ದಾರೆ. ಮಾಡಿದ ಸಾಲ ದ್ವಿಗುಣವಾಗಿ ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಪ್ರಜಾಪ್ರಭುತ್ವದಲ್ಲಿ ನೀರಿಗಾಗಿ ಹೋರಾಟ ಮಾಡುತ್ತಿರುವುದು ಒಂದು ದುರಂತವಾಗಿದೆ. ಈ ಭಾಗದ ಜನರು ಮುಂದುವರೆಯಬಾರದು. ಅಭಿವೃದ್ದಿ ಹೊಂದಬಾರದು ಎಂಬ ಅಭಿಪ್ರಾಯ ದಕ್ಷಿಣ ಕರ್ನಾಟಕದ್ದು. ನಮ್ಮ ಈ ಭಾಗದ ಹೋರಾಟಕ್ಕೆ ಗೋವಾ, ಮಹಾರಾಷ್ಟ್ರ ಸರಕಾರ ವಿರೋಧ ವ್ಯಕ್ತಪಡಿಸುತ್ತಿವೆ ಅನ್ನುವದಕ್ಕಿಂತ ನಮ್ಮ ರಾಜ್ಯದವರೇ ಆದ ದಕ್ಷಿಣ ಕರ್ನಾಟಕದವರು ಸಹಕರಿಸದಿರುವುದು ಬೇಸರ ತರಿಸಿದೆ.

ಹುಬ್ಬಳ್ಳಿಗೆ ಸೊಲ್ಲಾಪುರನ್ನು ವಾಣಿಜ್ಯಕ್ಕೆ ಹೋಲಿಸಿದರೆ ಹುಬ್ಬಳ್ಳಿಯ ಅರ್ಧಭಾಗ ಕೂಡಾ ಸೊಲ್ಲಾಪುರ ಆಗುವುದಿಲ್ಲಾ ಆದರೆ ಅಲ್ಲಿ ಸುಮಾರು 80 ಕಿ.ಮೀ. ದಿಂದ ಉಜ್ಜನಿ ಡ್ಯಾಮಿನಿಂದ ನೀರು ಹರಿಸಿ ಕೈಗಾರಿಕೆ ಮತ್ತು ರೈತರಿಗೆ ಅನುಕೂಲ ಮಾಡಿದೆ. ಸುಮಾರು 30 ವರ್ಷಗಳ ಹಿಂದೆ ಈ ಯೋಜನೆಗೆ 80 ಕೋಟಿ ಖರ್ಚು ಆಗಿದೆ. ಆದರೆ ಮಲಪ್ರಭೆಗೆ ಮಹದಾಯಿ ಜೋಡಿಸಿದರೆ ಉತ್ತರ ಕರ್ನಾಟಕ ಸಂಪೂರ್ಣ ಕೃಷಿ ಕ್ಷೇತ್ರವಾಗುತ್ತದೆ ಎಂದು ಎಷ್ಟೇ ಚಳುವಳಿ ಮಾಡಿದರು ನಮ್ಮ ಬೇಡಿಕೆ ಇಲ್ಲಿಯವರೆಗೆ ಈಡೇರಿಲ್ಲಾ.ಸದ್ಯ ಈ ಭಾಗದಲ್ಲಿ ಎಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲಾ ಬರಗಾಲದ ಛಾಯೇ ಸಂಪೂರ್ಣ ಆವರಿಸಿದೆ.

ಈ ಹಿಂದೆ ಎಸ್.ಎಮ್. ಕೃಷ್ಣ ಸರಕಾರದಲ್ಲಿ ನೀರಾವರಿ ಮಂತ್ರಿಗಳಾಗಿದ್ದ ಎಚ್.ಕೆ. ಪಾಟೀಲರು ಈ ಮಹಾದಾಯಿ ನದಿಯನ್ನು ಮಲಪ್ರಭೆಗೆ ಜೋಡಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ಅಂದಿನ ಸರಕಾರ ರಾತ್ರೋ ರಾತ್ರಿಯಲ್ಲಿ ಅವರ ಖಾತೆಯನ್ನ ಬದಲಿ ಮಾಡಿ ಈ ಯೋಜನೆಯನ್ನು ನಿಲ್ಲಿಸಿಬಿಟ್ಟಿತು. ರಾಜಕೀಯ ನಾಯಕರು ಕೂಡಾ ತಾರತಮ್ಯ ಬರುವಂತೆ ಮಾಡಿ ಇಂತಹ ಅನೇಕ ಯೋಜನೆ ನೆನೆಗುದಿಗೆ ಬೀಳುವಂತೆ ಮಾಡುತ್ತಿದ್ದಾರೆ ಕಾರಣ ಪ್ರತ್ಯೇಕ ರಾಜ್ಯಕ್ಕಾಗಿ ಈ ಭಾಗದ ಕವಿಗಳು, ಸಂಘ-ಸಂಸ್ಥೆಗಳು ಒಟ್ಟಾರೆ ಎಲ್ಲರೂ ಒಂದೇ ವೇದಿಕೆಯ ಮೇಲೆ ಹೋರಾಟ ಮಾಡಿದರೆ ನಮ್ಮ ಎಲ್ಲ ರಂಗದವರಿಗೆ ಸ್ಥಾನ-ಮಾನ ಸಿಗುತ್ತದೆ. ಇಲ್ಲವಾದಲ್ಲಿ ಹೀಗೆಯೇ ಎಷ್ಟೇ ವರ್ಷ ಹೋರಾಟ ಮಾಡಿದರು ನಮಗೆ ನ್ಯಾಯ ಸಿಗುವುದಿಲ್ಲಾ.

01-ಟಿvಟ-01

loading...

LEAVE A REPLY

Please enter your comment!
Please enter your name here