ಕುಂದಗೋಳದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ

0
57

3kdl-01ಕುಂದಗೋಳ,3:ಅಂಗವಿಕಲರಿಗೆ ವಿಷೇಶವಾದ ಸ್ಥಾನಮಾನವಿದೆ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವದು ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರೀಕರ ಆದ್ಯಕರ್ತವ್ಯವಾಗಿದೆ ಎಂದು ಇಲ್ಲಿಯ ಜೆ.ಎಂ.ಎಫ್.ಸಿ ಕಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ವಿಘ್ನೇಶಕುಮಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಉರ್ದುಶಾಲೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮೀತಿ ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರಕ್ಷಕ ಇಲಾಖೆಗಳ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಕಲಚೇತನೆಯನ್ನು ಹೊಂದಿದವರು ನಮಗೆ ಅಂಗವೈಕಲ್ಯ ಇದೇ ಎಂಬ ಮಾನಸಿಕ ಭಾವನೆಯನ್ನು ಮನಸ್ಸಿಲ್ಲಿ ಅಳವಡಿಸಿಕೊಳ್ಳದೇ ಇತರರಂತೆ ಆತ್ಮಸ್ಥೈರ್ಯದಿಂದ ಸಮಾಜದ ವಿವಿದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗಿ ತಮ್ಮ ಹಕ್ಕು ಬಾದ್ಯತೆಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಿರೂಪಿಸಿಕೊಳ್ಳುವಂತೆ ಕರೆನೀಡಿದರು.

ಅಧಕ್ಷತೆಯನ್ನು ವಕೀಲರ ಸಂಘದ ಅದ್ಯಕ್ಷ ಜಿ.ವೈ.ದೇವರಮನಿ ವಹಿಸಿದ್ದರು.ಅಂಗವಿಕಲತೆಯ ಕುರಿತು ಶ್ರೀಮತಿ ಎಸ್.ಎನ್.ಹೂಗಾರ ಹಾಗೂ ಜಿ.ಬಿ.ಸೊರಟೂರ ಉಪನ್ಯಾಸವನ್ನು ನೀಡಿದರು. ಮುಖ್ಯತಿಥಿಗಳಾಗಿ ಸರ್ಕಾರಿ ಅಭಿಯೋಜಕ ಎಂ.ಐ.ಗಡಾದ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಮಂಗಳಾ ಪಾಟೀಲ್, ಸಮನ್ವಯಧಿಕಾರಿ ಶಾಂತಾ ಮೀಸೆ, ಶಿಕ್ಷಕಿ, ಶಾಂತಾ ಹೂಗಾರ, ನ್ಯಾಯವಾದಿಗಳಾದ ಎಸ್.ಎಸ್.ಪಾಟೀಲ್, ಎ.ಆರ್.ಕುಲಕರ್ಣಿ, ರಮೇಶ ಕಮತದ, ನಾರಾಯಣ ಹಂಚಾಟಿ, ಎಂ.ಎಂ.ಗೂಡವಾಲಾ, ಎಸ್.ಎಂ.ದೊಡಮನಿ, ಡಿ.ಸಿ.ಶ್ಯಾನವಾಡ, ಎಂ.ಟಿ.ರಾಠೋಡ,ಎಂ.ಎಸ್.ಚಕ್ರಸಾಲಿ ಮುಂತಾದವರು ಮುಂತಾದವರು ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here