‘ನಂಬಿಕೆ ಇರಲಿ, ಮೂಢ ನಂಬಿಕೆ ಬೇಡ’

0
96

jagruti
ವಿಜಯಪುರ : ಗೊಡ್ಡು ಮೌಢ್ಯಗಳನ್ನು ಆಚರಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಪ್ರಗತಿಪರ ಚಿಂತಕರು, ಮಠಾಧೀಶರು ನಿರಂತರವಾಗಿ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈಗ ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಬುರಾಣಪೂರದ ಯೋಗೇಶ್ವರಿ ಮಾತಾಜಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ ಸಭಾಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮೂಢ ನಂಬಿಕೆಯ ಜನಜಾಗೃತಿ ಜಾಥಾ ಕುರಿತ ಚಿಂತನಾ ಗೋಷ್ಠಿ ಕಾಯ್ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾನವತಾ ಪ್ರಶಸ್ತಿ ಪುರಸ್ಕøತ ಹಾಸಿಂಪೀರ ವಾಲಿಕಾರ ಮಾತನಾಡಿ, ನಂಬಿಕೆ ಇರಬೇಕು ಆದರೆ ಮೂಢ ನಂಬಿಕೆ ಬೇಡ, ಜನರು ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಬೇಕು ಎಂದರು.
ನಳಂದಾ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಮೀನಾಕ್ಷಿ ಉಟಗಿ ಮಾತನಾಡಿ, ಗಂಡ ಸತ್ತಾಗ ಕುಂಕುಮ ಬಳೆ ತೆಗೆಯುವುದು ಯಾವ ನ್ಯಾಯ? ಇದರಿಂದ ಮಹಿಳೆಯ ಶೋಷಣೆ ನಡೆಯುತ್ತಿದೆ. ವಿಧವೆಯರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮೂಢ ನಂಬಿಕೆಗಳ ನೆಪಹೇಳಿ ವಿಧವೆಯರಿಗೆ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಗಳಲ್ಲಿ ವಂಚಿತರಾಗಿ ಮಾಡುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.
ರೈತ ಮುಖಂಡ, ಹೋರಾಟಗಾರ ಭೀಮಶಿ ಕಲಾದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೆಡಿನಾ ಸಂಸ್ಥೆಯ ಸಂಯೋಜಕ ಪ್ರಭುಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಕಾಶ ಕುಂಬಾರ, ಶೇಷರಾವ ಮಾನೆ, ಸಾಯಿಬಣ್ಣ ಮಡಿವಾಳರ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿದರು.
ವೇದಿಕೆ ಮೇಲೆ ದಿಲಾವರ ಖಾಜಿ, ಚಂದ್ರಶೇಖರ ಗೊಬ್ಬೂರ, ಶರಣು ಸಬರದ, ವಿಜಯಕುಮಾರ ಘಾಟಗೆ, ಇರ್ಫಾನ ಶೇಖ, ಸಿದ್ದು ರಾಯಣ್ಣವರ, ಎಸ್.ಎನ್. ಬುರ್ಲಿ, ಸುರೇಶ ಭಾವಿಮನಿ, ದಯಾನಂದ ಲಚ್ಚಾಣ, ಮಲ್ಲಿಕಾರ್ಜುನ ಬಟಗಿ, ಮೀನಾಕ್ಷಿ ಕೋರಿ ಉಪಸ್ಥಿತರಿದ್ದರು.
ಡಾ. ಆರ್ ಸುನಂದಮ್ಮ, ಶಿವರಾಜ ಈರಗೊಂಡ, ಅಬ್ದುಲಸುಕುರ ಇನಾಮದಾರ, ಜಹಾಂಗೀರ ಮಿರ್ಜಿ, ಬಶೀರ ಮಕಾನದಾರ, ರಿಯಾನಾ ಮಕಾನದಾರ, ಸುಲೋಚನಾ ಡಿಸೋಜಾ, ವಿರೇಶ ಮೇಟಿ, ಅಲ್ತಾಫ ಯಕ್ಕುಂಡಿ, ಎಸ್.ಸಿ. ಮುಲ್ಲಾ, ಡಾ. ರಹೆಮಾನಿ, ಡಾ. ಪರವೀನ ಶೇಖ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಬಿ.ಎಸ್. ಕಾಂಬಳೆ, ಎಸ್.ಎನ್. ಬುರ್ಲಿ ಅವರು ಪವಾಡ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಾಲಪ್ರತಿಭೆ ಅದ್ವಿತಾ ಬಡಿಗೇರ ಮೂಢ ನಂಬಿಕೆ ಕುರಿತು ಮಾತನಾಡಿದರು.

loading...

LEAVE A REPLY

Please enter your comment!
Please enter your name here