ರಾಜ್ಯಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿ: ವಿಜಯಪುರ ಕ್ರೀಡಾ ಶಾಲೆಯ ಕ್ರೀಡಾಪಟುಗಳು ಪ್ರಥಮ

0
70

ayke
ವಿಜಯಪುರ : ಕರ್ನಾಟಕ ರಾಜ್ಯ ಬಾಸ್ಕೆಟಬಾಲ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಕಳೆದ ನವ್ಹೆಂಬರ 19 ರಿಂದ 26 ರವರೆಗೆ ನಡೆದ 13 ವಯೋಮಿತಿಯ ರಾಜ್ಯ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ವಿಜಯಪುರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕ್ರೀಡಾ ಶಾಲೆಯ ಬಾಸ್ಕೆಟ್‍ಬಾಲ್ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಐತಿಹಾಸಿಕ ಗೆಲವು ಸಾಧಿಸಿ ಪ್ರಥಮ ಸ್ಥಾನ ಪಡೆದ ತಂಡದ 5 ಜನ ಬಾಲಕಿಯರು ಹಾಗೂ ಓರ್ವ ಬಾಲಕ ಕ್ರೀಡಾಪಟುಗಳು ರಾಜ್ಯ ತಂಡದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಈ ಕ್ರೀಡಾಪಟುಗಳನ್ನು ಜಿಲ್ಲಾಧಿಕಾರಿ ಡಿ.ರಂದೀಪ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಬಿ.ಉಪಾಸೆ, ತರಬೇತಿದಾರ ಕೆ.ಎ.ಆಕಾಶಿ ಅವರು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here