ವಿಜೃಂಭಣೆಯಿಂದ ಜರುಗಿದ ಶ್ರೀ ವೀರಭದ್ರೇಶ್ವರ ಜಾತ್ರೋತ್ವವ

0
85

01Dandeli1ದಾಂಡೇಲಿ ,2: ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ ಕಾರ್ಯಕ್ರಮವು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ, ವೀರಶೈವ ಸಮಾಜ ಬಾಂಧವರು ಮತ್ತು ನಗರದ ನಾಗರೀಕರ ಸಹಕಾರದಿಂದ ಎರಡು ದಿನಗಳವರೆಗೆ ವಿಜೃಂಭಣೆಯಿಂದ ಜರುಗಿತು.

ನ:30 ರಂದು ಪ್ರಾರಂಭಗೊಂಡ ಜಾತ್ರೋತ್ಸವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳ ಜೊತೆಗೆ ನಗರದ ಬಸವೇಶ್ವರ ಭಜನಾ ಮಂಡಳಿಯವರಿಂದ ರಾತ್ರಿ 9.30 ಘಂಟೆಯಿಂದ ಅಖಂಡ ಭಜನಾ ಕಾರ್ಯಕ್ರಮವು ನಡೆಯಿತು. ಡಿ:01 ರಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕಿ ಮಹೋತ್ಸವವು ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಜನಾಕರ್ಷಿಸಿದ ಪವಾಡ : ಪಲ್ಲಕಿ ಉತ್ಸವ ಪುನ: ದೇವಸ್ಥಾನಕ್ಕೆ ತಲುಪಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರುತ್ತಿದ್ದಂತೆಯೆ ಶ್ರೀ ವೀರಭದ್ರೇಶ್ವರ ದೇವರ ಭಕ್ತರು ಶಸ್ತ್ರ ಪವಾಡಗಳನ್ನು ಮಾಡಿ ಭಕ್ತಿಯ ಪರಾಕಷ್ಟೆಯನ್ನು ಮೆರೆದರು. ಕೆಲ ಭಕ್ತರು ನಾಲಗೆಗೆ ಹಾಗೂ ಕೆನ್ನೆಗೆ ಶಸ್ರ್ತ ಚುಚ್ಚಿಸಿಕೊಂಡರೆ, ಒರ್ವ ಹಿರಿಯ ಭಕ್ತರೊಬ್ಬರು ಶಸ್ತ್ರವನ್ನು ಕೆನ್ನೆಗೆ ಚುಚ್ಚಿಸಿ ಅದರ ಜೊತೆಗೆ ಬಹಳ ಉದ್ದದ ದಾರವನ್ನು ಎಳೆದುಕೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದರಲ್ಲದೇ, ನೆರೆದಿದ್ದ ಭಕ್ರರನ್ನು ರೋಮಾಂಚನಗೊಳಿಸಿದರು.

ಅಗ್ನಿಕುಂಡ ಪ್ರವೇಶ : ಶಸ್ತ್ರ ಪವಾಡ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೆ ದೇವಸ್ಥಾನದ ಮುಂಭಾಗದಲ್ಲಿ ಸಿದ್ದಪಡಿಸಲಾಗಿದ್ದ ಅಗ್ನಿಕುಂಡಕ್ಕೆ ಪ್ರವೇಶ ಮಾಡುವ ಕಾರ್ಯಕ್ರವು ಜರುಗಿತು. ಅಗ್ನಿಕುಂಡದಲ್ಲಿ ನೂರಾರು ಭಕ್ತರು ನಡೆದು ಶ್ರೀ ದೇವರ ಕೃಪೆಗೆ ಪಾತ್ರರಾದರು.

ಈ ಎಲ್ಲಾ ಕಾರ್ಯಕ್ರಮಗಳ ಬಳಿಕ ಮಹಾಪೂಜೆ ನಡೆದು ಆಗಮಿಸಿದ್ದ ಭಕ್ತಾಭಿಮಾನಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಹತ್ತು ಸಾವಿರಕ್ಕು ಅಧಿಕ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ಸ್ವಾಮಿಯ ಪ್ರಸಾಧ ಸ್ವೀಕರಿಸಿದರು. ಜಾತ್ರೋತ್ಸವದ ಯಶಸ್ಸಿಗೆ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ, ಶ್ರೀ ವೀರಭದ್ರೇಶ್ವರ ಯುವಕ ಮಂಡಳ, ಶ್ರೀ ವೀರಶೈವ ಸೇವಾ ಸಮಿತಿ ಮೃತ್ಯುಂಜಯ ಮಠ, ಅಕ್ಕನ ಬಳಗ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಶ್ರೀ ಉಳವಿ ಚೆನ್ನಬಸವೇಶ್ವರ ಯುವಕ ಮಂಡಳ ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.

loading...

LEAVE A REPLY

Please enter your comment!
Please enter your name here